40 ವಕೀಲರ ಮೇಲೆ ಸುಳ್ಳು ಎಫ್‌ಐಆರ್: ಪಿಎಸ್ಐ ಸಸ್ಪೆಂಡ್ ಮಾಡುವಂತೆ ನ್ಯಾಯವಾದಿಗಳ ಪ್ರತಿಭಟನೆ!
ನ್ಯಾಯವಾದಿಗಳೇ ನ್ಯಾಯಕ್ಕಾಗಿ ಬೀದಿಗಳಿದು ಪ್ರತಿಭಟನೆ, ಬೇಕೆ ಬೇಕು ನ್ಯಾಯ ಬೇಕು,ನ್ಯಾಯಕ್ಕಾಗಿ ಹೋರಾಟ ಅಂತಾ ಸ್ಲೋಗನ್ ಕೂಗಿದ ವಕೀಲರು, ಸುಳ್ಳು ಎಫ್ ಐಆರ್ ಹಾಕಿರೋ ಪಿಎಸ್ ಐ ಸಸ್ಪೆಂಡ್ ಮಾಡುವಂತೆ ಅಗ್ರಹಿಸಿ ಬೀದಿಗಳಿದು ಇಂದು ಪ್ರತಿಭಟನೆ ನಡೆಸಿದರು.
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ
ರಾಮನಗರ (ಫೆ.19): ನ್ಯಾಯವಾದಿಗಳೇ ನ್ಯಾಯಕ್ಕಾಗಿ ಬೀದಿಗಳಿದು ಪ್ರತಿಭಟನೆ, ಬೇಕೆ ಬೇಕು ನ್ಯಾಯ ಬೇಕು,ನ್ಯಾಯಕ್ಕಾಗಿ ಹೋರಾಟ ಅಂತಾ ಸ್ಲೋಗನ್ ಕೂಗಿದ ವಕೀಲರು, ಸುಳ್ಳು ಎಫ್ ಐಆರ್ ಹಾಕಿರೋ ಪಿಎಸ್ ಐ ಸಸ್ಪೆಂಡ್ ಮಾಡುವಂತೆ ಅಗ್ರಹಿಸಿ ಬೀದಿಗಳಿದು ಇಂದು ಪ್ರತಿಭಟನೆ ನಡೆಸಿದರು.
ಕ್ರಮ ಕೈಗೊಳ್ಳದೇ ಇದ್ರೆ ಆಹೋರಾತ್ರಿ ಧರಣಿ: ಹೌದು, ವಕೀಲರ ಮೇಲೆ ಸುಳ್ಳು ಎಫ್ ಐಆರ್ ದಾಖಲು ಮಾಡಿದ್ದಾರೆ. ಎಫ್ ಐ ಆರ್ ದಾಖಲು ಮಾಡಿದ ಐಜೂರು ಪಿಎಸ್ ಐ ಸೈಯದ್ ತನ್ವೀರ್ ಹುಸೇನ್ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಕಳೆದ ಒಂದು ವಾರದಿಂದ ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂಬಂಧ ಎಸ್ಪಿ ಹಾಗೂ ಡಿಸಿ ಗೆ ಮನವಿ ಕೂಡ ಮಾಡಿದ್ರೂ, ಯಾವುದೇ ಮನವಿಗೂ ಸ್ಪಂದಿಸಿದ ಅಧಿಕಾರಿಗಳ ವಿರುದ್ದ ಇಂದು ವಕೀಲರು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಕೊಟ್ಟ ಭರವಸೆಗಳ ಕಾನೂನು ಚೌಕಟ್ಟಿನಲ್ಲೇ ಈಡೇರಿಸಿದೆ: ಎಂ.ಪಿ.ರೇಣುಕಾಚಾರ್ಯ
ಇಂದು ನಡೆದ ರಾಮನಗರ ಜಿಲ್ಲಾ ವಕೀಲರ ಸಂಘದ ಪ್ರತಿಭಟನೆಗೆ ರಾಜ್ಯದ 190 ವಿವಿಧ ವಕೀಲ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು, ಬೆಳಿಗ್ಗೆ 11 ಘಂಟೆಗೆ ನ್ಯಾಯಾಲಯದ ಆವರಣದಲ್ಲಿ ಬೃಹತ್ ಸಮಾವೇಶ ನಡೆಸಿ, ಜಿಲ್ಲಾಧಿಕಾರಿ ಕಛೇರಿ ವರೆಗೂ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದರು. ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪಿಎಸ್ ಐ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ವಕೀಲರು ಭಾಗವಹಿಸಿದ್ದರು.ಈ ವೇಳೆ ವಕೀಲ ಪರಿಷತ್ ಅಧ್ಯಕ್ಷ ವಿಶಾಲ್ ರಘು ಮಾತನಾಡಿ, ನಾವು ಕಳೆದ ಒಂದು ವಾರದಿಂದ ನ್ಯಾಯಯುತವಾಗಿ ಪ್ರತಿಭಟನೆ ಮಾಡಿದ್ದೇವೆ.
ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಾಮೇಷಾ ಏಣಿಸುತ್ತಿದ್ದಾರೆ. ಪೋಲಿಸ್ ಅಧಿಕಾರಗಳು ರಾಜಕೀಯ ನಾಯಕರ ಕೈಗೊಂಬೆಯಾಗಿ ಕುಣಿಯುತ್ತಿದ್ದಾರೆ. ಮೊದಲು ಪಿಎಸ್ ಐ ಸಸ್ಪೆಂಡ್ ಮಾಡಿ ನೀವು ಮುಂದಿನ ತನಿಖೆ ನಡೆಸಿ. ಅಲ್ಲಿವರೆಗೂ ಪಿಎಸ್ ಐ ಸಸ್ಪೆಂಡ್ ಮಾಡಬೇಕು. ಇಲ್ಲವಾದಲ್ಲಿ ಇಂದಿನಿಂದ ಜಿಲ್ಲಾಧಿಕಾರಿ ಕಛೇರಿ ಬಳಿ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನೂ ವಕೀಲರ ಸಮಸ್ಯೆ ಆಲಿಸಲು ಮುಂದಾದ ಜಿಲ್ಲಾಧಿಕಾರಿ, ಹಾಗೂ ಎಸ್ಪಿ ಇಬ್ಬರು ವಕೀಲರ ಮನವೊಲಿಸಲು ಮುಂದಾಗಿದ್ದರು. ಈ ವೇಳೆ ಮಾತನಾಡಿದ ಎಸ್ಪಿ ಕಾರ್ತಿಕ್ ರೆಡ್ಡಿ, ಪಿಎಸ್ ಐ ವಿರುದ್ಧ ಇಲಾಖೆ ತನಿಖೆಗೆ ಚನ್ನಪಟ್ಟಣ ಡಿವೈಎಸ್ಪಿ ಅವರಿಗೆ ಸೂಚಿಸಲಾಗಿದೆ. ಮೂರು ದಿನದ ಒಳಗಾಗಿ ವರದಿ ನೀಡ್ತಾರೆ.
ಮಾಧ್ಯಮಗಳದ್ದು ಲೋಪದೋಷ ತಿದ್ದುವ ಕಾಯಕ: ಸಚಿವ ಮಧು ಬಂಗಾರಪ್ಪ
ವರದಿಯಲ್ಲಿ ಪಿಎಸ್ಬೈ ತಪ್ಪಿತಸ್ಥರಾಗಿ ಕಂಡು ಬಂದರೆ, ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲರು ಇಂದು ಸಂಜೆ ಒಳಗಾಗಿ ಪಿಎಸ್ ಐ ಸಸ್ಪೆಂಡ್ ಆಗಬೇಕು ಇಲ್ಲವಾದಲ್ಲಿ ರಾಜ್ಯಾಧ್ಯಂತ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ತಿಳಿಸಿದರು. ಸಂಜೆ 5 ಘಂಟೆ ಕಳೆದರೂ ಕ್ರಮ ಕೈಗೊಳ್ಳದ ಡಿಸಿ ಹಾಗೂ ಎಸ್ಪಿ ವಿರುದ್ದ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಪೋಲಿಸರು ಹಾಗೂ ವಕೀಲರ ಸಮರ ಮುಂದುವರಿದಿದ್ದು, ಪಿಎಸ್ ಐ ಸಸ್ಪೆಂಡ್ ಮಾಡಿಲ್ಲ ಅಂದ್ರೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ಇನ್ನೂ ಸರ್ಕಾರ ಕೂಡ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಾ ಎಂಬುದನ್ನ ಕಾದು ನೋಡಬೇಕಿದೆ.