ನಾಗಮಂಗಲ(ಜೂ.20): ಜಿಲ್ಲೆಯಲ್ಲಿ ಜೆಡಿಎಸ್‌ ಮೂಲದ ಕೆಲ ನಕಲಿ ಬಿಜೆಪಿಗರು ಜಿಲ್ಲೆಯ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎನ….ಚಲುವರಾಯಸ್ವಾಮಿ ವಿರುದ್ಧ ಶಾಸಕ ಸುರೇಶ್‌ ಗೌಡ ಆರೋಪಿಸಿದರು.

ಪಟ್ಟಣದ ಹೊರವಲಯದ ಎಪಿಎಂಸಿ ಮಾರುಕಟ್ಟೆಪ್ರಾಂಗಣದಲ್ಲಿ 60 ಲಕ್ಷ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲೆಯಲ್ಲಿ ನಕಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದಾರೆ. ಮಂಡ್ಯದ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಂಡು ನಡೆಸುತ್ತಿದ್ದಾರೆ. ಸಿಎಂ ಮತ್ತು ಸರ್ಕಾರದೊಂದಿಗೆ ಬಹಳ ಹತ್ತಿರವಿರುವ ವ್ಯಕ್ತಿಗಳು ಕುತಂತ್ರ ನಡೆಸಿ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ರಾಜ್ಯಾದ್ಯಂತ ಕೋವಿಡ್‌ ಕೇಂದ್ರ ಸ್ಥಾಪನೆ: ಸುಧಾಕರ್, ಇಲ್ಲಿವೆ ಫೋಟೋಸ್‌

ಜಿಲ್ಲೆಯಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ, ಡಿಸಿ, ಎಸ್ಪಿ ಯಾರ ಮಾತನ್ನು ಕೇಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಡಿಸಿ ಅಥವಾ ಎಸ್ಪಿ ಭೇಟಿ ಕೊಡುತ್ತಿರುವುದು ಹಾಲಿ ಶಾಸಕರಿಗೇ ಗೊತ್ತಾಗುತ್ತಿಲ್ಲ. ಆದರೆ ಮಾಜಿ ಶಾಸಕರಿಗೆ ಈ ಮಾಹಿತಿ ಇರುತ್ತದೆ. ಜಿಲ್ಲಾಧಿಕಾರಿಗಳು ಕ್ಷೇತ್ರಕ್ಕೆ ಬರುತ್ತಿದ್ದಾರೆ ನಿಮ್ಮ ಕೆಲಸ ಕಾರ್ಯಗಳು ಆಗುತ್ತವೆ ಎಂದು ಮಾಜಿ ಶಾಸಕರು ತಮ್ಮ ಕಾರ್ಯಕರ್ತರಿಗೆ ಹೇಳಿಹೋಗುತ್ತಾರೆಂದು ಆರೋಪಿಸಿದರು.

ವಿಧಾನಸೌಧವನ್ನೂ ಖಾಸಗಿಗೆ ವಹಿಸಲಿ

ಸುಸ್ಥಿತಿಯಲ್ಲಿರುವ ಮೈಷುರ್ಗ ಸಕ್ಕರೆ ಕಾರ್ಖಾನೆಯನ್ನು 10 ಕೋಟಿ ರು.ವೆಚ್ಚದಲ್ಲಿ ಪುನರ್‌ ಪ್ರಾರಂಭಿಸಬಹುದು. ಆದರೆ ಇದನ್ನು ಖಾಸಗೀಕರಣ ಮಾಡಲು ಹಠಕ್ಕೆ ಬಿದ್ದಿರುವುದಾದರೂ ಏಕೆ ಎಂದು ಪ್ರಶ್ನಿಸಿದ ಶಾಸಕರು, ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರು ಚೆನ್ನಾಗಿ ನಡೆಸುತ್ತಾರೆ ಎನ್ನುವುದಾದರೆ ರಾಜ್ಯದ ವಿಧಾನಸೌಧವನ್ನೂ ಸಹ ಖಾಸಗಿಯವರಿಗೆ ವಹಿಸಲಿ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದರು.

ಮೈಷುಗರ್‌ ಖಾಸಗೀಕರಣವಾದರೆ ಅದರ ಲಾಭ ಪಡೆಯಲು ನಕಲಿ ಬಿಜೆಪಿಗರು ಷಡ್ಯಂತ್ರ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳೂ ಸಹ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಜಿಲ್ಲೆಯ ರೈತರ ಅಭಿಪ್ರಾಯದಂತೆಕಾರ್ಖಾನೆಯನ್ನು ಓ ಅಂಡ… ಎಂಗೆ ವಹಿಸುವುದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಬೇಕೆಂದು ಅಲ್ಲಿನ ರೈತರು ಮತ್ತು ಷೇರುದಾರರು ನಿರ್ಧಾರ ಮಾಡಿದ್ದಾರೆ ಎಂದರು.

ಸಂಡೂರು: 4 ತಿಂಗಳ ಮಗುವನ್ನೂ ಬಿಡದ ಕ್ರೂರಿ ಕೊರೋನಾ ವೈರಸ್‌..!

ಸರ್ಕಾರಿ ಸ್ವಾಮ್ಯದಲ್ಲಿರುವ ಮೈಷುಗರ್‌ ಕಂಪನಿಯನ್ನು ಖಾಸಗಿಯವರಿಗೆ ವಹಿಸುವ ಕುರಿತು ರೈತರು ಮತ್ತು ಸರ್ವಪಕ್ಷಗಳ ಸಭೆ ಕರೆಯದೆ ಆನ್‌ ಲೈನ… ಮೂಲಕ ರೈತರ ಅಭಿಪ್ರಾಯ ಸಂಗ್ರಹಿಸುತ್ತಿರುವುದಾದರೂ ಏಕೆ. ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳಿಗೆ ಬೆಲೆ ಕೊಡದೆ ಯಾರ ಕೈಗೊಂಬೆಯಂತೆ ನಡೆಯುತ್ತಿದ್ದಾರೆಂಬುದು ಗೊತ್ತಿದೆ. ಹಾಗಾಗಿ ಶೀಘ್ರವೇ ತಮ್ಮ ನಡವಳಿಕೆಯನ್ನು ಬದಲಿಸಿಕೊಂಡರೆ ಒಳಿತು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"