ಚಿಕ್ಕಮಗಳೂರು (ಫೆ.21): ಅಮೂಲ್ಯ ಲಿಯೋನ್‌ಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಎಂದು ಆಕೆಯ ಗ್ರಾಮಸ್ಥರೇ ಆಕ್ರೊಶ ವ್ಯಕ್ತಪಡಿಸಿದ್ದಾರೆ. ದೇಶದ್ರೋಹ ಹೇಳಿಕೆ ನೀಡಿದ ಅವಳ ಬಗ್ಗೆ ಸ್ಥಳೀಯರು ಖಂಡನೆ ವ್ಯಕ್ತಪಡಿಸಿದ್ದಾರೆ.

ಅಮೂಲ್ಯ ಹೇಳಿಕೆಗೆ ಸ್ಥಳೀಯರ ಖಂಡನೆ ವ್ಯಕ್ತವಾಗಿದ್ದು, ಈಕೆಯನ್ನು ಗುಂಡುಕ್ಕಿ ಹತ್ಯೆ ಮಾಡಬೇಕು. ಅಮೂಲ್ಯ ತನ್ನ ಮನೆಗೆ ಯಾವಾಗ ಬರುತ್ತಾಳೆ, ಹೋಗುತ್ತಾಳೆ ಎನ್ನುವುದರ ಬಗ್ಗೆ ಗೊತ್ತೇ ಆಗುತ್ತಿರಲ್ಲ, ನಮ್ಮ ಗ್ರಾಮದಲ್ಲಿ ರಸ್ತೆ, ವಿದ್ಯುತ್ ಇಲ್ಲದೇ ಸಮಸ್ಯೆಯಲ್ಲಿ ಇದ್ದೇವೆ. ಈ ವಿಚಾರವನ್ನು ಮಾತಾಡುವುದು ಬಿಟ್ಟು ,ದೇಶದ ದ್ರೋಹ ಹೇಳಿಕೆ ನೀಡಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

ಅಮೂಲ್ಯ ಲಿಯೋನಳನ್ನು ಪಾಕ್ತಿಸ್ಥಾನಕ್ಕೆ ಗಡಿಪಾರು ಮಾಡಬೇಕೆಂದು ಅಕ್ಕಪಕ್ಕದ ನಿವಾಸಿಗಳು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ  ಕೊಪ್ಪ ತಾಲ್ಲೂಕಿನ ಶಿವಪುರ ಗುಬ್ಬುಗದ್ದೆಯ ಜನರು ಆಗ್ರಹಿಸಿದ್ದಾರೆ.