ಲಾಕ್‌ಡೌನ್ ಮಧ್ಯೆಯೂ ಅಕ್ರಮ ಮದ್ಯ ಮಾರಾಟ: ಪ್ರಕರಣ ದಾಖಲು
ಅಕ್ರಮ ಮದ್ಯದ ವ್ಯಾಪಾರ| ಬಾರ್ ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ| ಹುಬ್ಬಳ್ಳಿ ನಗರದಲ್ಲಿರುವ ಮೆ.ಓರಿಜಿನಲ್ ಬಾರ್ ರೆಸ್ಟೋರೆಂಟ್ ದಾಳಿ| 3,22,488 ಮೌಲ್ಯದ 562.595 ಲೀಟರ್ ಮದ್ಯ ಮತ್ತು ಒಟ್ಟು 291.070 ಲೀಟರ್ ಬಿಯರ್ ಜಪ್ತಿ|
ಹುಬ್ಬಳ್ಳಿ(ಏ.10): ಲಾಕ್‌ಡೌನ್ ಸಂದರ್ಭದಲ್ಲಿ ಕದ್ದುಮುಚ್ಚಿ ಮದ್ಯದ ವ್ಯಾಪಾರದಲ್ಲಿ ತೊಡಗಿದ್ದ ಈಶ್ವರನಗರದಲ್ಲಿರುವ ಮೆ.ಓರಿಜಿನಲ್ ಬಾರ್ ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡಸಿ ಪ್ರಕರಣ ದಾಖಲು ದಾಖಲಿಸಿದ್ದಾರೆ.
ಏ. 8ರಂದು ರೆಸ್ಟೋರೆಂಟ್ ತಪಾಸಣೆ ನಡೆಸಿದ ಅಬಕಾರಿ ನಿರೀಕ್ಷಕ ಸಂಜೀವರ ಬಳುಲದ ತಂಡ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಹನುಮಂತಸಾ ರಾಮಕೃಷ್ಣ, ರವೀಂದ್ರ, ಕೃಪಾ ರಾಮಕೃಷ್ಣಸಾ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಾರ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್: ಹೋಮ್ ಡೆಲಿವರಿಗೆ ಸರಕಾರ ಅನುಮತಿ..?
ಈ ಸಂದರ್ಭದಲ್ಲಿ 3,22,488 ಮೌಲ್ಯದ 562.595 ಲೀಟರ್ ಮದ್ಯ ಮತ್ತು ಒಟ್ಟು 291.070 ಲೀಟರ್ ಬಿಯರ್ ದಾಸ್ತಾನನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ. ದಾಳಿ ನಡೆಸಿದ ತಂಡದಲ್ಲಿ ಅಬಕಾರಿ ನಿರೀಕ್ಷಕ ಶ್ರೀಶೈಲ ಸಂಗೊಳ್ಳಿ, ಅಬಕಾರಿ ರಕ್ಷಕ ಎಚ್.ಬಿ. ಕಾಳೆ, ವಾಹನ ಚಾಲಕ ನಾಗೇಶ ಮೂಲಿಮನಿ ಹಾಗೂ ಪೊಲೀಸ್ ಸಿಬ್ಬಂದಿ ರವಿ ಪಾಂಡುರಂಗ ರಾಶಿನಕರ ಇದ್ದರು.