Asianet Suvarna News

ಮಾಜಿ ಶಾಸಕಿ ಕಾರು ಅಪಘಾತ : ತಪ್ಪಿದ ಭಾರೀ ಅವಘಡ

  • ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ಇದ್ದ ಕಾರು ಪಲ್ಟಿಯಾಗಿ ಅದೃಷ್ಟವಶಾತ್  ಪಾರು
  • ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ನೆಲಮಂಗಲದ ಬಳಿ ಅಪಘಾತ
  • ಎಡಗಾಲಿಗೆ ಫ್ರಾಕ್ಚರ್ ಆಗಿ ಆಸ್ಪತ್ರೆ ಸೇರಿದ ಶಾರದಾ ಪೂರ್ಯ ನಾಯ್ಕ್
Ex MLA Sharada purya Naik injured in Road Accident snr
Author
Bengaluru, First Published Jul 7, 2021, 2:13 PM IST
  • Facebook
  • Twitter
  • Whatsapp

ಶಿವಮೊಗ್ಗ (ಜು.07):ಜೆಡಿಎಸ್ ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ಇದ್ದ ಕಾರು ಪಲ್ಟಿಯಾಗಿ ಅದೃಷ್ಟವಶಾತ್  ಪಾರಾಗಿದ್ದಾರೆ. 

 ಇಂದು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ನೆಲಮಂಗಲದ ಬಳಿ ಶಾರದಾ ಪೂರ್ಯನಾಯ್ಕ್  ಇದ್ದ ಇನ್ನೋವ ಕ್ರಿಸ್ಟಾ ಕಾರು ಪಲ್ಟಿಯಾಗಿದೆ. ಅವಘಡದಲ್ಲಿ ಎಡಗಾಲು ಫ್ರಾಕ್ಚರ್ ಆಗಿದ್ದು, ಪ್ರಾಣಾಪಾಯದಿಂದ  ಬಚಾವಾಗಿದ್ದಾರೆ.  

ಸೆಲ್ಫಿ ಗೀಳು: ಮೂವರು ಸಹೋದರಿಯರ ದಾರುಣ ಸಾವು

ಇಂದು ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಸಭೆಗೆಂದು ತೆರಳುತ್ತಿದ್ದ ವೇಳೆ  ಈ ಅವಘಡವಾಗಿದೆ.  ಎಡಗಾಲು ಮುರಿದ ಪರಿಣಾಮ ಶಾರದಾ ಪೂರ್ಯಾನಾಯ್ಕರನ್ನು ಹರ್ಷ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಲಕ ಕಾರು ಅತಿವೇಗದಲ್ಲಿ ಚಲಾಯಿಸಿದ ಪರಿಣಾಮ ಈ ಅವಘಢ ಸಂಭವಿಸಿದೆ ಎನ್ನಲಾಗಿದೆ. ಕಾರು ಪಲ್ಟಿ ಆದರೂ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.

Follow Us:
Download App:
  • android
  • ios