ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಆನೇಕಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಟಿಕೆಟ್‌ ಆಕಾಂಕ್ಷಿ ಆಗಿರುವುದಾಗಿ ಮಾಜಿ ಐಎಸ್‌ಎಸ್‌ ಅಧಿಕಾರಿ ಶಿವರಾಂ ತಿಳಿಸಿದ್ದಾರೆ

ಚಾಮರಾಜನಗರ (ಆ.15): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಆನೇಕಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವುದಾಗಿ ಮಾಜಿ ಐಎಸ್‌ಎಸ್‌ ಅಧಿಕಾರಿ ಶಿವರಾಂ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಾನು ಚಾಮರಾಜನಗರ ಲೋಕಸಭೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. 

ಬೊಮ್ಮಾಯಿ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನಗೊಳ್ಳಬಹುದು: ಹೀಗೊಂದು ಭವಿಷ್ಯ

ಯಡಿಯೂರಪ್ಪ ಅವರು ಕೂಡ ಭರವಸೆ ಕೊಟ್ಟು ಕೆಲಸ ಮಾಡು ಹೋಗು ಎಂದಿದ್ದರು. ಆದರೆ ಟಿಕೆಟ್‌ ಕೈ ತಪ್ಪಿತ್ತು. ಇದೀಗ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕಾರಣಕ್ಕೆ ಆನೇಕಲ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ ಎಂದರು.

ಕಳೆದ ಬಾರಿ ನಾರಾಯಣಸ್ವಾಮಿ ಇದ್ದ ಕಾರಣ ಸ್ಪರ್ಧೆ ಮಾಡಿಲ್ಲ. ಅವರೀಗ ಚಿತ್ರದುರ್ಗಕ್ಕೆ ಹೋಗಿ ಮಂತ್ರಿಯಾಗಿದ್ದಾರೆ. ಎಲ್ಲರೂ ಕೂಡ ಆನೇಕಲ್‌ನಿಂದ ಸ್ಪ​ರ್ಧಿಸುವಂತೆ ಮನವಿ ಮಾಡ್ತಿದ್ದಾರೆ ಎಂದರು.