ರಾಮನಗರ: (ಸೆ.18) ಡಾ. ಶಿವಕುಮಾರ ಸ್ವಾಮೀಜಿಯವರು ಅನಾಥ ಮಕ್ಕಳಿಗೂ ದಾರಿ ದೀಪವಾಗಿದ್ದರು. ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಂಡು ಹೋಗುವುದು ಅವಶ್ಯಕವಾಗಿದೆ ಎಂದು ಜನಪದ ಹಿರಿಯ ಗಾಯಕ ಚಿಕ್ಕಮರಿಗೌಡ ತಿಳಿಸಿದರು.

ತಾಲೂಕಿನ ಕೂಟಗಲ್‌ ಹೋಬಳಿಯ ಕೂನಮುದ್ದನಹಳ್ಳಿಯಲ್ಲಿ ಜಿಲ್ಲಾ ಲೇಖಕರ ವೇದಿಕೆ ಹಾಗೂ ಮಾತೃ ಹೃದಯ ಪ್ರತಿಷ್ಠಾನದ ವತಿಯಿಂದ ನಡೆದ ಲೇಖಕ ಡಾ. ಕೂ.ಗಿ. ಗಿರಿಯಪ್ಪ ಅವರ ಡಾ. ಶಿವಕುಮಾರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ, ಸಾವಿರಾರು ಮಕ್ಕಳಿಗೆ ಅನ್ನ, ವಸತಿ ಹಾಗೂ ಜ್ಞಾನವನ್ನು ದಾನ ಮಾಡಿದ ಡಾ. ಶಿವಕುಮಾರ ಸ್ವಾಮೀಜಿ ಎಲ್ಲರಿಗೂ ಅನುಕರಣೀಯರಾಗಿದ್ದಾರೆ ಎಂದು ತಿಳಿಸಿದರು.

'ಓದುವ ಅಭಿ​ರು​ಚಿ ಬೆಳೆಸಿಕೊಳ್ಳಿ'

ಇದೆ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಂ.ಲಿಂ. ನಾಗರಾಜು, ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆಯಬೇಕು. ಪುಸ್ತಕಗಳನ್ನು ಓದುವಂತಹ ಅಭಿರುಚಿಯನ್ನು ಜನರಲ್ಲಿ ಬೆಳೆಸಬೇಕು. ಹಲವರು ಮೊಬೈಲ್‌ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನುಡಿದರು. 


ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 
 

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್‌. ರುದ್ರೇಶ್‌, ಅರ್ಬನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಶಾಖಾಧಿಕಾರಿ ಸಿ. ರವೀಂದ್ರ, ಅಖಿಲ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಸಂಸ್ಥಾಪಕ ಎಲ್ಲೇಗೌಡ ಬೆಸಗರಹಳ್ಳಿ, ಟಿ. ಕೃಷ್ಣೇಗೌಡ, ಜಿ.ಪಿ. ಕಾಡೇಗೌಡ, ರುದ್ರೇಶ್‌, ರಮೇಶ್‌, ಎಸ್‌.ಎಲ್. ಲಕ್ಕಪ್ಪ, ಕೆ.ಎಸ್‌. ಪ್ರದೀಪ್‌, ಗೌಡಯ್ಯ, ಕೆಂಗಲ್‌ ವಿನಯ್‌ ಕುಮಾರ್‌, ಬರಗೂರು ಪುಟ್ಟರಾಜು, ಶಿವಕುಮಾರ್‌, ಜಿಲ್ಲಾ ಲೇಖಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಕೂ.ಗಿ. ಗಿರಿಯಪ್ಪ ಸೇರಿದಂತೆ ಮತ್ತಿ​ತ​ರ​ರು ಉಪಸ್ಥಿತರಿದ್ದರು.