ಹಾಸನ(ಮೇ.07): ಮೇ ತಿಂಗಳಿನಿಂದ ಒಂದು ಲೀಟರ್‌ ಮದ್ಯಕ್ಕೆ ಶೇ.10 ರಷ್ಟುಬೆಲೆ ಏರಿಕೆ ಮಾಡಲಾಗಿದ್ದು, ಆದೇಶಕ್ಕಿಂತ ಹೆಚ್ಚಿನ ಬೆಲೆಯನ್ನು ಯಾರಾದರೂ ಮದ್ಯದಂಗಡಿಯವರು ವಸೂಲಿ ಮಾಡಿದರೆ ಪ್ರಕರಣ ದಾಖಲಿಸಿ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಅಬಕಾರಿ ಉಪ ಆಯುಕ್ತ ಪಿ. ಗೋಪಾಲಕೃಷ್ಣೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಲ್‌.-2 ಕೆಲ ಮದ್ಯದಂಗಡಿಗಳಲ್ಲಿ ಮುಖಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿದೆ. ಈಗಾಗಲೇ ಮೇಯಿಂದ ಲೀಟರ್‌ಗೆ ಶೇ.10 ಭಾಗ ದರದಲ್ಲಿ ಹೆಚ್ಚಾಗಿದೆ. ಅದಕ್ಕಿಂತ ಹೆಚ್ಚಿನ ಬೆಲೆ ಪಡೆದರೆ ಅಂತಹ ಮದ್ಯದಂಗಡಿಯನ್ನು ಪರಿಶೀಲಿಸಿ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇಂದಿನಿಂದ ಕಾರವಾರದಲ್ಲಿ ಕಡಲಿಗಿಳಿಯುತ್ತೆ ಮೀನು ಬೇಟೆ ಬೋಟುಗಳು..!

ಜಿಲ್ಲೆಯ ನಾನಾ ತಾಲೂಕಿನಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಗಮನ ನೀಡಿ ಅಲ್ಲಿನ ಅಬಕಾರಿ ಅ​ಧಿಕಾರಿಗಳಿಗೆ ನಿರ್ದೇಶನವನ್ನು ಕೊಡಲಾಗಿದೆ ಎಂದು ತಿಳಿಸಿದರು.

ಕೊರೋನಾ ವೈರಸ್‌ ಹರಡುವ ಹಿನ್ನೆ್ನಲೆಯಲ್ಲಿ ದೇಶವೇ ಲಾಕ್‌ಡೌನ್‌ ಆದೇಶ ಜಾರಿಯಲ್ಲಿದ್ದರಿಂದ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ನಂತರ ಮೇ 4 ರಂದು ಎಂ.ಆರ್‌.ಪಿ. ಮತ್ತು ಎಂ.ಎಸ್‌.ಐ.ಎಲ್‌. ಮದ್ಯದಂಗಡಿ ತೆರೆಯಲು ಅನುಮತಿ ಕೊಡಲಾಗಿದೆ.

ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ 22 ಜನರ ಸಾವು ಎಂದ ಸಂಸದ!

ನಮ್ಮ ಜಿಲ್ಲೆಯಲ್ಲಿ 125 ಸಿ.ಎಲ್‌.2 ಗಳು ಮತ್ತು 33 ಎಂ.ಎಸ್‌.ಐ.ಎಲ್‌. ಎಣ್ಣೆ ಅಂಗಡಿಯನ್ನು ತೆಗೆಯಲಾಗಿದೆ. ಮೇ 4ರ ಮೊದಲ ದಿವಸ ಜಿಲ್ಲೆಯಲ್ಲಿ ಸಿ.ಎಲ್‌.-2 ನಲ್ಲಿ 1 ಲಕ್ಷದ 6 ಸಾವಿರದ 144 ಲೀಟರ್‌ ಮದ್ಯ ಮಾರಾಟವಾಗಿದೆ. ಎಂ.ಎಸ್‌.ಐ.ಎಲ್‌. ನಲ್ಲಿ ಒಟ್ಟು 21 ಸಾವಿರದ 29 ಲೀಟರ್‌ ಮದ್ಯ ಮಾರಾಟವಾಗಿದೆ. ಮೇ 5ರ ಎರಡನೇ ದಿವಸ ಸಿ.ಎಲ್‌.-2 ನಲ್ಲಿ 72 ಸಾವಿರದ 303 ಲೀಟರ್‌ ಮದ್ಯ ವ್ಯಾಪಾರವಾಗಿದೆ.

ಎಲ್ಲ ದಿನವೂ ಮದ್ಯ ಮಾರಾಟ

ಎಂ.ಎಸ್‌.ಐ.ಎಲ್‌. ಮತ್ತು ಎಂ.ಆರ್‌.ಪಿ. ಎಣ್ಣೆ ಶಾಪ್‌ಗಳಲ್ಲಿಗಳಲ್ಲಿ ಮದ್ಯ ಸ್ಟಾಕ್‌ ಇರುವುದಿಲ್ಲ. ಎಲ್ಲಾ ಖಾಲಿಯಾಗಿತ್ತು. ಡಿಡಿ ಹಾಕಿ ಸ್ಟಾಕ್‌ ಬರುವುದು ಸ್ವಲ್ಪ ತಡವಾಗಿದ್ದು, ಸ್ಟಾಕ್‌ ಬರಲಿದೆ ಎಂದರು. ಜನಜಂಗುಳಿ ಆಗದಂತೆ ವಾರದ ಮೂರು ದಿವಸ ಮದ್ಯ ಮಾರಾಟ ಮಾಡಲು ಜಿಲ್ಲಾ​ಧಿಕಾರಿಗಳು ಆದೇಶಿಸಿದ್ದರು.

ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಮಾಡುವಂತೆ ಸೂಚನೆ ನೀಡಿದ್ದು, ವಾರದ ಮೂರು ದಿವಸ ಮದ್ಯ ಮಾರಾಟ ಮಾಡುವುದರಿಂದ ಇನ್ನಷ್ಟುಜನಸಂದಣೆ ಆಗಬಹುದು, ಇದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಬಹುದು ಎಂಬ ದೃಷ್ಟಿಯಲ್ಲಿ ಎಲ್ಲಾ ದಿನವು ಮದ್ಯದಂಗಡಿ ತೆಗೆಯಲು ಅವಕಾಶ ಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.