ಚುನಾವಣಾ ಆಯೋಗ ಯಾರ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಮಾಧ್ಯಮಗಳಿಗೂ ಗೊತ್ತಿದೆ. ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.06): ಚುನಾವಣಾ ಆಯೋಗ ಯಾರ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಮಾಧ್ಯಮಗಳಿಗೂ ಗೊತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೃಂಗೇರಿ ಕ್ಷೇತ್ರದ ಜೀವರಾಜ್ ಗೆದ್ದಿದ್ದಾರೆಂದು ಚುನಾವಣಾ ಅಧಿಕಾರಿ ಘೋಷಿಸಿದ್ದರೂ ಸ್ಪೀಕರ್ ಅವರು ಪ್ರಮಾಣ ವಚನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದ ಬಳಿಕ ಅವರು ಪ್ರತಿಕ್ರಿಯಿಸಿದರು.
ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಯಿತು. ತಮ್ಮ ಸ್ವಾರ್ಥಕ್ಕವಾಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ಗೆಲ್ಲಲಾಗಿದೆ. ಚುನಾವಣಾ ಆಯೋಗ ಬಹಿರಂಗವಾಗಿ ಒಂದು ಪಕ್ಷಕ್ಕೆ ಸಮರ್ಥನೆ ಮಾಡುತ್ತಿದೆ. ಇದು ದುರ್ದೈವದ ಸಂಗತಿ, ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ಈ ಮಾದರಿಯಲ್ಲಿ ಕಾಂಗ್ರೆಸ್ ಯಾವತ್ತು ಮಾಡಲಿಲ್ಲ. ಹೀಗೆ ಮಾಡಿದ್ದರೆ ಎಂದೆಂದಿಗೂ ಕಾಂಗ್ರೆಸ್ ಅಧಿಕಾರದಲ್ಲಿ ಇರುತಿತ್ತು. ಅವರು ಅಧಿಕಾರ ದಾಹಕ್ಕಾಗಿ ಇದೆಲ್ಲಾ ಮಾಡುತ್ತಿದ್ದಾರೆ. ಮತಗಳನ್ನು ತಿದ್ದುಪಡಿ ಮಾಡಲಾಗಿದೆ.
ಅಧಿಕಾರಿಗಳನ್ನು ಉಪಯೋಗ ಮಾಡಿಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಮಾರಕ. ಕರ್ನಾಟಕದಲ್ಲೂ ಅಂತಹದ್ದೆ ಆಗಿದೆ. ಅಂದು ಎಣಿಕೆ ಆದಾಗ ಯಾಕೆ ತಡೆಯಲಿಲ್ಲ. ಮತಗಟ್ಟೆಯಲ್ಲಿ ಬಿಜೆಪಿ ಏಜೆಂಟರುಗಳು ಇದ್ದರು. ಅವತ್ತು ಯಾಕೆ ಅದನ್ನು ತಡೆಯಲಿಲ್ಲ. ಬಿಜೆಪಿ ಏಜೆಂಟರ ಸಹಿ ಇದೆಯಲ್ಲ, ಅವರ ಕಣ್ಣೆದುರಿಗೆ ಎಣಿಕೆ ಆಗಿದೆ. ಆದರೂ ಯಾಕೆ ತಡೆಯಲಿಲ್ಲ, ಇಂದು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಷಡ್ಯಂತ್ರ ಮಾಡಲಾಗಿದೆ. ಇಂದು ಮತ್ತೆ ತಿದ್ದುಪಡಿ ಮಾಡಿ ಈ ರೀತಿ ಫಲಿತಾಂಶ ಬರುವಂತೆ ಮಾಡಿಕೊಂಡು ಖುಕೃತ್ಯ ಮಾಡಲಾಗಿದೆ.
ಇದೆಲ್ಲಾ ಮಾಡುವುದು ಬಿಜೆಪಿ ಹೊರತ್ತು ಕಾಂಗ್ರೆಸ್ ಮಾಡಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕಿಡಿಕಾರಿದ್ದಾರೆ. ಶೃಂಗೇರಿ ಕ್ಷೇತ್ರ ಶಾಸಕರಿಗೆ ಜೀವರಾಜ್ ಅವರಿಗೆ ಸ್ಪೀಕರ್, ಮಾಣವಚನ ಬೋಧಿಸದ ವಿಚಾರಕ್ಕೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜ್ಯಪಾಲರ ಅಂಗಳಕ್ಕೆ ಹೋಗಬಹುದು ಇಲ್ಲ, ರಾಷ್ಟ್ರಪತಿಯವರ ಬಳಿ ಹೋಗಬಹುದು. ಸುಪ್ರೀಂ ಕೋರ್ಟ್ ಇದೆ ಕಾನೂನು ಹೋರಾಟ ನಡೆಯುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಶಾಲನಗರ ತಾಲ್ಲೂಕಿನ ದುಬಾರೆಯಲ್ಲಿ ಹೇಳಿದ್ದಾರೆ.
ಸತ್ಯಕ್ಕೆ ಜಯ ಸಿಗುತ್ತದೆ ಅಂತಿಮವಾಗಿ ಸತ್ಯಮೇವ ಜಯತೆ ಆಗುತ್ತದೆ. ಈಗಲೂ ಅವರೇ ಶಾಸಕರೇ, ಮುಂದೆಯೂ ಅವರೇ ಶಾಸಕರಾಗಲಿದ್ದಾರೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಬಿಟ್ಟಿಭಾಗ್ಯಗಳಿಂದ ತಮಿಳುನಾಡಿನಲ್ಲಿ ಡಿಎಂಕೆಗೆ ಬಂದಿರುವ ಸ್ಥಿತಿ ಕಾಂಗ್ರೆಸ್ ಗೂ ಬರಲಿದೆ ಎಂದಿರುವುದಕ್ಕೆ ಕಿಡಿಕಾರಿದ ಸಚಿವ ಈಶ್ವರ ಖಂಡ್ರೆ ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಗ್ಯಗಳ ಕೊಟ್ಟಿಲ್ಲವೆ?
ಕೊಡಗಿನ ದುಬಾರೆಯಲ್ಲಿ ಮಾತನಾಡಿದ ಅವರು ನೀವು ಎಲ್ಲಿಯೂ ಭಾಗ್ಯಗಳ ಕೊಟ್ಟಿಲ್ಲವೆ?, ಮಹಾರಾಷ್ಟ್ರದಲ್ಲಿ ಭಾಗ್ಯಗಳ ಕೊಟ್ಟಿಲ್ಲವೆ. ದೆಹಲಿಯಲ್ಲಿ ಭಾಗ್ಯಗಳ ಕೊಟ್ಟಿಲ್ಲವೆ?. ಮತ್ತು ಪ್ರತೀ ವ್ಯಕ್ತಿ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದೀರಿ. ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ರಿ. ಪ್ರತಿಯೊಬ್ಬರಿಗೂ ಮನೆ ಕೊಡುತ್ತೇವೆ ಎಂದಿದ್ರಿ. ಇದುವರೆಗೆ ಯಾವುದನ್ನಾದರೂ ಕೊಟ್ಟಿದ್ದೀರಾ. ನಾವು ಘೋಷಣೆ ಮಾಡಿದ್ದೆಲ್ಲವನ್ನೂ ಈಡೇರಿಸಿದ್ದೇವೆ ಎಂದು ಈಶ್ವರ್ ಖಂಡ್ರೆ ಹೇಳಿದರು.

