Asianet Suvarna News Asianet Suvarna News

Covid Crisis: ಒಂದೂವರೆ ವರ್ಷದ ಹಿಂದಿನ ಕೋವಿಡ್‌ ಸಾವು ನಿನ್ನೆ ವರದಿಯಲ್ಲಿ ಉಲ್ಲೇಖ..!

*  2020ರ ನ.23ರಲ್ಲಿ ನಗರದಲ್ಲಿ ಮೃತಪಟ್ಟಿದ್ದ ಮಹಿಳೆ
*  ಮೃತರ ವರದಿಯಲ್ಲಿ ನಮೂದು
*  ರಾಜ್ಯದಲ್ಲಿ 38 ಕೋವಿಡ್‌ ಕೇಸ್‌ ಪತ್ತೆ
 

Entry into the deceased report From One and Half Year Back Dies in Bengaluru grg
Author
Bengaluru, First Published Apr 5, 2022, 5:13 AM IST

ಬೆಂಗಳೂರು(ಏ.05): ರಾಜ್ಯ ಆರೋಗ್ಯ ಇಲಾಖೆ(Department of Health) ನೀಡುವ ದೈನಂದಿನ ಕೋವಿಡ್‌ ವರದಿಯಲ್ಲಿ(Covid Report) ಒಂದೂವರೆ ವರ್ಷದ ಹಿಂದೆ ಮೃತಪಟ್ಟ(Death) ಮಹಿಳೆಯೊಬ್ಬರ(Woman) ಮಾಹಿತಿ ಸೋಮವಾರ ಉಲ್ಲೇಖಿಸಲಾಗಿದೆ.

ಬೆಂಗಳೂರು(Bengaluru) ನಗರದಲ್ಲಿ ವಿಷಮಶೀತ ಜ್ವರದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಯೊಬ್ಬರು 2020ರ ನವೆಂಬರ್‌ 11ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. 2020ರ ನವೆಂಬರ್‌ 23ಕ್ಕೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಈ ಮಾಹಿತಿ ಸೋಮವಾರ ವರದಿಯಲ್ಲಿ ನಮೂದಾಗಿದೆ.

Covid Crisis: ಹರ್ಯಾಣದಲ್ಲೂ ಮಾಸ್ಕ್‌ ಕಡ್ಡಾಯ ನಿಯಮ ರದ್ದು

ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌ ಪ್ರತಿಕ್ರಿಯಿಸಿ, ಕೋವಿಡ್‌ನಿಂದ(Covid-19) ಮೃತರಾದವರಿಗೆ ಪರಿಹಾರ(Compensation) ನೀಡುವ ಯೋಜನೆಯ ಭಾಗವಾಗಿ ಈ ಸಾವು ದಾಖಲಾಗಿದೆ. ಇಂತಹ 20 ಸಾವಿರ ಸಾವುಗಳನ್ನು ನಾವು ಕೋವಿಡ್‌ ಸಾವು ಎಂದು ಪರಿಗಣಿಸಿದ್ದೇವೆ. ಆದರೆ ಈ 20 ಸಾವಿರ ಸಾವುಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ ಬೆಂಗಳೂರು ಆರೋಗ್ಯಾಧಿಕಾರಿಗಳು ಕಳುಹಿಸಿದ್ದ ಮಾಹಿತಿಯನ್ನು ನಮ್ಮ ಸಿಬ್ಬಂದಿ ದೈನಂದಿನ ವರದಿಯೊಂದಿಗೆ ಲಗತ್ತಿಸಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡದಂತೆ ಸೂಚಿಸಿದ್ದೇನೆ. ಈ 20 ಸಾವಿರ ಸಾವುಗಳ ಮಾಹಿತಿಯನ್ನು ದೈನಂದಿನ ವರದಿಯಿಂದ ಪ್ರತ್ಯೇಕವಾಗಿ ಇಡಲಾಗುವುದು ಎಂದು ಹೇಳಿದರು.

36 ಹೊಸ ಕೇಸ್‌ ಪತ್ತೆ

ಸೋಮವಾರದ ಬೆಂಗಳೂರು ನಗರದಲ್ಲಿ 36 ಮಂದಿಯಲ್ಲಿ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. 34 ಮಂದಿ ಚೇತರಿಸಿಕೊಂಡಿದ್ದಾರೆ.  1,399 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 19 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐವರು ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗ, ಇಬ್ಬರು ತೀವ್ರ ನಿಗಾ ವಿಭಾಗ, ಐವರು ಮಂದಿ ಆಮ್ಲಜನಕ ಯುಕ್ತ ಹಾಸಿಗೆ ಮತ್ತು ಏಳು ಮಂದಿ ಜನರಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3,853 ಮಂದಿ ಪರೀಕ್ಷೆಗೆ ಒಳಗಾಗಿದ್ದು ಶೇ. 0.55 ಪಾಸಿಟಿವಿಟಿ ದರ ದಾಖಲಾಗಿದೆ.

ಸೋಮವಾರ 3,944 ಮಂದಿ ಮೊದಲ ಡೋಸ್‌, 4,030 ಮಂದಿ ಎರಡನೇ ಡೋಸ್‌ ಮತ್ತು 497 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ನಗರದಲ್ಲಿ ಒಟ್ಟು 1.84 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ 38 ಕೋವಿಡ್‌ ಕೇಸ್‌ ಪತ್ತೆ

ಬೆಂಗಳೂರು: ಮೂರು ದಿನಗಳ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 5,083 ಕೋವಿಡ್‌ ಪರೀಕ್ಷೆ ನಡೆದಿದ್ದು, 38 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ದಿನಕ್ಕೆ ಎರಡು ಲಕ್ಷ ಮೀರಿ ನಡೆಯುತ್ತಿದ್ದ ಕೋವಿಡ್‌ ಪರೀಕ್ಷೆ ಇದೀಗ 5 ಸಾವಿರಕ್ಕೆ ಕುಸಿದಿದೆ. 

Coronavirus: ಲಾಕ್ ಡೌನ್ ಇದ್ದರೂ  ನಿಲ್ಲದ ವೈರಸ್ ಕಾಟ.. ಚೀನಾಕ್ಕೆ ಮತ್ತೆ ಸಂಕಟ

2020ರ ಮೇ 13ಕ್ಕೆ 4,645 ಪರೀಕ್ಷೆ ನಡೆದ ಬಳಿಕ ಒಂದು ದಿನದಲ್ಲಿ ಅತ್ಯಂತ ಕಡಿಮೆ ಪರೀಕ್ಷೆ ಸೋಮವಾರ ನಡೆದಿದೆ. ಪಾಸಿಟಿವಿಟಿ ದರ ಶೇ.0.74 ದಾಖಲಾಗಿದ್ದು, ಕಳೆದ ಫೆ.28ಕ್ಕೆ 0.70 ಪಾಸಿಟಿವಿಟಿ ದರ ದಾಖಲಾದ ಬಳಿಕದ ಗರಿಷ್ಠ ಪಾಸಿಟಿವಿಟಿ ಇದಾಗಿದೆ. 52 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,500ಕ್ಕೆ ಇಳಿಕೆಯಾಗಿದೆ. ಬೆಂಗಳೂರು ನಗರದಲ್ಲಿ 36 ಮತ್ತು ದಕ್ಷಿಣ ಕನ್ನಡದಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಒಬ್ಬರು ಮೃತರಾಗಿದ್ದಾರೆ. ರಾಜ್ಯದಲ್ಲಿ(Karnataka) ಈವರೆಗೆ ಒಟ್ಟು 39.45 ಲಕ್ಷ ಮಂದಿಯಲ್ಲಿ ಸೋಂಕುಕಾಣಿಸಿಕೊಂಡಿದ್ದು, 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,055 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಸೋಮವಾರ 79,483 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಈವರೆಗೆ 10.42 ಕೋಟಿ ಡೋಸ್‌ ನೀಡಲಾಗಿದೆ.
 

Follow Us:
Download App:
  • android
  • ios