Yadgir: ಸತ್ತವರಿಗೂ ಲಸಿಕೆ: ವ್ಯಾಕ್ಸಿನೇಶನ್ ಆಟೋ ಅಪ್ಡೇಟ್: ಏನಿದು..?
* ಜ.19 ಸಂಚಲನ ಮೂಡಿಸಿದ್ದ ‘ಕನ್ನಡಪ್ರಭ’ ವಿಶೇಷ ವರದಿ
* ವರದಿ ನಂತರ ಮತ್ತಷ್ಟೂ ಹೊರಬರುತ್ತಿರುವ ಫೇಕ್ ಹೂರಣ
* ಗುರಿ ಸಾಧನೆಗಾಗಿ ಸತ್ತವರು, ಇಲ್ಲದವರು, ವಲಸೆ ಹೋದವರ ಹೆಸರುಗಳ ದಾಖಲು
ಯಾದಗಿರಿ(ಜ.23): ಗುರಿ ಸಾಧನೆಗಾಗೇನೋ ಎಂಬಂತೆ, ಸತ್ತವರಿಗೂ ಲಸಿಕೆ(Vaccine)- ಕೋವಿಡ್ ಟೆಸ್ಟ್(Covid Test) ಹಾಗೂ ಮಹಾನಗರಗಳಿಗೆ ದುಡಿಯಲು ಗುಳೇ ಹೋದ, ಇನ್ನೂ ಎರಡನೇ ಡೋಸ್ ಲಸಿಕೆ ಪಡೆಯದ ವಲಸಿಗರು ಸೇರಿದಂತೆ ಕೆಲವರಿಗೆ ಎರಡನೇ ಡೋಸ್ ಹಾಕಲಾಗಿದೆ ಎಂಬುದಾಗಿ ದಾಖಲೆಗಳಲ್ಲಿ ನಮೂದಾಗುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ, ಇದೀಗ ಇಂತಹ ಮತ್ತಷ್ಟೂ ಘಟನೆಗಳಾದ ಬಗ್ಗೆ ಮಾಹಿತಿ ಹೊರಬೀಳುತ್ತಿವೆ.
’ಸತ್ತವರಿಗೂ ಲಸಿಕೆ, ಕೋವಿಡ್ ಟೆಸ್ಟ್’ ಕುರಿತು ಜ.19 ರಂದು ‘ಕನ್ನಡಪ್ರಭ’ದ(Kannada Prabha) ವರದಿ ಭಾರಿ ಚರ್ಚೆಗೆ ಗ್ರಾಸವಾಗಿ ಸಂಚಲನಕ್ಕೆ ಕಾರಣವಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹುಗಳು ನಡೆದಿಲ್ಲ ಎಂದು ತೇಪೆ ಸಾರಿಸುವ ಯತ್ನಕ್ಕಿಳಿದರಾದರೂ, ದಾಖಲೆಗಳ ಸಮೇತ ಕನ್ನಡಪ್ರಭದ ವರದಿ ಆಡಳಿತಕ್ಕೆ(District Administration) ಭಾರಿ ಮುಜುಗರ(Embarrassment) ಮೂಡಿಸಿತ್ತು.
Vaccine Golmal: ಸತ್ತವರಿಗೂ ಲಸಿಕೆ, ಕೊರೋನಾ ಟೆಸ್ಟ್ ಮೆಸೇಜ್..!
ವರದಿ ನಂತರ ಇಂತಹ ಅನೇಕ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಎರಡನೇ ಡೋಸ್ ಪಡೆಯದಿದ್ದರೂ ಸಹ, 2ನೇ ಡೋಸ್ ನೀಡಲಾಗಿದೆ ಎಂದು ಬರುವ ಮೊಬೈಲ್ ಸಂದೇಶಗಳು(Mobile Messages) ಹಾಗೂ ಪ್ರಮಾಣಪತ್ರಗಳು ಭಾರಿ ಗೊಂದಲ ಮೂಡಿಸಿವೆ. ಇಂತಹ ಪ್ರಮಾದಗಳ ಬಗ್ಗೆ ಕೇಳಲು ಹೋದ ಜನರಿಗೆ, ಇದೊಂದು ‘ಟೆಕ್ನಿಕಲ್ ಪ್ರಾಬ್ಲಂ’(Technical Problem) ಎಂದ್ಹೇಳಿ ಸಾಗಹಾಕುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ, ಇನ್ನೂ ಎರಡನೇ ಡೋಸ್ ಪಡೆಯದವರಿಗೆ ಭಾರಿ ಸಂಕಷ್ಟಕ್ಕೆ ದೂಡಿದಂತಾಗಿದೆ.
* ಆಟೋ ಅಪ್‌ಡೇಟ್ ?
ಲಸಿಕಾಕರಣ(Vaccination) ಕುರಿತು ದಾಖಲೆಗಳನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸುವ ವೇಳೆ, ಹೊಸದಾಗಿ ನೇಮಕಗೊಂಡ ಆಪರೇಟರ್‌ಗಳಿಗೆ(operators) ಅಷ್ಟೊಂದು ತಿಳಿಯದ ಕಾರಣ ಹೀಗಾಗುತ್ತಿದೆ ಎಂದು ಸಮಜಾಯಿಷಿ ಆರೋಗ್ಯ ಇಲಾಖೆಯಿಂದ ಬರುತ್ತಾದರೂ, ಮೊದಲ ಡೋಸ್ ಪಡೆದ ನಂತರ, ಎರಡನೇ ಡೋಸ್(Second Dose) ನೀಡಲಾಗುವ ಅವಽಯಲ್ಲಿ ಇನ್ನೂ ಲಸಿಕೆ ಪಡೆಯದ ಕೆಲವರಿಗೆ ಇಂತಹ ಅನುಭವಗಳಾಗುತ್ತಿವೆ. ಹೀಗಾಗಿ, ಎಲ್ಲೋ ಒಂದು ಕಡೆ ರ್‍ಯಾಂಡಮ್ ಆಗಿ ‘ಆಟೋ ಅಪ್ಡೇಟ್’ ಸಿಸ್ಟೆಮ್ (Auto Update System) ಅನ್ನು ಅಳವಡಿಸಲಾಗಿದೆಯೇ ಎಂಬ ಅನುಮಾನ ಸಾರ್ವಜನಿಕ ಹಾಗೂ ಖುದ್ದು ಆರೋಗ್ಯ ಇಲಾಖೆಯ(Department of Health) ಆವರಣದಲ್ಲೇ ಕೇಳಿಬರುತ್ತಿದೆ.
Corona Compensation: ಸರ್ಕಾರದ ಕೋವಿಡ್ ಪರಿಹಾರ ಚೆಕ್ ಬೌನ್ಸ್..!
ಅವಧಿ ಮೀರಿದ ನಂತರ, ಒಂದಿಷ್ಟು ದಿನಗಳಾದ ಮೇಲೆ ಲಸಿಕೆ ಪಡೆಯದವರಿಗೆ ಇಂತಹ ಸಂದೇಶಗಳು ಬರುತ್ತಿವೆ. ಸಮೀಪದ ಕೇಂದ್ರಗಳಿಗೆ ಹೋಗಿ ಕೇಳಿದರೆ, ನಿಗದಿತ ಅವಧಿಯೊಳಗೆ ಲಸಿಕೆ ಪಡೆಯದಿದ್ದರೆ ಇದು ಆಟೋಮ್ಯಾಟಿಕ್ ಆಗಿ ಅಪ್ಲೋಡ್ ಆಗುತ್ತಿರಬಹುದೇನೋ ಎಂದು ಹಾರಿಕೆಯ ಉತ್ತರ ನೀಡುವ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸ್ಪಷ್ಟನೆ ಕೇಳಿದ ಕೆಲವರಿಗೆ ಈಗೇನಾಯ್ತು ಹಾಕಿಕೊಂಡು ಹೋಗಿ ಎಂದು ಎರಡನೇ ಡೋಸ್ ಹಾಕಿ ಕಳುಹಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ. ಬೂಸ್ಟರ್ ಡೋಸ್(Booster Dose) ಪಡೆಯುವಲ್ಲಿ ಇದು ಅಡ್ಡಿಯಾಗುತ್ತಿದೆ ಎಂಬುದೂ ಅನೇಕರ ಆರೋಪ. ಅಚ್ಚರಿ ಎಂದರೆ, ಸಾರ್ವಜನಿಕರ ಲಸಿಕಾಕರಣ ಕುರಿತ ದಾಖಲೆಗಳನ್ನು ಗಣಕದಲ್ಲಿ ಅಳವಡಿಸುವ ತಮಗೇ ಇಂತಹ ಅನುಭವಕ್ಕೆ ಬಂದಿದೆ ಎನ್ನುವುದು ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರ ಮಾತು.
ಈ ನಿಟ್ಟಿನಲ್ಲಿ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೂ ಬರುವ ಸಂದೇಶಗಳು ಲಸಿಕಾಕರಣ ಕಾರ್ಯಕ್ರಮದ ಉದ್ದೇಶವನ್ನೇ ಹಳ್ಳ ಹಿಡಿಸಿದಂತೆ ಆಗುವುದಲ್ಲದೆ, ಸೋಂಕನ್ನು ತಡೆಗಟ್ಟುವ ಬದಲು ಹರಡುವಿಕೆ ಪ್ರಮಾಣ ಜಾಸ್ತಿಯಾಗುವುದರಲ್ಲಿ ಕಾರಣವಾಗಬಹುದು ಅನ್ನೋ ಆತಂಕ ಸುಳ್ಳೇನಲ್ಲ. ಜಿಲ್ಲಾಡಳಿತಕ್ಕೆ ಭಾರಿ ಮುಜುಗರ ಮೂಡಿಸಿತ್ತು.