ರಾಮನಗರ [ಮಾ.06]:  ಕಾಡಿನಿಂದ ನಾಡಿಗೆ ಬಂದ ಆನೆಯಿಂದು ಹಸು ಎಮ್ಮೆಗಳ ಮೇಲೆ ದಾಳಿ ಮಾಡಿ ತುಳಿದು ಕೊಂದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. 

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಸಮೀಪದ ಗ್ರಾಮಗಳಲ್ಲಿ ಪುಂಡಾನೆ ದಾಂಧಲೆ ಮಾಡಿದೆ. 

ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮಕ್ಕೆ ನುಗ್ಗಿದ ಆನೆ ಸಾಸಲಪುರದಲ್ಲಿ ಎರಡು ಹಸುಗಳನ್ನು ತುಳಿದು ಕೊಂದಿದೆ. ಮರದದೊಡ್ಡಿ ಗ್ರಾಮದಲ್ಲಿ ಎಮ್ಮೆಯೊಂದನ್ನು ತುಳಿದು ಕೊಂದಿದೆ. 

ಅಮ್ಮ ಮರಿಯಾನೆಗೆ ಜನ್ಮ ನೀಡಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದಾಗ!...

ಅಲ್ಲದೇ ಮಲ್ಲೇಗೌಡನ ದೊಡ್ಡಿಯಲ್ಲಿ ಬೈಕ್ ಒಂದನ್ನು ಜಖಂಗೊಳಿಸಿದೆ. ಈ ವೇಳೆ ಸಾರ್ವಜನಿಕರು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಗಂಟೆಗೂ ಹೆಚ್ಚು ಕಾಲ ಹರಸಾಹಸ ಮಾಡಿದ್ದಾರೆ. 

ಆನೆ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.