ಅರಣ್ಯ ಪ್ರದೇಶದ ಕಾಡಂಚಿನ ಕಾಫಿತೋಟದಲ್ಲಿ ಸೋಲಾರ್‌ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ ತಂತಿ  ವಿದ್ಯುತ್‌ ತಂತಿ ಸ್ಪರ್ಶದಿಂದ ಸುಮಾರು 30ರಿಂದ 35 ವರ್ಷದ ಗಂಡಾನೆ ಮೃತ

ಪಿರಿಯಾಪಟ್ಟಣ (ಸೆ.14): ಅರಣ್ಯ ಪ್ರದೇಶದ ಕಾಡಂಚಿನ ಕಾಫಿತೋಟದಲ್ಲಿ ಸೋಲಾರ್‌ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ ತಂತಿ ಸ್ಪರ್ಶದಿಂದ ಸುಮಾರು 30ರಿಂದ 35 ವರ್ಷದ ಗಂಡಾನೆ ಮೃತಪಟ್ಟಿದೆ.

 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಹುಣಸೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ ತಾಲೂಕು ದೊಡ್ಡಹರವೆ ಶಾಖೆಯ ಕಾವೇರಿ ಬ್ಲಾಕ್‌ನಲ್ಲಿ ಸೋಮವಾರ ನಡೆದಿದೆ. 

ಇಂದು ಮೈಸೂರು ದಸರಾ ಗಜ ಪಡೆ ಪ್ರಯಾಣ ಶುರು

ಘಟನೆಗೆ ಸಂಬಂಧಿಸಿ ತೋಟದ ಮಾಲೀಕ ಕೊಡಗಿನ ಸಿದ್ದಾಪುರ ಬಳಿಯ ಅರೆಕಾಡು ಗ್ರಾಮದ ಜೈಸನ್‌ ಸನ್ನಿ, ತೋಟದ ಮೇಲ್ವಿಚಾರಕ ಸೋಮವಾರಪೇಟೆ ತಾಲೂಕಿನ ಅಬೇತ್‌ ಮಂಗಲ ಗ್ರಾಮದ ಶೇಷಪ್ಪ ಅವರ ವಿರುದ್ಧ ಬೈಲಕುಪ್ಪೆ ಪೊಲೀಸ್‌ ಠಾಣೆಯಲ್ಲಿ ಅರಣ್ಯಾಧಿಕಾರಿಗಳು ದೂರು ನೀಡಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.