ಮಲೇಷ್ಯಾ ಮೂಲಕ ಹುಬ್ಬಳ್ಳಿಗೆ ಬಂತು ಈಜಿಪ್ಟ್‌ ಈರುಳ್ಳಿ

ದಕ್ಷಿಣ ಕರ್ನಾಟಕ ಸೇರಿದಂತೆ, ಹೈದರಾಬಾದ್‌ ಕೋಲ್ಕತ್ತಾಕ್ಕೆ ಕೂಡ ಹುಬ್ಬಳ್ಳಿ ಎಪಿಎಂಸಿಯಿಂದಲೆ ಈರುಳ್ಳಿ ಪೂರೈಕೆ| ಮುಂಬೈನಿಂದ 15 ಟನ್‌ ಈರುಳ್ಳಿಯನ್ನು 25 ಕಂಟೇನರ್‌ಗಳಲ್ಲಿ ಆವಕ ಮಾಡಿಕೊಳ್ಳಲಾಗಿತ್ತು| ಉತ್ಕೃಷ್ಟ ಈರುಳ್ಳಿ 12 ಸಾವಿರ ಬೆಲೆಗೆ ವಹಿವಾಟು| 

Egypt Onion Arrived At Hubballi APMC

ಹುಬ್ಬಳ್ಳಿ(ಡಿ.06): ಸ್ಥಳೀಯ ಈರುಳ್ಳಿ ದಾಖಲೆ ಬೆಲೆ ತಲುಪಿರುವ ಬೆನ್ನಲ್ಲಿಯೇ ಇಲ್ಲಿಗೆ ಮಲೇಷಿಯಾ ಮೂಲಕ ಈಜಿಪ್ಟ್‌ ಈರುಳ್ಳಿ ಆವಕವಾಗಿದ್ದು, ಅದು ಕೂಡ ಕ್ವಿಂಟಲ್‌ಗೆ 12 ಸಾವಿರಕ್ಕೆ ಬಿಕರಿಯಾಗಿದೆ. ಇದೇ ಕಾರಣಕ್ಕಾಗಿಯೆ ಸ್ಥಳೀಯ ಉತ್ಕೃಷ್ಟ ಈರುಳ್ಳಿ ಕೂಡ ಗುರುವಾರ 12 ಸಾವಿರ ಬೆಲೆಗೆ ವಹಿವಾಟು ನಡೆಸಿದೆ.

ದಕ್ಷಿಣ ಕರ್ನಾಟಕ ಸೇರಿದಂತೆ, ಹೈದರಾಬಾದ್‌ ಕೋಲ್ಕತ್ತಾಕ್ಕೆ ಕೂಡ ಹುಬ್ಬಳ್ಳಿ ಎಪಿಎಂಸಿಯಿಂದಲೆ ಈರುಳ್ಳಿ ಪೂರೈಕೆಯಾಗುತ್ತಿದೆ. ಆದರೆ, ಆವಕ ಮಾತ್ರ ತೀವ್ರ ಕುಸಿದಿರುವ ಕಾರಣದಿಂದ ಮುಂಬೈನಿಂದ 15 ಟನ್‌ ಈರುಳ್ಳಿಯನ್ನು 25 ಕಂಟೇನರ್‌ಗಳಲ್ಲಿ ಮಂಗಳವಾರ ಆವಕ ಮಾಡಿಕೊಳ್ಳಲಾಗಿತ್ತು. ಕಡುಗೆಂಪು ಬಣ್ಣದ ಈರುಳ್ಳಿಯನ್ನು ವ್ಯಾಪಾರಸ್ಥರು ಸಂತಸದಿಂದ ಖರೀದಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೆಚ್ಚಿನ ಬೆಲೆ ಆಸೆಯಿಂದ ಉಕ ಭಾಗದ ರೈತರು ಕೂಡ ಬೆಂಗಳೂರಿಗೆ ತಮ್ಮ ಈರುಳ್ಳಿಯನ್ನು ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಎಪಿಎಂಸಿಗೆ ಮತ್ತಷ್ಟು ಈರುಳ್ಳಿ ಆವಕವಾಗುವುದು ಕಡಿಮೆಯಾಗಿದೆ. ಮುಂಬೈ ಮಾರುಕಟ್ಟೆಯಲ್ಲೂ ಕ್ವಿಂಟಲ್‌ಗೆ 9000 ಇದ್ದು, ಅದು ಇಲ್ಲಿಗೆ ತಲುಪುವವರೆಗೆ 10 ಸಾವಿರ ಆಗಿರುತ್ತದೆ. ಮಹಾರಾಷ್ಟ್ರ, ಕೊಲ್ಲಾಪುರ, ಪೂಣಾದಲ್ಲಿ ಈಗ ಕೆಲ ದಿನಗಳ ಹಿಂದಷ್ಟೆ ಬೆಳೆ ಹಾಕಿರುವ ಕಾರಣ ಇನ್ನೊಂದು ತಿಂಗಳು ಅಲ್ಲಿಂದ ಈರುಳ್ಳಿ ಬರಲಾರದು ಎನ್ನುತ್ತಾರೆ ಈರುಳ್ಳಿ ಖರೀದಿದಾರರ ಸಂಘದ ಸಲೀಂ ಬ್ಯಾಹಟ್ಟಿ.

ಆದರೆ, ಶುಕ್ರವಾರ ಶನಿವಾರ ಗುಜರಾತ್‌ ಹಾಗೂ ರಾಜಸ್ಥಾನದಿಂದ ಈರುಳ್ಳಿ ಆವಕವಾಗಲಿದ್ದು, ಬೆಲೆ ಕೊಂಚ ಇಳಿಯುವ ಸಾಧ್ಯತೆ ಇತ್ತು. ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ, ಹೆಚ್ಚೆಂದರೆ 1 ಸಾವಿರ ಏರಿಳಿತವಾಗುವ ಸಾಧ್ಯತೆ ಇದೆ ಎಂದು ಈರುಳ್ಳಿ ಖರೀದಿದಾರರ ಸಂಘದ ಸಲೀಂ ಬ್ಯಾಹಟ್ಟಿ ತಿಳಿಸಿದರು.
 

Latest Videos
Follow Us:
Download App:
  • android
  • ios