ಕಬ್ಬು ಬೆಳೆ​ಗಾ​ರರ ಸಮ​ಸ್ಯೆ​ಗಳ ಪರಿಹಾರಕ್ಕೆ ಪ್ರಯತ್ನ : ಮೋದಿ

ದಶ​ಕ​ಗ​ಳಿಂದಲೂ ಕಬ್ಬು ಬೆಳೆ​ಗಾ​ರರು ಸಮ​ಸ್ಯೆ​ಗಳ ಸುಳಿ​ಯಲ್ಲಿ ಸಿಲು​ಕಿ​ದ್ದಾರೆ. ಕಬ್ಬು ಬೆಳೆ ಹೆಚ್ಚಾ​ದರೂ ಸಮಸ್ಯೆ, ಕಬ್ಬು ಬೆಳೆ ಕಡಿ​ಮೆ​ಯಾ​ದರೂ ಸಮಸ್ಯೆ ಎನ್ನು​ವಂತಾ​ಗಿದೆ. ಹಾಗಾಗಿ ಕಬ್ಬು ಬೆಳೆ​ಗಾ​ರರು ಹಿತ​ದೃ​ಷ್ಟಿ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿರ ಕೋಟಿ ಮೀಸ​ಲಿ​ಡುವ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ ಎಂದು ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಹೇಳಿ​ದರು.

Efforts to solve the problems of sugarcane growers: Modi snr

 ಎಂ. ಅಪ್ರೋಜ್‌ಖಾನ್‌

  ಮದ್ದೂ​ರು/​ಮಂಡ್ಯ :  ದಶ​ಕ​ಗ​ಳಿಂದಲೂ ಕಬ್ಬು ಬೆಳೆ​ಗಾ​ರರು ಸಮ​ಸ್ಯೆ​ಗಳ ಸುಳಿ​ಯಲ್ಲಿ ಸಿಲು​ಕಿ​ದ್ದಾರೆ. ಕಬ್ಬು ಬೆಳೆ ಹೆಚ್ಚಾ​ದರೂ ಸಮಸ್ಯೆ, ಕಬ್ಬು ಬೆಳೆ ಕಡಿ​ಮೆ​ಯಾ​ದರೂ ಸಮಸ್ಯೆ ಎನ್ನು​ವಂತಾ​ಗಿದೆ. ಹಾಗಾಗಿ ಕಬ್ಬು ಬೆಳೆ​ಗಾ​ರರು ಹಿತ​ದೃ​ಷ್ಟಿ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿರ ಕೋಟಿ ಮೀಸ​ಲಿ​ಡುವ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ ಎಂದು ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಹೇಳಿ​ದರು.

ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿಯಲ್ಲಿ  8480 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 117 ಕಿ.ಮೀ ಉದ್ದದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ- 275ರ ಪ್ಯಾಕೇಜ್‌ ಸಮರ್ಪಣೆ ಹಾಗೂ .4130 ಕೋಟಿ ವೆಚ್ಚದಲ್ಲಿ 93 ಕಿ.ಮೀ ಉದ್ದದ ಮೈಸೂರು - ಕುಶಾಲನಗರ ವಿಭಾಗ ರಾಷ್ಟ್ರೀಯ ಹೆದ್ದಾರಿ-275ರ 4 ಪ್ಯಾಕೇಜ್‌ಗಳು ಸೇರಿ ಒಟ್ಟು .12 ಸಾವಿರ ಕೊಟಿಗೂ ಅಧಿಕ ಮೌಲ್ಯದ 210 ಕಿ.ಮೀ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮರ್ಪಣೆ ಮತ್ತು ಶಿಲಾನ್ಯಾಸ ನೆರ​ವೇ​ರಿಸಿ ಮಾತ​ನಾ​ಡಿ​ದರು.

ಕಬ್ಬು ಬೆಳೆ​ಗಾ​ರರು ಸಕ್ಕರೆ ಕಾರ್ಖಾ​ನೆ​ ಅವ​ಲಂಬಿಸಿ ಜೀವನ ನಡೆ​ಸು​ವಂತಾ​ಗಿದೆ. ಹೀಗಾಗಿ ಕಬ್ಬಿನ ಸಮಸ್ಯೆಗೆ ಯಾವು​ದಾ​ದರು ಪರಿಹಾರ ಮಾರ್ಗ ಕಂಡು​ಕೊಳ್ಳುವುದು ಅನಿ​ವಾ​ರ್ಯ​ವಾ​ಗಿತ್ತು. ಅದಕ್ಕಾಗಿ ಬಿಜೆಪಿ ಸರ್ಕಾರ ಕಬ್ಬಿ​ನಿಂದ ಎಥೆ​ನಾಲ್‌ ಉತ್ಪಾ​ದಿ​ಸುವ ಮಾರ್ಗ ಕಂಡು​ಕೊಂಡಿತು. ಅತಿ ಹೆಚ್ಚು ಕಬ್ಬು ಉತ್ಪಾ​ದ​ನೆ​ಯಾ​ದರೆ ಎಥೆ​ನಾಲ್‌ ಉತ್ಪಾ​ದಿ​ಸುವ ಮೂಲಕ ರೈತ​ರಿಗೆ ಸಹಾಯ ಮಾಡಲು ನಿರ್ಧ​ರಿ​ಸಿ​ದೆ​ವು ಎಂ​ದ​ರು.

ಕಳೆದ ವರ್ಷ ದೇಶದ ಸಕ್ಕರೆ ಕಾರ್ಖಾ​ನೆ​ಗಳು 30 ಸಾವಿರ ಕೋಟಿ ಮೌಲ್ಯದ ಎಥೆ​ನಾ​ಲ್‌ ಅನ್ನು ಕಂಪ​ನಿ​ಗ​ಳಿಗೆ ಮಾರಾಟ ಮಾಡಲಾ​ಗಿದೆ. ಇದ​ರಿಂದ ರೈತ​ರಿಗೆ ಸರಿ​ಯಾದ ಸಮ​ಯಕ್ಕೆ ಹಣ ಪಾವ​ತಿ​ಸಲು ಸಾಧ್ಯ​ವಾ​ಗಿದೆ. 2013-14ರ ನಂತರ .70 ಸಾವಿರ ಕೋಟಿ ಮೌಲ್ಯ​ದ ಎಥೆನಾಲ್‌ ಅನ್ನು ಸಕ್ಕರೆ ಕಾರ್ಖಾ​ನೆ​ಗ​ಳಿಂದ ಖರೀ​ದಿಸಿ, ಆ ಹಣ​ ಕಬ್ಬು ಬೆಳೆ​ಗಾ​ರ​ರಿಗೆ ತಲು​ಪು​ವಂತೆ ಮಾಡಿ​ದ್ದೇವೆ ಎಂದರು.

ಈ ವರ್ಷ ಕೇಂದ್ರ ಬಜೆಟ್‌ನಲ್ಲಿ ಕಬ್ಬು ಬೆಳೆ​ಗಾ​ರ​ರಿಗಾಗಿ ಅನೇಕ ಯೋಜನೆ ರೂಪಿ​ಸ​ಲಾ​ಗಿದೆ. ಸಹಕಾರಿ ಕ್ಷೇತ್ರ​ದ​ಲ್ಲಿ​ರುವ ಸಕ್ಕರೆ ಕಾರ್ಖಾ​ನೆ​ಗ​ಳಿಗೆ 10 ಸಾವಿರ ಕೋಟಿ ಮೀಸ​ಲಿ​ಡು​ವು​ದರ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ. ಇದ​ರಿಂದ ಕಬ್ಬು ಬೆಳೆ​ಗಾ​ರ​ರಿಗೆ ಅನು​ಕೂ​ಲ​ವಾ​ಗ​ಲಿದೆ ಎಂದರು.

ಬಿಜೆಪಿ ಸರ್ಕಾರ ರೈತರ ಸಣ್ಣ ಸಣ್ಣ ಸಮ​ಸ್ಯೆ​ಗ​ಳನ್ನು ಶಾಶ್ವತ ವಾಗಿ ಬಗೆಹರಿಸಲು ಆದ್ಯತೆ ನೀಡುತ್ತಿದೆ. ಪಿಎಂ ಕಿಸಾನ್‌ ಸಮ್ಮಾನ್‌ ಯೋಜ​ನೆ​ಯಲ್ಲಿ ಕರ್ನಾ​ಟಕದ ರೈತರ ಖಾತೆ​ಗ​ಳಿಗೆ .12 ಸಾವಿರ ಕೋಟಿಗಿಂತಲೂ ಅಧಿಕ ಹಣ​ವನ್ನು ರೈತರ ಖಾತೆಗೆ ವರ್ಗಾ​ವಣೆ ಮಾಡಲಾ​ಗಿದ್ದು, ಅದ​ರಲ್ಲಿ ಮಂಡ್ಯದ 2.45 ಲಕ್ಷ ರೈತರಿಗೆ .600 ಕೋಟಿ ನೀಡಿದ್ದೇವೆ ಎಂದ​ರು.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜ​ನೆ​ಯಲ್ಲಿ ರೈತ​ರಿಗೆ ಕೇಂದ್ರ ಸರ್ಕಾರ .6 ಸಾವಿರ ನೀಡುತ್ತಿ​ದ್ದರೆ, ರಾಜ್ಯ ಸರ್ಕಾರ 4 ಸಾವಿರ ರುಪಾಯಿ ಸೇರಿಸಿ ನೀಡು​ತ್ತಿದೆ. ಇದು ಡಬಲ್‌ ಎಂಜಿನ್‌ ಸರ್ಕಾ​ರ​ದಿಂದ ರೈತ​ರಿಗೆ ಡಬಲ್‌ ಆದಾಯ ಸಿಗು​ತ್ತಿದೆ. ಅಲ್ಲದೆ, ಅವರ ಸಮ​ಸ್ಯೆ​ಗ​ಳ ಪರಿ​ಹಾ​ರವೂ ಆಗು​ತ್ತಿದೆ ಎಂದರು.

Latest Videos
Follow Us:
Download App:
  • android
  • ios