ತುಮಕೂರು(ಜ. 09)  ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋದ ಚಾಲಕನಿಗೆ ಸಚಿವ ಸುರೇಶ್ ಕುಮಾರ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. .ಎಸ್.ಆರ್.ಟಿ.ಸಿ ಬಸ್ ನಿಲ್ಲಿಸದ ಚಾಲಕನಿಗೆ ಸಚಿವ ಸುರೇಶ್ ಕುಮಾರ್ ಚಳಿ ಬಿಡಿಸಿದ್ದಾರೆ.

ಕೊರಟಗೆರೆ-ಬೆಂಗಳೂರು ರಸ್ತೆಯ ಐ.ಕೆ.ಕಾಲೋನಿ ಬಳಿ ಘಟನೆ ನಡೆದಿದೆ ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಸಚಿವ ಸುರೇಶ್ ಕುಮಾರ್ ಅವರ ಕಣ್ಣಿಗೆ ದೃಶ್ಯ ಬಿದ್ದಿದೆ. 

SSLC, PUC ಪರೋಕ್ಷೆ ದಿನಾಂಕ ಫಿಕ್ಸ್

ಶಾಲಾ ವಿದ್ಯಾರ್ಥಿಗಳು ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ಚಾಲಕ ತೆರಳಿದ್ದಾನೆ. ಇದನ್ನು ಗಮನಿಸಿದ ಸುರೇಶ್ ಕುಮಾರ್,ಬಸ್ ಅಡ್ಡಗಟ್ಟಿ ಚಾಲನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ಮುಂದೆ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುವಂತೆ ಚಾಲನಿಕೆ ಸೂಚನೆ ನೀಡಿದ್ದಾರೆ.