ರೈತರು ಹೈನುಗಾರಿಕೆಯಿಂದ ಪ್ರಗತಿ ಸಾಧಿಸಬೇಕೆಂಬ ದೃಢ ವಿಶ್ವಾಸದಿಂದ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ತಮ್ಮ ವೃತ್ತಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.

ಶಿರಾ : ರೈತರು ಹೈನುಗಾರಿಕೆಯಿಂದ ಪ್ರಗತಿ ಸಾಧಿಸಬೇಕೆಂಬ ದೃಢ ವಿಶ್ವಾಸದಿಂದ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ತಮ್ಮ ವೃತ್ತಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.

ತಾಲೂಕಿನ ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಮಾಣಿಕತೆಯಿಂದ ಸಂಘ ಮುನ್ನಡೆಸಿದಾಗ ಲಾಭದತ್ತ ಹೆಜ್ಜೆ ಹಾಕಲಿದ್ದು, ನಿಸ್ವಾರ್ಥ ಕೆಲಸ ಸಂಘದ ಲಾಭಾಂಶ ಹೆಚ್ಚಳಕ್ಕೆ ಕಾರಣವಾಗಲಿದೆ. ಆರ್ಥಿಕ ಪ್ರಗತಿಗೆ ಮಾಡುವಂತಹ ಪ್ರತಿಯೊಂದು ಕೆಲಸ ವ್ಯವಹಾರಿಕ ದೃಷ್ಟಿಯಿಂದ ಚಿಂತಿಸಿ ಹೆಜ್ಜೆ ಹಾಕಿದಾಗ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಂಗನಾಥಪ್ಪ, ತುಮುಲ್‌ ಒಕ್ಕೂಟದ ಉಪ ವ್ಯವಸ್ಥಾಪಕ ಮಧುಸೂದನ್‌, ವಿಸ್ತರಣಾಧಿಕಾರಿ ದಿವಾಕರ್‌, ಮುಖಂಡರಾದ ಚಂದನ್‌, ಉಗ್ರಪ್ಪ, ಪ್ರವೀಣ್‌, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ, ಕಾರ್ಯಕಾರಿ ಮಂಡಳಿಯ ಸದಸ್ಯರು, ಹಾಲು ಉತ್ಪಾದಕರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಮತಾಂತರ ಹುಟ್ಟಿದ್ದು ಬಾಲಿವುಡ್‌ನಿಂದ, ಮುಸ್ಲಿಮರು ಗೋ ರಕ್ಷಕರಾಗಬೇಕು; IAS ಅಧಿಕಾರಿ ನಿಯಾಝ್ ಖಾನ್!

25ಶಿರಾ2: ಶಿರಾ ತಾಲೂಕಿನ ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಎಸ್‌.ಆರ್‌.ಗೌಡ ಉದ್ಘಾಟಿಸಿದರು.

ಕೈ ಹಿಡಿದ ಹೈನುಗಾರಿಕೆ

ಸೋಲಾಪುರ: ಹಸು ಸಾಕಿ ಕೆಟ್ಟವರಿಲ್ಲ, ಕೈ ಹಿಡಿದವರಿಗೆ ಹಸು ಕಾಮಧೇನು, ಹಸುವಿನ ಪಾಲನೆ ಮಾಡಿ ಅವುಗಳ ಹಾಲು ಮಾರಿಯೇ ಯೇ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಹಾಗೆಯೇ ಇಲ್ಲೊಬ್ಬರು ರೈತರು ಹಸುವಿನ ಹಾಲು ಮಾರಿಯೇ ದೊಡ್ಡದಾದ ಬಂಗಲೆಯೊಂದನ್ನು ನಿರ್ಮಿಸಿದ್ದು ಅದಕ್ಕೆ ಗೋಧನ್ ನಿವಾಸ್ ಎಂದು ಹೆಸರಿಟ್ಟಿದ್ದಾರೆ. ಹಸುವನ್ನು ದೇವರಂತೆ ಪೂಜಿಸುವ ಇವರ ಮನೆ ದೇವರ ಕೋಣೆಯಲ್ಲಿ ಹಸುವಿನ ಫೋಟೋವಿದ್ದು, ಬಂಗಲೆಯ ತುತ್ತತುದಿಯಲ್ಲಿ ಹಸುವಿನ ಪ್ರತಿಮೆಯೊಂದನ್ನು ನಿಲ್ಲಿಸಿ ಗೋವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.