ಕೋಲಾರ(ಡಿ.21): ಕೆಜಿಎಫ್‌ ನಗರದಲ್ಲಿ ಭಾನುವಾರ ರಾತ್ರಿ ಕೆಲಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಸುಮಾರು ಮೂರು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ.

ಚಿನ್ನದ ಗಣಿ ಪ್ರದೇಶಗಳಲ್ಲಿ ರಾತ್ರಿ 8.36ರ ಸುಮಾರಿಗೆ ಭೂಕಂಪನದ ಅನುಭವ ಆಗಿದ್ದು, ಹಲವು ಮನೆಯಲ್ಲಿ ಪಾತ್ರೆಗಳು ಅಲುಗಾಡಿವೆ. ಇದರಿಂದ ಕೆಲಕ್ಷಣ ಆತಂಕವಾಗಿತ್ತು ಎಂದು ನಿವಾಸಿಗಳು ಹೇಳಿದ್ದಾರೆ.

ತಪ್ಪಾಗಿರುವುದು ನಿಜ: ನೌಕರರ ಕ್ಷಮೆ ಯಾಚಿಸಿದ ಆ್ಯಪಲ್‌ ಐಫೋನ್‌ ಘಟಕ

ಕೆಜಿಎಫ್‌ನಲ್ಲಿ ಭೂಮಿ ಕಂಪಿಸುವುದು ಸಾಮಾನ್ಯ. ಚಿನ್ನದ ಗಣಿಯಲ್ಲಿ ಮಣ್ಣು ಕುಸಿದಾಗ ಈ ರೀತಿ ಭೂಮಿ ಕಂಪಿಸುತ್ತದೆ ಎಂದು ಕೆಲವರು ಹೇಳಿದ್ದಾರೆ.