ತೆಲಂಗಾಣದಲ್ಲಿ ಭೂಕಂಪ: ಕಲಬುರಗಿ ಜಿಲ್ಲೆಯ ಕೆಲವೆಡೆ ಕಂಪನದ ಅನುಭವ

*   ರಿಕ್ಟರ್‌ ಮಾಪಕದಲ್ಲಿ 3.9 ದಾಖಲು
*   ಭೂಮಿಯಿಂದ ಭಾರೀ ಸದ್ದು 
*   ಅಲುಗಾಡಿದ ಮನೆಯಲ್ಲಿದ್ದ ಪಾತ್ರೆ, ಪಗಡೆಗಳು 

Earthquake Experienced in Some Parts of the Kalaburagi District grg

ಚಿಂಚೋಳಿ(ಕಲಬುರಗಿ)(ಆ.21): ತೆಲಂಗಾಣದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.9 ದಾಖಲಾಗಿದೆ. ಈ ಪರಿಣಾಮ ತಾಲೂಕಿನ ಗಡಿಕೇಶ್ವರ ಸೇರಿ ಹಲವು ಗ್ರಾಮಗಳಲ್ಲಿ ಶುಕ್ರವಾರ ಭೂಮಿಯಿಂದ ಭಾರೀ ಸದ್ದು ಕೇಳಿಸಿದ್ದು, ಭೂಕಂಪದ ಅನುಭವ ಆಗಿದೆ. ಇದರಿಂದ ಗ್ರಾಮಸ್ಥರು ಜೀವಭಯದಿಂದ ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ.

ಗಡಿಕೇಶ್ವರ, ಭೂತಪೂರ, ಚಿಂತಪಳ್ಳಿ, ರಾಯಕೂಡ, ರಾಜಾಪೂರ, ಬೆಡಕಪಳ್ಳಿ, ಭಂಟನಳ್ಳಿ, ಹಲಚೇರಿ, ಹೊಸಳ್ಳಿ, ತೇಗಲತಿಪ್ಪಿ ಕೆರೋಳಿ, ಕೊಡಂಪಳ್ಳಿ ಬೆಳಗ್ಗೆ ಮತ್ತು ಮಧ್ಯಾಹ್ನ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿದ್ದೆ. ಇದರಿಂದ ಮನೆಯಲ್ಲಿದ್ದ ಪಾತ್ರೆ, ಪಗಡೆಗಳು ಅಲುಗಾಡಿವೆ. 

ದೆಹಲಿ, ಹರ್ಯಾಣ ಭಾಗದಲ್ಲಿ ಕಂಪಿಸಿದ ಭೂಮಿ; ಮನೆಯಿಂದ ಹೊರಬಂದ ಜನ!

ಗಡಿಕೇಶ್ವರ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಭೂಮಿ ಆಗಾಗ ಕಂಪಿಸುತ್ತಿತ್ತು. ಈಗ ಗಡಿಕೇಶ್ವರ ಗ್ರಾಮದಿಂದ ಕೇವಲ 2-3 ಕಿ.ಮೀ. ದೂರದಲ್ಲಿರುವ ಗ್ರಾಮಗಳಲ್ಲೂ ಭೂಮಿ ನಡಗುತ್ತಿರುವುದು ಭೀತಿಗೆ ಕಾರಣವಾಗಿದೆ.
 

Latest Videos
Follow Us:
Download App:
  • android
  • ios