ಕೊರೋನಾ ವಿರುದ್ಧ ಹೋರಾಟದೊಂದಿಗೆ ಆದಾಯ ಗಳಿಕೆ
ಲಾಕ್‌ಡೌನ್‌ನಿಂದಾಗಿ ಎಲ್ಲ ವ್ಯವಹಾರಗಳು ಮುಚ್ಚಿದ್ದರೂ, ಇಲ್ಲಿನ ಹೊಲಿಗೆ ತರಬೇತಿ ಸಂಸ್ಥೆಯೊಂದು ಈ ವಿಷಮ ಪರಿಸ್ಥಿತಿಯನ್ನೇ ತನ್ನ ಆದಾಯದ ಜೊತೆಗೆ ಸಮಾಜ ಸೇವೆಯ ದಾರಿಯನ್ನಾಗಿ ಮಾಡಿಕೊಂಡಿದೆ.
ಉಡುಪಿ(ಏ.25): ಲಾಕ್‌ಡೌನ್‌ನಿಂದಾಗಿ ಎಲ್ಲ ವ್ಯವಹಾರಗಳು ಮುಚ್ಚಿದ್ದರೂ, ಇಲ್ಲಿನ ಹೊಲಿಗೆ ತರಬೇತಿ ಸಂಸ್ಥೆಯೊಂದು ಈ ವಿಷಮ ಪರಿಸ್ಥಿತಿಯನ್ನೇ ತನ್ನ ಆದಾಯದ ಜೊತೆಗೆ ಸಮಾಜ ಸೇವೆಯ ದಾರಿಯನ್ನಾಗಿ ಮಾಡಿಕೊಂಡಿದೆ.
ಉಡುಪಿಯ ರಥಬೀದಿಯ ಪಕ್ಕದ ಭೂವರಾಹ ಕಾಂಪ್ಲೆಕ್ಸ್‌ನಲ್ಲಿನ ಫ್ಯಾಷನ್ ಹೊಲಿಗೆ ತರಬೇತಿ ಸಂಸ್ಥೆಯ ಆಶಾ ಎಂ. ಭಟ್ ಅವರು ತಮ್ಮಲ್ಲಿ ಹೊಲಿಗೆ ಕಲಿಯುತ್ತಿರುವ ಯುವತಿಯರಿಗೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಬೇಕಾಗಿರುವ ಬಟ್ಟೆಯ ಮಾಸ್ಕ್ ತಯಾರಿಸುವ ತರಬೇತಿ ನೀಡಿದ್ದಾರೆ, ಈ ಮೂಲಕ ಅವರಿಗೆ ನಿಯಮಿತವಾದ ಆದಾಯ ಬರುವಂತೆ ಮಾಡಿದ್ದಾರೆ, ಈ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೂ ತಮ್ಮ ಕೊಡುಗೆ ನೀಡುತಿದ್ದಾರೆ.
23 ಸಾವಿರ ಮೀನುಗಾರರಿಗೆ 60 ಕೋಟಿ ರು. ಸಾಲಮನ್ನಾ ಬಿಡುಗಡೆ: ಕೋಟ
ಈ ಕೇಂದ್ರದಲ್ಲಿ ಪ್ರಸ್ತುತ ಆಶಾ, ಮಲ್ಲಮ್ಮ, ವಿದ್ಯಾ, ಸುನೀತಾ, ಜ್ಯೋತಿ, ಶೀಲಾ, ಪರ್ಹಾನ, ಗಂಗಾ, ಸುರೇಖಾ, ಸುಮಾ, ಕಲಾವತಿ, ನಾಗರತ್ನ ಹಾಗೂ ಮಮತಾ ಎಂಬ 13 ಮಂದಿ ತರಬೇತಿ ಪಡೆಯುತಿದ್ದಾರೆ. ಲಾಕ್‌ಡೌನ್ ನಿಂದಾಗಿ ಮನೆಯಲ್ಲಿಯೇ ಕುಳಿತು ಕಾಲಹರಣ ಮಾಡದೆ ಅವರು ಆಶಾ ಭಟ್ ಅವರೊಂದಿಗೆ ಕೈಜೋಡಿಸಿದ್ದು, ತಂತಮ್ಮ ಮನೆಯಲ್ಲಿಯೇ ಮಾಸ್ಕ್ ಹೊಲಿಯುತ್ತಾ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವುಗಳ ಮಾರಾಟದಿಂದ ಸ್ವಲ್ಪಮಟ್ಟಿನ ಆದಾಯವನ್ನೂ ಪಡೆಯುತ್ತಿದ್ದಾರೆ.
ಲಾಕ್ ಡೌನ್ ಇನ್ನೊಂದು ಮುಖ; ಆಹಾರ ಸಿಗದೇ ಪ್ರಾಣಿಗಳ ಪರದಾಟ
ಕೇವಲ ಆದಾಯಕ್ಕಾಗಿಯೇ ಅಲ್ಲ: ಇವತ್ತು ಕೊರೋನಾ ತಡೆಯುವುದಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದೆ, ಆದರೇ ಅಂಗಡಿಗಳಲ್ಲಿ ಮಾಸ್ಕ್ಗಳು ಸಿಗುತ್ತಿಲ್ಲ, ಎಲ್ಲರೂ ದುಬಾರಿ ಮಾಸ್ಕ್ ಧರಿಸುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ನಾವು ಕಡಿಮೆ ಬೆಲೆಯ ಬಟ್ಟೆಯ ಮಾಸ್ಕ್ ತಯಾರಿಸುವುದಕ್ಕೆ ಆರಂಭಿಸಿದೆವು.
ಕೋತಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿರುವ ಪಿಎಸ್‌ಐ: ಖಾಕಿಧಾರಿಯ ಮಾನವೀಯತೆ
ಇದರಿಂದ ಕೆಲಸಕ್ಕೆ ತಕ್ಕ ಆದಾಯ ಬರುತ್ತಿದೆ. ಕೇವಲ ಆದಾಯಕ್ಕಾಗಿಯೇ ನಾವು ಮಾಸ್ಕ್‌ಗಳನ್ನು ಹೊಲಿಯುತ್ತಿಲ್ಲ, ಕೊರೊನಾ ವಿರುದ್ಧ ಹೋರಾಟಕ್ಕೆ ನಮ್ಮ ಕೈಲಾದ ಬೆಂಬಲ ನೀಡಬೇಕು ಎನ್ನುವ ಉದ್ದೇಶದಿಂದ ಈ ಕೆಲಸ ಮಾಡುತಿದ್ದೇವೆ ಎನ್ನುತ್ತಾರೆ ಆಶಾ ಎಂ. ಭಟ್.