ಲಾಕ್‌ಡೌನ್ ಯಾಕ್ ಮಾಡ್ತೀರಿ?, Lockdown ಅಂದ್ರೆ ಏನು?: ಕುಡುಕನ ಪ್ರಶ್ನೆಗೆ ಪೊಲೀಸರು ಸುಸ್ತು..!
‘ಲಾಕ್‌ಡೌನ್ ಯಾಕ್ ಮಾಡೀರಿ?’, ‘ಲಾಕ್‌ಡೌನ್ ಅಂದ್ರ ಏನು?’, ‘ಹೀಂಗ ಲಾಕ್‌ಡೌನ್ ಮಾಡಿದ್ರ ನಾವೇನು ಮಾಡೋಣ’ ಎಂದು ಪೊಲೀಸರಿಗೆ ಪ್ರಶ್ನಿಸುತ್ತಿದ್ದ ಪಾನಮತ್ತ ವ್ಯಕ್ತಿ| ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆದ ಘಟನೆ| ಕುಡುಕನ ಕಿರಿಕಿರಿಗೆ ಬೇಸತ್ತ ಪೊಲೀಸರು|
ಹುಬ್ಬಳ್ಳಿ(ಏ.25): ಕೊರೋನಾ 2ನೇ ಅಲೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವೀಕೆಂಡ್ ಲಾಕ್‌ಡೌನ್ ಜಾರಿಗೊಳಿಸಿದೆ. ಆದರೆ ಇಲ್ಲೊಬ್ಬ ಕುಡುಕ ಲಾಕ್‌ಡೌನ್ ಇದ್ದರೂ ಯಾವುದೇ ಭಯವಿಲ್ಲದಂತೆ ಬೇಕಾಬಿಟ್ಟಿಯಾಗಿ ಓಡಾಡುವ ಜತೆಗೆ ಪೊಲೀಸರಿಗೆ ಹಾಗೂ ಇನ್ನಿತರರಿಗೆ ಕಿರಿಕಿರಿ ಮಾಡಿದ ಪ್ರಸಂಗ ಇಲ್ಲಿನ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆದಿದೆ.
ಪದೇ ಪದೇ ಪೊಲೀಸರ ಬಳಿ ಬರುವುದು ‘ಲಾಕ್‌ಡೌನ್ ಯಾಕ್ ಮಾಡೀರಿ?’, ‘ಲಾಕ್‌ಡೌನ್ ಅಂದ್ರ ಏನು?’, ‘ಹೀಂಗ ಲಾಕ್‌ಡೌನ್ ಮಾಡಿದ್ರ ನಾವೇನು ಮಾಡೋಣ’ ಎಂದು ಪ್ರಶ್ನಿಸುತ್ತಿದ್ದ.
'ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸವಾಗುತ್ತಿದೆ'
ಪೊಲೀಸರು ನಾಲ್ಕಾರು ಬಾರಿ ಸಮಾಧಾನದಿಂದಲೇ ಆತನಿಗೆ ತಿಳಿ ಹೇಳಿ ಕಳುಹಿಸುತ್ತಿದ್ದರು. ಪೊಲೀಸರು ಹೇಳಿ ಅತ್ತ ಕಳುಹಿಸುತ್ತಿದ್ದಂತೆ ಮತ್ತೆ ಬರುತ್ತಿದ್ದ. ಜೋರಾಗಿ ಕಿರುಚುತ್ತಿದ್ದ. ಇದರಿಂದ ಪೊಲೀಸರಿಗೆ ಕಿರಿಕಿರಿಯಾಗತೊಡಗಿತು. ಕೊನೆಗೆ ಈತನ ಕಾಟಕ್ಕೆ ಬೇಸತ್ತು ಮೂವರು ಪೊಲೀಸರು ಸೇರಿಕೊಂಡು ಆತನನ್ನು ಎತ್ತಿಕೊಂಡು ದೂರ ಹೋಗಿ ಬಿಟ್ಟು ಬಂದರು. ಮನೆಯಲ್ಲೇ ಇರಬೇಕು. ಮನೆಯಿಂದ ಹೊರಬರಬಾರದು ಎಂದು ತಾಕೀತು ಮಾಡಿದರು.