ಬೆಂಗಳೂರು (ಸೆ.15): ನಟಿ ರಾಗಿಣಿಯನ್ನು ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಕೈದಿಗಳ ಕೊಣೆಯಲ್ಲಿ ಪ್ರತ್ಯೇಕವಾಗಿ ಇರಿಸಿದೆ. ಇತರೆ ಆರೋಪಿಗಳನ್ನು ಸಾಮಾನ್ಯ ಕೈದಿಗಳ ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"

ಇದಕ್ಕೂ ಮುನ್ನ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ವಹಿಸಿದ ಬಳಿಕ ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿ ಪಡಿಸುವುದಕ್ಕೂ ಮುನ್ನ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಎಲ್ಲರಿಗೂ ನೆಗೆಟಿವ್‌ ವರದಿ ಬಂದಿದೆ. ಆದರೂ ಜೈಲು ನಿಯಮದ ಪ್ರಕಾರ 21 ದಿನಗಳ ಪ್ರತ್ಯೇಕ ಕ್ವಾರಂಟೈನ್‌ನಲ್ಲಿ ಇವರನ್ನು ಇಡಲಾಗಿದೆ.

ಡ್ರಗ್ಸ್ ಪೆಡ್ಲರ್ ಜೊತೆಗಿನ ಸಚಿವ ಆರ್.ಅಶೋಕ್ ಫೋಟೋ ವೈರಲ್...! ...

ಕೇಂದ್ರ ಕಾರಾಗೃಹಕ್ಕೆ ಸಂಜೆ ಪ್ರವೇಶಿಸಿದ ರಾಗಿಣಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕ ಕಾರಾಗೃಹದ ಅಧಿಕಾರಿಗಳು, ರಾಗಿಣಿ ಸೇರಿದಂತೆ ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿಯಾಗಿ ಹೆಸರು ನೋಂದಾಯಿಸಿದರು. ರಾಗಿಣಿ-8912, ಪ್ರಶಾಂತ್‌ ರಂಕಾ-8913, ಲೂಮ್‌ ಪೆಪ್ಪರ್‌-8914, ರಾಹುಲ್‌-8915 ಹಾಗೂ ನಿಯಾಜ್‌ -8916 ವಿಚಾರಣಾಧೀನ ಕೈದಿಗಳಾಗಿದ್ದಾರೆ.