Asianet Suvarna News Asianet Suvarna News

ಬೆಂಗ್ಳೂರಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸಲು ಸರ್ಕಾರಕ್ಕೆ 3 ದಿನ ಗಡುವು

ಮಾ. 16ರಿಂದ ಮೂರು ದಿನ ಎಲ್ಲ ಆಟೋಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಿ ಚಾಲನೆ ಮಾಡುತ್ತೇವೆ. ಭಾನುವಾರದೊಳಗೆ ಸರ್ಕಾರ ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಎಲ್ಲ ಆಟೋರಿಕ್ಷಾ ಚಾಲಕರ ಸಂಘಟನೆಗಳು ಆಟೋರಿಕ್ಷಾ ಸೇವೆ ಸ್ಥಗಿತ. 

Drivers 3 Days Deadline to Government For Ban Bike Taxi in Bengaluru grg
Author
First Published Mar 16, 2023, 7:28 AM IST

ಬೆಂಗಳೂರು(ಮಾ.16):  ನಗರದಲ್ಲಿ ‘ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿ’ಗಳನ್ನು ನಿಷೇಧಿಸುವಂತೆ ಮೂರು ದಿನಗಳ ಗಡುವು ನೀಡಿರುವ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ, ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮಾ.20ರಂದು ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದರ್ಶ,ಆಟೋ ಮತ್ತು ಟ್ಯಾಕ್ಸಿ ಡ್ರೈವ​ರ್ಸ್‌ ಯೂನಿಯನ್‌ ಅಧ್ಯಕ್ಷ ಎಂ.ಮಂಜುನಾಥ, ಮಾ 16ರಿಂದ ಮೂರು ದಿನ ಎಲ್ಲ ಆಟೋಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಿ ಚಾಲನೆ ಮಾಡುತ್ತೇವೆ. ಭಾನುವಾರದೊಳಗೆ ಸರ್ಕಾರ ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಎಲ್ಲ ಆಟೋರಿಕ್ಷಾ ಚಾಲಕರ ಸಂಘಟನೆಗಳು ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಲಿವೆ. ಜತೆಗೆ ಅಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ತಿಳಿಸಿದರು.

Bengaluru: ರ‍್ಯಾಪಿಡೋ-ಬೌನ್ಸ್ ಬೈಕ್‌, ಟ್ಯಾಕ್ಸಿಗಳ ಸೇವೆ ರದ್ದತಿಗೆ ಆಗ್ರಹಿಸಿ ಆಟೋ ಚಾಲಕ ವಿಷ ಸೇವನೆ: ಆಸ್ಪತ್ರೆಗೆ ದಾಖಲು

ಆಟೋರಿಕ್ಷಾ ಡ್ರೈವ​ರ್ಸ್‌ ಯೂನಿಯನ್‌(ಸಿಐಟಿಯು) ಅಧ್ಯಕ್ಷ ಸಿ.ಎನ್‌.ಶ್ರೀನಿವಾಸ್‌, ನಗರದಲ್ಲಿ ಆಟೋರಿಕ್ಷಾಗಳ 21 ಸಂಘಟನೆಗಳು ಹಾಗೂ 2.10 ಲಕ್ಷ ಆಟೋಗಳಿವೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನವರು ಇದೇ ಉದ್ಯೋಗ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆ್ಯಪ್‌ ಆಧಾರಿತ ಅನಧಿಕೃತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳು ಹೆಚ್ಚಿದೆ. ಆಟೋ ಚಾಲಕರ ದಿನದ ಸಂಪಾದನೆಯನ್ನು ಹಗಲು ದರೋಡೆ ಮಾಡುತ್ತಿದ್ದು, ಬದುಕು ನಡೆಸುವುದು ಕಷ್ಟವಾಗಿದೆ ಎಂದರು.

ಪೀಸ್‌ ಆಟೋ ಮತ್ತು ಟ್ಯಾಕ್ಸಿ ಡ್ರೈವ​ರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರಘುನಾರಾಯಣ ಗೌಡ, ಕರವೇ ಆಟೋ ಘಟಕ ಅಧ್ಯಕ್ಷ ಜಿ.ಎಸ್‌.ಕುಮಾರ್‌, ಬೆಂಗಳೂರು ಆಟೋ ಸೇನೆ ಅಧ್ಯಕ್ಷ ಎಂ.ಆರ್‌.ಚೇತನ್‌ ಇದ್ದರು.

Follow Us:
Download App:
  • android
  • ios