Asianet Suvarna News Asianet Suvarna News

ಕುಡಿವ ನೀರಿಗೆ ತೊಂದರೆ ಆಗಬಾರದು: ಸಚಿವರ ತಾಕೀತು

ಮುಂಬರುವ ದಿನಗಳಲ್ಲಿ ನೀರಿಗೆ ಆಗಬಹುದಾದ ತೊಂದರೆಯನ್ನು ನಿವಾರಿಸಲು ಎಲ್ಲ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸಮರೋಪಾದಿಯಲ್ಲಿ ಈಗಲೇ ಸಿದ್ದತೆ ಮಾಡಿಕೊಳ್ಳಬೇಕೆಂದು ಗೃಹ ಸಚಿವರು ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ತಾಕೀತು ಮಾಡಿದರು.

Drinking water should not be disturbed: Minister's warning snr
Author
First Published Nov 28, 2023, 8:38 AM IST

 ತುರುವೇಕೆರೆ:  ಮುಂಬರುವ ದಿನಗಳಲ್ಲಿ ನೀರಿಗೆ ಆಗಬಹುದಾದ ತೊಂದರೆಯನ್ನು ನಿವಾರಿಸಲು ಎಲ್ಲ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸಮರೋಪಾದಿಯಲ್ಲಿ ಈಗಲೇ ಸಿದ್ದತೆ ಮಾಡಿಕೊಳ್ಳಬೇಕೆಂದು ಗೃಹ ಸಚಿವರು ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬರಗಾಲ ನಿಮ್ಮಿತ್ತ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ತಾಲೂಕಿನಲ್ಲಿ ನೀರಾವರಿ ಅನುಕೂಲತೆ ಹೊಂದಿರುವ ರೈತರಿಗೆ ಮೇವಿನ ಬೀಜ ಉಚಿತ ನೀಡಿ ಮೇವು ಬೆಳೆಸಲು ಪ್ರೋತ್ಸಾಹಿಸಿ ಎಂದು ಪಶುಸಂಗೋಪನಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ತುರುವೇಕೆರೆಯಲ್ಲಿ ಎಲ್ಲ ಪ್ರಗತಿ ಕುಂಠಿತವಾಗಿದೆ. ಅಧಿಕಾರಿಗಳು ಮನಸ್ಸಿಟ್ಟು ಕೆಲಸ ಮಾಡಬೇಕು. ಯಾವ ಇಲಾಖೆ ಪ್ರಗತಿ ಸಾಧಿಸಿಲ್ಲವೋ ಅಂತಹ ಅಧಿಕಾರಿಗಳ ಮೇಲೆ ಕ್ರಮ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದರು.

೧೪೩೮೮ ಹೆಕ್ಟೇರ್ ರಾಗಿ ಬಿತ್ತನೆಯಾಗಿದ್ದು ಶೇ 10 ರಷ್ಟು ಬೆಳೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಬೆಳೆ ವಿಮೆ ಮಾಡಿಸುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ. ಈ ಬಾರಿ ಕೇವಲ ೯೩೩೫ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು ಶೇ ೫೦ ರಷ್ಟು ಆದರೂ ರೈತರಿಗೆ ಬೆಳೆವಿಮೆ ಮಾಡಿಸಬೇಕಿತ್ತು. ಅದನ್ನು ಕೃಷಿ ಇಲಾಖೆ ಮಾಡಿಲ್ಲ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ತುಂಬಾ ಕಡಿಮೆಯಾಗಿದೆ. ಮುಂದಿನ ವರ್ಷ ಶೇ ೫೦ ಕ್ಕೂ ಹೆಚ್ಚು ಬೆಳೆ ವಿಮೆ ಮಾಡಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಕೃಷಿ ಸಹಾಯಕ ನಿರ್ದೇಶಕಿ ಪೂಜಾಗೆ ಡಾ.ಜಿ.ಪರಮೇಶ್ವರ್ ಸೂಚಿಸಿದರು.

ಅಸಮಾಧಾನ: ನರೇಗದಲ್ಲಿ ಬಹಳ ಕುಂಠಿತ ಕಂಡಿರುವ ಪಂಚಾಯಿತಿಯಲ್ಲಿ ನರೇಗ ಕೆಲಸ ಮಾಡಿಸಬೇಕು. ಅಂತಹ ಪಂಚಾಯಿತಿಗಳಿಗೆ ವಾರದಲ್ಲಿ ಮೂರು ದಿನ ಭೇಟಿ ನೀಡಿ ಇಲ್ಲವೇ ನೋಡಲ್ ಅಧಿಕಾರಿ ಹಾಕಿ ಕೆಲಸ ಮಾಡಿಸಬೇಕು ಎಂದು ಇ.ಒ ಶಿವರಾಜಯ್ಯರಿಗೆ ಸಚಿವರು ಸೂಚಿಸಿದರು.

ಕುಡಿವ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಬೋರ್‌ವೆಲ್ ಕೊರೆಸಬೇಕು. ತಾಲೂಕಿನಲ್ಲಿ ಕೆಟ್ಟಿರುವ ಆರ್.ಓ ಪ್ಲಾಂಟ್ ಗಳನ್ನು ರಿಪೇರಿ ಮಾಡಿಸಿ ಶುದ್ಧ ಕುಡಿವ ನೀರು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ತಾಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಬೆಳಕು ಚೆಲ್ಲಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಫ್ರಭು, ಜಿಲ್ಲಾ ಎಸ್.ಪಿ. ಆಶೋಕ್, ತಿಪಟೂರು ಎ.ಸಿ. ಸಪ್ತಶ್ರೀ, ತಹಸೀಲ್ದಾರ್ ರೇಣುಕುಮಾರ್, ಇ.ಓ ಶಿವರಾಜಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದದ್ದು ಚರ್ಚೆಗೆ ಗ್ರಾಸವಾಯಿತು.

Follow Us:
Download App:
  • android
  • ios