Asianet Suvarna News Asianet Suvarna News

ಅಧಿಕ ಮತಗಳಿಂದ ಗೆದ್ದವರಲ್ಲಿ ಡಾ.ಮಂಜುನಾಥ್ 6ನೇ ಸ್ಥಾನ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಡಾ.ಸಿ.ಎನ್. ಮಂಜುನಾಥ್ ಈಗ ಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

Dr  Manjunath is 6th among those who won with the highest number of votes snr
Author
First Published Jun 7, 2024, 1:31 PM IST

 -ಎಂ.ಅಫ್ರೋಜ್ ಖಾನ್

 ರಾಮನಗರ :  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಡಾ.ಸಿ.ಎನ್. ಮಂಜುನಾಥ್ ಈಗ ಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಕನಕಪುರ ಹಾಗೂ ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನೂತನ ಸಂಸದ ಡಾ.ಮಂಜುನಾಥ್ ಸೇರಿದಂತೆ ಒಟ್ಟು 9 ಮಂದಿ ಸಂಸತ್ ಪ್ರವೇಶಿಸಿದ್ದಾರೆ. ಇವರಲ್ಲಿ 6 ಸಂಸದರು ಗಳಿಸಿದ ಮತಗಳು ದಾಖಲೆಯಾಗಿ ಉಳಿದಿದೆ.

ಈ ಕ್ಷೇತ್ರದಿಂದ ಸಂಸದರಾಗಿದ್ದ ಸಿ.ಕೆ.ಜಾಫರ್ ಷರೀಫ್, ಎಂ.ವಿ.ಚಂದ್ರಶೇಖರ್ ಮೂರ್ತಿ, ಎಚ್.ಡಿ.ಕುಮಾರಸ್ವಾಮಿ, ರಾಜಶೇಖರನ್, ಡಿ.ಕೆ.ಸುರೇಶ್ ಅಧಿಕ ಮತಗಳಿಂದ ಗೆಲುವು ಸಾಧಿಸಿದವರಾಗಿದ್ದರು. ಇವರ ಜೊತೆಗೆ ಡಾ.ಮಂಜುನಾಥ್ ಹೆಸರು ಕೂಡ ಸೇರ್ಪಡೆಯಾಗಿದೆ.

2024ರ ಚುನಾವಣೆಯಲ್ಲಿ ಅಂಚೆ ಮತಗಳು ಸೇರಿ ಒಟ್ಟು 19,20,679 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ (10,79,002) ಪ್ರತಿಸ್ಪರ್ಧಿ ಕಾಂಗ್ರೆಸ್ ನ ಡಿ.ಕೆ.ಸುರೇಶ್ (8,09,355) ವಿರುದ್ಧ ಶೇಕಡ 14.05ರಷ್ಟು (2,69,647) ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ದಾಖಲೆಯಾಗಿಯೇ ಉಳಿದ ಗೆಲುವು :

ಕನಕಪುರ ಸಂಸತ್ ಕ್ಷೇತ್ರದಿಂದ ಸಿ.ಕೆ.ಜಾಫರ್ ಷರೀಫ್ ಸಾಧಿಸಿದ ಗೆಲುವು ದಾಖಲೆಯಾಗಿಯೇ ಉಳಿದಿದೆ. ಜಯದೇವ ಹೃದ್ರೋಗ ಸಂಸ್ಥೆ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಂದಲೂ ಜಾಫರ್ ಷರೀಫ್ ಹೆಸರಿನಲ್ಲಿರುವ ದಾಖಲೆ ಮುರಿಯಲು ಸಾಧ್ಯವಾಗಲೇ ಇಲ್ಲ.

1971ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಕೆ.ಜಾಫರ್ ಷರೀಫ್ ಚಲಾವಣೆಯಾದ ಒಟ್ಟು ಮತಗಳಲ್ಲಿ ಮಾನ್ಯವಾದ ಮತಗಳ ಪೈಕಿ ಶೇ.61.14 ಮತಗಳ ಭಾರೀ ಅಂತರದಿಂದ ಪ್ರಚಂಡ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದರು.

ಆಗಷ್ಟೇ ಕ್ಷೇತ್ರದ ಚೊಚ್ಚಲ ಸಂಸದರಾಗಿದ್ದ ಎಂ.ವಿ.ರಾಜಶೇಖರನ್ ಕಾಂಗ್ರೆಸ್ ತೊರೆದು ನ್ಯಾಷನಲ್ ಕಾಂಗ್ರೆಸ್ ಓರಿಜಿನಲ್ (ಎನ್‌ಸಿಒ) ಪಕ್ಷದಿಂದ ಕಣಕ್ಕಿಳಿದರೆ, ಸಿ.ಕೆ.ಜಾಫರ್ ಷರೀಫ್ ಕಾಂಗ್ರೆಸ್ ನ ಹುರಿಯಾಳು ಆಗಿದ್ದರು. ಪಕ್ಷೇತರರಾಗಿ ಅಬ್ದುಲ್ ರಶೀದ್ ಸ್ಪರ್ಧೆ ಮಾಡಿದ್ದರು.

ಕ್ಷೇತ್ರದಲ್ಲಿ ಒಟ್ಟು 4,84,298 ಮತದಾರರಲ್ಲಿ 3,13,659 ಮಂದಿ (ಶೇ.64.77) ಮತ ಚಲಾಯಿಸಿದ್ದರು. ಇದರಲ್ಲಿ 3,05,086 ಮತಗಳು ಮಾತ್ರ ಮಾನ್ಯಗೊಂಡಿದ್ದವು. ಇದರಲ್ಲಿ ಸಿ.ಕೆ.ಜಾಫರ್ ಷರೀಫ್ - 2,43,987 (ಶೇ.79.97), ಎಂ.ವಿ.ರಾಜಶೇಖರನ್ - 57,468 (ಶೇ.18.84) ಹಾಗೆಯೇ ಅಬ್ದುಲ್ ರಷೀದ್ - 3631 (ಶೇ.1.19) ಮತಗಳು ಲಭಿಸಿದ್ದವು.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಸಿ.ಕೆ.ಜಾಫರ್ ಷರೀಫ್ ಅವರು ಪ್ರತಿಸ್ಪರ್ಧಿ ಎಂ.ವಿ.ರಾಜಶೇಖರ್ ವಿರುದ್ಧ 1,86,519 (ಶೇ.61.13) ಭಾರೀ ಮತಗಳ ಅಂತರದಿಂದ ಜಯ ಸಾಧಿಸಿದರು. ಈಗಲೂ ಆ ಗೆಲುವು ದಾಖಲೆಯಾಗಿಯೇ ಇತಿಹಾಸದ ಪುಟದಲ್ಲಿ ಉಳಿದಿದೆ.

6 ಬಾರಿ ಗೆದ್ದ ಚಂದ್ರಶೇಖರಮೂರ್ತಿಗೆ 2ನೇ ಸ್ಥಾನ :

ಈ ಕ್ಷೇತ್ರದಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಎಂ.ವಿ.ಚಂದ್ರಶೇಖರ ಮೂರ್ತಿ ಹೆಸರು ಹೆಚ್ಚು ಮತಗಳಿಂದ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

1989 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ವಿ.ಚಂದ್ರಶೇಖರ ಮೂರ್ತಿ 4,72,265 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜನತಾ ದಳದ ಸಿ.ನಾರಾಯಣಸ್ವಾಮಿ (2,17,044) ವಿರುದ್ಧ 2,55,221 (ಶೇ.28.64) ಮತಗಳ ಹೆಚ್ಚಿನ ಅಂತರದಿಂದ ಗೆಲುವು ಸಾಸಿದ ಎರಡನೇ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 13,55,284ಮತದಾರರ ಪೈಕಿ 9,23,505 ಮತಗಳು ಚಲಾವಣೆಯಾಗಿ 8,91,182 ಮತಗಳು ಮಾನ್ಯಗೊಂಡಿದ್ದವು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೂರನೇ ಸ್ಥಾನದಲ್ಲಿದ್ದಾರೆ. 2009ರ ಚುನಾವಣೆಯಲ್ಲಿ ಒಟ್ಟು 19,04,135 ಮತದಾರರ ಪೈಕಿ 11,02,833 ಮಂದಿ ಮತ ಚಲಾಯಿಸಿದ್ದರು. ಇದರಲ್ಲಿ ಕುಮಾರಸ್ವಾಮಿ 4,93,177 ಮತ ಪಡೆದು ಸಮೀಪ ಸ್ಪರ್ಧಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ (3,63,027) ಅವರನ್ನು 1,30,275 (ಶೇ.27.25) ಮತಗಳಿಂದ ಪರಾಭವಗೊಳಿಸಿದ್ದರು.

ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ 1967ರಲ್ಲಿ ನಡೆದು ಚುನಾವಣೆಯಲ್ಲಿ ಮೊದಲ ಬಾರಿಗೆ ಸಂಸದರಾಗಿ ಕಾಂಗ್ರೆಸ್‌ನ ಎಂ.ವಿ.ರಾಜಶೇಖರನ್ ಆಯ್ಕೆಯಾಗಿದ್ದರು. ಅಧಿಕ ಮತ ಗಳಿಸಿದವರ ಪಟ್ಟಿಯಲ್ಲಿ ಇವರ ಹೆಸರು 4ನೇ ಸ್ಥಾನದಲ್ಲಿದೆ.

ಆ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಸ್ಟೇಟ್ ಪಾರ್ಟಿಯಿಂದ ಬಿ.ಕೆ.ಪುಟ್ಟರಾಮಯ್ಯ ಸೇರಿ 6 ಮಂದಿ ಕಣದಲ್ಲಿದ್ದರು. ಒಟ್ಟು 4,44,344 ಮತದಾರರಲ್ಲಿ 2,81,621 ಮಂದಿ ಚಲಾಯಿಸಿದ ಮತಗಳ ಪೈಕಿ 2,66,380 ಮತಗಳು ಮಾನ್ಯವಾಗಿದ್ದವು. ರಾಜಶೇಖರನ್ 1,21,394 (ಶೇ.45.57) ಮತಗಳನ್ನು ಪಡೆದು ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎಂ.ಬಿ.ದಾಸ್ (73,198 ಮತ)ಎದುರು 48,196 (ಶೇ.18.09)ಮತಗಳ ಅಂತರದಿಂದ ಗೆಲುವು ಕಂಡಿದ್ದರು.

ಇನ್ನು ಹ್ಯಾಟ್ರಿಕ್ ಸಂಸದರಾಗಿದ್ದ ಡಿ.ಕೆ.ಸುರೇಶ್ 2014ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ವಿರುದ್ಧ ಶೇಕಡ 16.02ರಷ್ಟು ಅಧಿಕ ಮತ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ. ಆ ಚುನಾವಣೆಯಲ್ಲಿ ಚಲಾವಣೆಯಾದ 21,90,398 ಮತಗಳಲ್ಲಿ ಡಿ.ಕೆ.ಸುರೇಶ್ 6,52,723 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ (4,21,243) ಅವರನ್ನು 2,31,480 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಗೆದ್ದವರ ಶೇಕಡಾವಾರು ಮತಗಳ ಅಂತರವರ್ಷ ಗೆದ್ದ ಅಭ್ಯರ್ಥಿ ಚಲಾವಣೆಯಾದ ಮತ ಲಭಿಸಿದ ಮತ ಗೆಲುವಿನ ಅಂತರ ಶೇಕಡವಾರು

1967 ಎಂ.ವಿ. ರಾಜಶೇಖರನ್(ಕಾಂಗ್ರೆಸ್) 2,66,380 1,21,394 18.09%

1971 ಸಿ.ಕೆ. ಜಾಫರ್ ಷರೀಫ್(ಕಾಂಗ್ರೆಸ್) 3,05,086 2,43,987 61.13%

1977 ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್) 4,07,458 1,92,111 1.14%

1980 ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್) 4,72,345 2,52,383 27.21%

1984 ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್) 6,38,720 3,05,210 1.10%

1989 ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್) 8,91,182 4,72,265 28.64%

1991 ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್) 7,92,837 3,01,455 4.22%

1996 ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್) 10,45,911 4,40,444 10.27%

1998 ಎಂ.ಶ್ರೀನಿವಾಸ್(ಬಿಜೆಪಿ) 12,06,041 4,70,387 1.36%

1999 ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್) 2,33,825 5,32,910 2.76%

2004 ತೇಜಸ್ವಿನಿ ರಮೇಶ್(ಕಾಂಗ್ರೆಸ್) 15,52,416 5,83,920 7.51%

2009 ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್) 19,04,135 4,93,302 27.25%

2014 ಡಿ.ಕೆ. ಸುರೇಶ್(ಕಾಂಗ್ರೆಸ್) 21,90,398 6,52,723 16.02 %

2019 ಡಿ.ಕೆ. ಸುರೇಶ್(ಕಾಂಗ್ರೆಸ್) 16,21,906 8,78,258 12.75%

2024 ಡಾ.ಸಿ.ಎನ್.ಮಂಜುನಾಥ್(ಬಿಜೆಪಿ) 19,20,679 10,79,002 14.05%

6ಕೆಆರ್ ಎಂಎನ್ 1,2,3,4,5,6ಜೆಪಿಜಿ

1.ಸಿ.ಕೆ.ಜಾಫರ್ ಷರೀಫ್

2.ಎಂ.ವಿ.ಚಂದ್ರಶೇಖರ ಮೂರ್ತಿ

3.ಎಚ್ .ಡಿ.ಕುಮಾರಸ್ವಾಮಿ

4.ರಾಜಶೇಖರನ್

5.ಡಿ.ಕೆ.ಸುರೇಶ್

6.ಡಾ.ಸಿ.ಎನ್ .ಮಂಜುನಾಥ್

Latest Videos
Follow Us:
Download App:
  • android
  • ios