Asianet Suvarna News Asianet Suvarna News

Mandya: ಕಸಾಪ ಕಾರ್ಯ​ಕ್ರ​ಮ ಕ​ಡೆ​ಗ​ಣಿ​ಸ​ಬೇ​ಡಿ: ಮ​ಹೇಶ್‌ ಜೋ​ಶಿ ಎ​ಚ್ಚ​ರಿ​ಕೆ

ಸರ್ಕಾರಿ ಅ​ಧಿ​ಕಾ​ರಿ​ಗಳು ಪ​ರಿ​ಷ​ತ್ತಿನ ಕಾ​ರ‍್ಯ​ಕ್ರ​ಮ​ಗ​ಳನ್ನು ಯಾ​ವುದೇ ಕಾ​ರ​ಣಕ್ಕೂ ಕ​ಡೆ​ಗ​ಣಿ​ಸ​ಬಾ​ರದು ಎಂದು ರಾಜ್ಯ ಘಟಕದ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸ​ಲಹೆ ನೀ​ಡಿದರು. 

Dont ignore Kannada Sahitya Parishat program says mahesh joshi gvd
Author
First Published Sep 11, 2022, 10:25 AM IST

ಮಂಡ್ಯ (ಸೆ.11): ಸರ್ಕಾರಿ ಅ​ಧಿ​ಕಾ​ರಿ​ಗಳು ಪ​ರಿ​ಷ​ತ್ತಿನ ಕಾ​ರ‍್ಯ​ಕ್ರ​ಮ​ಗ​ಳನ್ನು ಯಾ​ವುದೇ ಕಾ​ರ​ಣಕ್ಕೂ ಕ​ಡೆ​ಗ​ಣಿ​ಸ​ಬಾ​ರದು ಎಂದು ರಾಜ್ಯ ಘಟಕದ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸ​ಲಹೆ ನೀ​ಡಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 2021-22ನೇ ಸಾಲಿನ ಎಸ್‌ಎಸ್‌ಎಲ್‌​ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ ಶೇ.100 ರಷ್ಟು ಅಂಕ ಪಡೆದ ಮತ್ತು ಜಿಲ್ಲಾ, ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ 375 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ.100 ರಷ್ಟು ಫಲಿತಾಂಶ ಪಡೆದ ಪ್ರೌಢಶಾಲೆಗಳ 208 ಮುಖ್ಯ ಶಿಕ್ಷಕರುಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಕ​ನ್ನಡ ಸಾ​ಹಿತ್ಯ ಪ​ರಿ​ಷ​ತ್ತಿಗೆ ಅ​ದ​ರದ್ದೇ ಆದ ಇ​ತಿ​ಹಾ​ಸ​ವಿದೆ. ಮೌ​ಲ್ಯ​ಗ​ಳನ್ನು ಉ​ಳಿ​ಸಿ​ಕೊಂಡು ಬಂದಿದೆ. ಪ​ರಿ​ಷತ್‌ ಕಾ​ರ‍್ಯ​ಕ್ರ​ಮ​ಗ​ಳಿಗೆ ಒ​ಪ್ಪಿ​ಕೊಂಡ ಮೇಲೆ ಆ​ಗ​ಮಿ​ಸುವ ಸೌ​ಜ​ನ್ಯ​ವನ್ನು ಅ​ಧಿಕಾ​ರಿ​ವರ್ಗ ಬೆ​ಳೆ​ಸಿ​ಕೊ​ಳ್ಳ​ಬೇಕು. ಪ​ರಿ​ಷತ್‌ ಕಾ​ರ‍್ಯ​ಕ್ರ​ಮ​ಗ​ಳನ್ನು ಕ​ಡೆ​ಗ​ಣಿಸಿ ಅನ್ಯ ಕಾ​ರ‍್ಯ​ಕ್ರ​ಮದ ನೆ​ಪ​ವೊಡ್ಡಿ ತ​ಪ್ಪಿ​ಸಿ​ಕೊ​ಳ್ಳುವ ಮೂ​ಲಕ ಪ​ರಿ​ಷತ್‌ಗೆ ಅ​ವ​ಮಾನ ಮಾ​ಡ​ಬೇಡಿ ಎಂದು ಹೇ​ಳಿ​ದರು. ಪರಿಷತ್ತನ್ನು ಅಧಿಕಾರಿಗಳು ಹಗುರವಾಗಿ ಕಾಣಬಾರದು ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನ ಸಮಾರಂಭಕ್ಕೆ ಆಹ್ವಾನಿತರಾಗಿರುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪವಿಭಾಗಾ​ಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸಮಾರಂಭಕ್ಕೆ ಗೈರು ಹಾಜರಾಗಿ​ರುವ ಬಗ್ಗೆ ಬೇ​ಸರ ವ್ಯ​ಕ್ತ​ಪ​ಡಿ​ಸಿ​ದರು. 

ಸುಮಲತಾ ಪಕ್ಷ ಸೇರ್ಪಡೆ ಸದ್ಯಕ್ಕಿಲ್ಲ: 2023 ಚುನಾವಣೆವರೆಗೆ ಕಾದುನೋಡುವ ಸಾಧ್ಯತೆ

ಎಸ್‌.ಬಿ.ಎಜುಕೇಶನ್‌ ಟ್ರಸ್ವ್‌ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಈ.ಸಿ.ನಿಂಗರಾಜಗೌಡ, ಉದಯ ಚಾರಿಟಬಲ್‌ ಟ್ರಸ್ಟ್‌ನ ಕದಲೂರು ಉದಯ್‌, ಜೆಡಿಎಸ್‌ ಮುಖಂಡ ಮಹಾಲಿಂಗೇಗೌಡ ಮುದ್ದನಘಟ್ಟ ಮಾತನಾಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ, ಅರಮನೆ ಶಂಕರ ಸೇವಾ ಪ್ರತಿಷ್ಠಾನದ ಅರಮನೆ ಶಂಕರ್‌, ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಕಾರ್ಯದರ್ಶಿಗಳಾದ ಧನಂಜಯ ದರಸಗುಪ್ಪೆ, ಹುಸ್ಕೂರು ಕೃಷ್ಣೇಗೌಡ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಭಾಗವಹಿಸಿದ್ದರು.

ಕಾವ್ಯ ಭಾಷೆಯ ಅತ್ಯುತ್ತಮ ಫಲ: ಕಾವ್ಯ ಭಾಷೆಯ ಅತ್ಯುತ್ತಮ ಫಲವಾಗಿದ್ದು ಕಾವ್ಯದ ಅನುಕೂಲವಿರುವುದೇ ಅದರ ಒಳಗೊಳ್ಳುವಿಕೆಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು. ನಗರದ ಎಸ್‌ಜೆಎಂವಿ ಮಹಿಳಾ ಕಾಲೇಜು ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌, ಪರಿವರ್ತನ ರಾಣಿಬೆನ್ನೂರು, ಸ್ವರಾಜ್ಯದ ಅಮೃತ ಮಹೋತ್ಸವ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕದ ವೈಭವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಪರಂಪರೆಯ ಹತ್ತಿಯನ್ನು ಹಿಂಜಿಕೊಂಡು ವರ್ತಮಾನದ ಬತ್ತಿ ನೇಯುತ್ತ ಭವಿಷ್ಯದ ಬೆಳಕಿಗೆ ದೀಪವನ್ನು ಹಚ್ಚುವ ಸಾಧ್ಯತೆ ಕಾವ್ಯದ್ದಾಗಿದೆ ಎಂದರು.

Heavy Rain: ಮಂಡ್ಯದಲ್ಲಿ ವರುಣಾರ್ಭಟಕ್ಕೆ ಹಳ್ಳಿ ರಸ್ತೆ ಹಾಳು: ಕಬ್ಬು ಸಾಗಣೆಗೆ ಸಂಕಷ್ಟ

ದಕ್ಷಿಣ ಮಧ್ಯ ಕ್ಷೇತ್ರದ ಪ್ರಜ್ಞಾಪ್ರವಾಹ ಸಂಯೋಜಕ ರಘುನಂದನ ಮಾತನಾಡಿ, ಭಾರತದಲ್ಲಿರುವ ಎಲ್ಲ ಭಾಷೆಗಳು ರಾಷ್ಟ್ರಭಾಷೆಗಳು. ಕನ್ನಡ ಪ್ರೀತಿ, ಭಾರತದ ಭಕ್ತಿ ಎರಡೂ ಒಂದಕ್ಕೊಂದು ಪೂರಕವಾಗಿವೆ. ರಸಸ್ವಾದದಿಂದ ಕವನಗಳ ವಾಚನ ಮಾಡಬೇಕು. ಕವನಗಳು ಭಾವುಕರಿಗೆ ತೆರೆದುಕೊಳ್ಳುವ ಪ್ರಪಂಚವಾಗಿವೆ. ಪ್ರಜ್ಞಾವಂತರು ಬರವಣಿಗೆಯಲ್ಲಿ ತೊಡಗಿಸಿಕೊಂಡು ಭಾವನೆಗಳನ್ನು ಕಟ್ಟಿಕೊಡುವ ಕವನಗಳ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು. ವೀರಗಾಸೆ, ಯಕ್ಷಗಾನ ಕರ್ನಾಟಕದ ವಿಶಿಷ್ಟ್ಯ ಕಲಾಪ್ರಕಾರಗಳಾಗಿವೆ. ಮಡಿವಂತಿಕೆಯಿಲ್ಲದೆ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವುದು ಕರ್ನಾಟಕ ವೈಭವದ ಚಿಂತನೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಪ್ರಮುಖವಾಗಿವೆ. ನಾವೆಲ್ಲರೂ ಯೋಜನಾಬದ್ಧವಾಗಿ ಕನ್ನಡದ ಬಳಕೆ ಮಾಡುವುದು ಕರ್ನಾಟಕ ವೈಭವದ ಉದ್ದೇಶವಾಗಿದೆ ಎಂದರು.

Follow Us:
Download App:
  • android
  • ios