ಮಂಗಳೂರು(ಆ.30): ದಾರಿಯಲ್ಲಿ, ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಬಯ್ಯಬೇಡಿ. ಕೊಠಡಿಗೆ ಬಂದು ಬುದ್ಧಿ ಹೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ಮಂಗಳೂರಿನಲ್ಲಿ ತವರು ಜಿಲ್ಲೆಯ ಪಕ್ಷದ ಕಾರ್ಯಕರ್ತರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿ ಆರು ದಿನಗಳ ಪ್ರವಾಸ ಮಾಡಿ, ಒಂದು ದಿನದ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇನೆ. ಜಿಲ್ಲೆಯ ಶಾಸಕರು ಕಾರ್ಯಕರ್ತರು ತಾವೇ ಸಂಸದರು ಎಂದು ತಿಳಿದು ಕೆಲಸ ಮಾಡಿಕೊಂಡು ಹೋಗಿ ಎಂದರು.

ಮಂಗಳೂರು: ರಾಜಕೀಯ ಪ್ರವೇಶದ ಗುಟ್ಟು ಬಿಚ್ಚಿಟ್ರು ನಳಿನ್‌ ..!

ನನ್ನಿಂದ ತಪ್ಪಾದಾಗ ನನ್ನ ಕೊಠಡಿಗೆ ಬಂದು ನನ್ನಲ್ಲಿ ಮಾತನಾಡಿ, ಅದು ಬಿಟ್ಟು ದಾರಿಯಲ್ಲಿ, ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಬಯ್ಯಬೇಡಿ. ನನ್ನಲ್ಲಿ ಅದನ್ನು ನೋಡುವಂಥ ಮೊಬೈಲ್‌ ಇಲ್ಲ. ನಾನು ಬಳಸುತ್ತಿರುವುದು ಬೇಸಿಕ್‌ (ಸಾಮಾನ್ಯ) ಮೊಬೈಲ್‌ ಎಂದು ನಳಿನ್‌ ಕುಮಾರ್‌ ಹೇಳಿದರು.

ವಿಮಾನ ನಿಲ್ದಾಣದಿಂದ ಅದ್ದೂರಿ ಮೆರವಣಿಗೆ:

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ಗುರುವಾರ ದ.ಕ. ಜಿಲ್ಲೆಗೆ ಆಗಮಿಸಿದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ವಿಮಾನ ನಿಲ್ದಾಣದಿಂದ ಭವ್ಯವಾಗಿ ಸ್ವಾಗತಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸೇರಿದಂತೆ ಪಕ್ಷದ ಪ್ರಮುಖರು ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬರಮಾಡಿಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ವಾಹನದಲ್ಲಿ ಕೈಬೀಸುತ್ತಾ ಬಂದ ನಳಿನ್‌ ಕುಮಾರ್‌ ಅವರಿಗೆ ದಾರಿಯುದ್ಧಕ್ಕೂ ಅಲ್ಲಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹಸ್ತಲಾಘವ ನೀಡಿ ಶುಭ ಕೋರಿದರು. ಇದರಿಂದಾಗಿ ಸಮಾರಂಭ ಸ್ಥಳಕ್ಕೆ ಆಗಮಿಸಲು ಸುಮಾರು ಒಂದೂವರೆ ತಾಸು ಬೇಕಾಯಿತು.