ರಕ್ತದಾನ ಮಾಡಿ ಸಾರ್ಥಕತೆ ಪಡೆದುಕೊಳ್ಳಿ: ಮಂಜುನಾಥ್
ರಕ್ತದಾನ ನಮ್ಮ ದೇಹದ ಮೂಲಕ ಮಾಡಬಹುದಾದ ಅತ್ಯಂತ ಪವಿತ್ರವಾದ ದಾನವಾಗಿದೆ. ರಕ್ತದಾನದಲ್ಲಿ ಜೀವನದ ಸಾರ್ಥಕತೆಯನ್ನು ಪಡೆದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬ ಯುವಕರು ಯುವತಿಯರು ಯಾವುದೇ ಜಾತಿ, ಮತ, ಪ್ರಾಂತ, ಪಕ್ಷ ಭೇದವಿಲ್ಲದೆ ರಕ್ತದಾನವನ್ನು ಮಾಡಬೇಕೆಂದು ಸಿರಿ ಯೋಗ ಕೇಂದ್ರದ ಯೋಗ ತರಬೇತುದಾರರಾದ ಮಂಜುನಾಥ ಬಿ ಹೇಳಿದರು.
ಶಿರಾ : ರಕ್ತದಾನ ನಮ್ಮ ದೇಹದ ಮೂಲಕ ಮಾಡಬಹುದಾದ ಅತ್ಯಂತ ಪವಿತ್ರವಾದ ದಾನವಾಗಿದೆ. ರಕ್ತದಾನದಲ್ಲಿ ಜೀವನದ ಸಾರ್ಥಕತೆಯನ್ನು ಪಡೆದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬ ಯುವಕರು ಯುವತಿಯರು ಯಾವುದೇ ಜಾತಿ, ಮತ, ಪ್ರಾಂತ, ಪಕ್ಷ ಭೇದವಿಲ್ಲದೆ ರಕ್ತದಾನವನ್ನು ಮಾಡಬೇಕೆಂದು ಸಿರಿ ಯೋಗ ಕೇಂದ್ರದ ಯೋಗ ತರಬೇತುದಾರರಾದ ಮಂಜುನಾಥ ಬಿ ಹೇಳಿದರು.
ನಗರದ ಶ್ರೀ ರಂಗನಾಥ ಕಾಲೇಜು ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 350ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಸಿರಿ ಯೋಗ ಬಳಗ ಮತ್ತು ರಾಷ್ಟೊ್ರೕತ್ಥಾನ ರಕ್ತ ನಿಧಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತವನ್ನು ಆರೋಗ್ಯವಂತ ವ್ಯಕ್ತಿಯೂ, ಅನಾರೋಗ್ಯ ಪೀಡಿತ, ತಲೈಮಿಯ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ರಕ್ತದ ಅವಶ್ಯಕತೆ ಇರುವ ತಾಯಂದಿರಿಗೆ ನಾವು ಕೊಡುವಂತ ರಕ್ತವು ಉಪಯೋಗವಾಗುತ್ತದೆ. 18 ವರ್ಷ ಮೇಲ್ಪಟ್ಟಆರೋಗ್ಯವಂತ ವ್ಯಕ್ತಿಯು ಆರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡುವುದರ ಮೂಲಕ ತನ್ನ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಮತ್ತೊಂದು ಜೀವದ ಉಳಿವಿಗೆ ಸಹಾಯ ಮಾಡಬಹುದಾಗಿದೆ. ಸ್ವರಾಜ್ಯ ನಿರ್ಮಾಣವೇ ನನ್ನ ಉಸಿರು, ಅದಕ್ಕಾಗಿ ಬದುಕಿದ ವೀರ ಹಿಂದೂ ಸಾಮ್ರಾಟ ಶಿವಾಜಿ ಅವರ ಸ್ಮರಣೆಗಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಶಂಕರಪ್ಪ ಮಾತನಾಡಿ, ರಕ್ತದಾನ ಜಗತ್ತಿನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದದ್ದು ರಕ್ತದ ಕೊರತೆ ಇರುವವರಿಗೆ ರಕ್ತದಾನವನ್ನು ಮಾಡಿ ಇನ್ನೊಬ್ಬರಿಗೆ ಸಹಾಯ ಮಾಡಿ ಎಂದರು.
ರಾಷ್ಟೊ್ರೕತ್ಥಾನ ರಕ್ತ ನಿಧಿ ಕೇಂದ್ರದ ಡಾ. ಅಕ್ಷತಾ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಿ ಹೊಸ ರಕ್ತದ ಉತ್ಪಾದನೆಗೆ ಸಹಾಯವಾಗುತ್ತದೆ ಎಂದರು.
ಶಿಬಿರದಲ್ಲಿ ಯೋಗ ಬಳಗದ ಸದಸ್ಯರಾದ ನಾಮದೇವ್, ನಂಜುಂಡಿ, ಸಿರಿ ವಿಕ್ರಂ, ಎಂಟಿಆರ್ ಚಂದ್ರಣ್ಣ, ಪುಲಿಕೇಶಿ, ರವಿ, ಪುನೀತ್, ದಾದ ಲೇಖರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು. ರಕ್ತದಾನ ಶಿಬಿರದಲ್ಲಿ ಸುಮಾರು 78 ಯೂನಿಟ್‌ಗಳ ರಕ್ತವನ್ನು ಸಂಗ್ರಹಿಸಿ ರಾಷ್ಟೊ್ರೕತ್ಥಾನ ರಕ್ತನಿಧಿ ಕೇಂದ್ರಕ್ಕೆ ನೀಡಿದರು.