ಬೀದರ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ರಾಹುಲ್ ಗಾಂಧಿ?

ಎಲ್ಲಾ ಪಕ್ಷಗಳು ಲೋಕಸಭಾ ಚುನಾವಣೆಗೆ ಭರ್ಜರಿ ಪ್ಲಾನ್ ನಡೆಸುತ್ತಿದೆ. ಧರ್ಮಸಿಂಗ್ ನಿಧನರಾದ ಬಳಿಕ ಬೀದರ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹುಡುಕುತ್ತಿದೆ ಕೈ ಪಾಳಯ.  ಧರ್ಮಸಿಂಗ್ ಪುತ್ರ ವಿಜಯ್ ಸಿಂಗ್ ಹೆಸರು ಕೇಳಿಬಂದಿತ್ತು. ರಾಹುಲ್ ಗಾಂಧಿ ಅವರನ್ನೇ ಎರಡನೇ ಕ್ಷೇತ್ರವಾಗಿ ಬೀದರ್ ನಿಂದ ಕಣಕ್ಕಿಳಿಸಲು ದಿನೇಶ್ ಗುಂಡುರಾವ್ ಪ್ಲಾನ್ ಮಾಡಿದ್ದಾರೆ. 

Does Rahul Gandhi contest from Bidar for Loksabha Election 2019?

ಬೀದರ್ (ಆ. 12): ಕರ್ನಾಟಕದಲ್ಲಿ‌ ಕಾಂಗ್ರೆಸ್ ಗೆ ಜೀವಕಳೆ ತುಂಬಲು ಮಾಸ್ಟರ್ ಪ್ಲಾನ್ ಸಿದ್ದವಾಗಿದೆ.  ಕರ್ನಾಟಕದಿಂದ ನೆಹರು ಕುಟುಂಬದ ಕುಡಿಯನ್ನು ಕಣಕ್ಕಿಳಿಸಲು ಕೆಪಿಸಿಸಿ ಉತ್ಸುಕವಾಗಿದೆ. 

ಧರ್ಮಸಿಂಗ್ ನಿಧನರಾದ ಬಳಿಕ ಬೀದರ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹುಡುಕುತ್ತಿದೆ ಕೈ ಪಾಳಯ.  ಧರ್ಮಸಿಂಗ್ ಪುತ್ರ ವಿಜಯ್ ಸಿಂಗ್ ಹೆಸರು ಕೇಳಿಬಂದಿತ್ತು. ರಾಹುಲ್ ಗಾಂಧಿ ಅವರನ್ನೇ ಎರಡನೇ ಕ್ಷೇತ್ರವಾಗಿ ಬೀದರ್ ನಿಂದ ಕಣಕ್ಕಿಳಿಸಲು ದಿನೇಶ್ ಗುಂಡುರಾವ್ ಪ್ಲಾನ್ ಮಾಡಿದ್ದಾರೆ. 

ಬೀದರ್ ನಲ್ಲಿ ಹಾಲಿ ಬಿಜೆಪಿ ಸಂಸದರಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ ಗೆದ್ದು ತನ್ನ ಬಲ ಹೆಚ್ಚಿಸಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ‌ ಕಾಂಗ್ರೆಸ್ ಗೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಎಐಸಿಸಿ ಅಧ್ಯಕ್ಷರನ್ನೇ ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ.  ರಾಹುಲ್ ಸ್ಪರ್ಧೆಯಿಂದ ಉತ್ತರ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಅನ್ನೋದು ದಿನೇಶ್ ಗುಂಡುರಾವ್ ವಾದ.

ಬಾಗಲಕೋಟೆ, ಬೀಜಾಪುರ, ಗುಲ್ಬರ್ಗಾ, ರಾಯಚೂರು ಬಳ್ಳಾರಿ, ಕೊಪ್ಪಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜೀವಕಳೆ ತುಂಬಬಹುದು. ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಪರ್ಧಿಸುವುದರ ಜೊತೆಗೆ ಕರ್ನಾಟಕದ ಬೀದರ್ ನಲ್ಲೂ ರಾಹುಲ್ ಕಣಕ್ಕಿಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪೂರಕ ವಾತಾವರಣ ನಿರ್ಮಿಸಬಹುದು. ಕರ್ನಾಟಕದಿಂದ ಈ ಹಿಂದೆ ಇಂದಿರಾಗಾಂಧಿ, ಸೋನಿಯಾಗಾಂಧಿ ಲೋಕಸಭೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದರು.  ಇದೀಗ ರಾಹುಲ್ ಅವರನ್ನು ಕರ್ನಾಟಕದಿಂದ ಕಣಕ್ಕಿಳಿಸಿ ಇಲ್ಲಿಂದಲೇ‌ ಲೋಕಸಭೆ ರಣಕಹಳೆ ಮೊಳಗಿಸಲು ಕೈ ಪಾಳಯ ಪ್ಲಾನ್ ಮಾಡಿದೆ. 

ಈ ಬಗ್ಗೆ  ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ರಾಹುಲ್ ಜೊತೆ ಮಾತುಕತೆ ನಡೆಸಿದ್ದಾರೆ. ಬೀದರ್ ನಲ್ಲಿ ಸಮಾವೇಶ ಆಯೋಜಿಸಿ ನೋಡಿ ತೀರ್ಮಾನ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ವೇಣುಗೋಪಾಲ್ ಗೆ ತಿಳಿಸಿದ್ದಾರೆ. 


ಬೀದರ್ ನೆಹರು ಕ್ರೀಡಾಂಗಣದಲ್ಲಿ ಒಂದೂವರೆ ಲಕ್ಷ ಜನರನ್ನ ಸೇರಿಸಿ ರಾಹುಲ್ ಸ್ಪರ್ಧೆಗೆ ಆಸಕ್ತಿ ಮೂಡಿಸಲು ಕೆಪಿಸಿಸಿ ಪ್ಲಾನ್ ಮಾಡಿದೆ.  ಸಮಾವೇಶದ ಬಳಿಕ ಎರಡನೇ ಕ್ಷೇತ್ರವಾಗಿ ಬೀದರ್ ಕ್ಷೇತ್ರ ಆಯ್ಕೆ ಬಗ್ಗೆ ರಾಹುಲ್ ಗಾಂಧಿ ನಿರ್ಧರಿಸಲಿದ್ದಾರೆ. 
 

Latest Videos
Follow Us:
Download App:
  • android
  • ios