ನೀನು ಗೂಂಡಾ ಆದ್ರೆ ನಾನು ಗೌಡ... ನನಗೆ ಧೈರ್ಯ ಇದ್ದಿದ್ದಕ್ಕೆ ನಿನ್ನ ಕುಟುಂಬದ ವಿರುದ್ಧ ನಾಲ್ಕು ಬಾರಿ ಸ್ಪರ್ಧಿಸಿದ್ದೆ ಎಂದು ಬಿಜೆಪಿ ಮುಖಂಡರೋರ್ವರು ಅವಾಜ್ ಹಾಕಿದ್ದಾರೆ. 

ಬಾಗಲಕೋಟೆ (ಡಿ.20):  ಹುನಗುಂದ ಮತಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಮಧ್ಯೆ ಟಾಕ್ ವಾರ್‌ ನಿಲ್ಲುತ್ತಿಲ್ಲ. ಹುನಗುಂದ ಕ್ಷೇತ್ರದಲ್ಲಿ ಮಾಜಿ ಶಾಸಕ ಕಾಶಪ್ಪನವರ್ ವಿರುದ್ಧ ಗುಡುಗಿ ಶಾಸಕ ದೊಡ್ಡನಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ. 

ಪೊಲೀಸ್ ಠಾಣೆಯಲ್ಲಿ ಸಿಪಿಐ ಅಯ್ಯನಗೌಡ ಪಾಟೀಲ್ ಗೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಾನಂದ ಕಾಶಪ್ಪನವರ್ ವಿರುದ್ಧ ದೊಡ್ಡನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಪ್ರತಿಯೊಂದಕ್ಕೂ ದೊಡ್ಡನಗೌಡ ಪಾಟೀಲ್ ಕಾರಣ ಎನ್ನುವೆ. ನೀನು ಏಕವಚನದಲ್ಲಿ ಇನ್ಮುಂದೆ ಮಾತನಾಡಿದರೆ. ಅದೇ ಭಾಷೆಯಲ್ಲಿ ನಾವು ಉತ್ತರ ನೀಡುತ್ತೆವೆ. ನಾನು ಯಾರಿಗೂ ಹೆದರಬೇಕಿಲ್ಲ, ಜಗ್ಗವನೂ ಅಲ್ಲ ಬಗ್ಗುವವನೂ ಅಲ್ಲ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಮನಸ್ಸಿನ ನೋವು ತೋಡಿಕೊಂಡರು : ಜಿಟಿ ದೇವೇಗೌಡ

ನಿನ್ನಂತವನಿಗೆ ಹೆದರಿದ್ದರೆ ನಿಮ್ಮ ಕುಟುಂಬದ ವಿರುದ್ಧ ನಾಲ್ಕು ಬಾರಿ ಸ್ಪರ್ಧೆ ಮಾಡುತ್ತಿರಲಿಲ್ಲ. ಧೈರ್ಯದಿಂದಲೇ ನಿಮ್ಮ ವಿರುದ್ಧ ನಿಂತಿದ್ದು. ನಾನೊಬ್ಬ ಗೌಡ ಇದ್ದೇನೆ, ನೀನು ಗೂಂಡಾ ಆಗಿದ್ರೆ ನಾನು ಗೌಡ ಎಂದು ಟಾಂಗ್ ಕೊಟ್ಟಿದ್ದಾರೆ.