Asianet Suvarna News

'ಕೊರೋನಾ : ವೈದ್ಯರ ನಿರ್ಲಕ್ಷ್ಯದಿಂದಲೇ ಅರ್ಧದಷ್ಟು ಸಾವು'

  • ರಾಜ್ಯದಲ್ಲಿ ಭಾರೀ ಏರಿಕೆಯಾಗಿದ್ದ ಕೊರೋನಾ ಸೋಂಕು
  • ಕೊರೋನಾ ಸೋಂಕಿಗೆ ಅತ್ಯಧಿಕ ಸಂಖ್ಯೆಯಲ್ಲಿ ಜನರ ಬಲಿ
  • ಹೆಚ್ಚು ಸಾವು ನೋವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ
Doctor Negligence is the reson behind More Covid Death says Suresh gowda snr
Author
Bengaluru, First Published Jun 29, 2021, 2:49 PM IST
  • Facebook
  • Twitter
  • Whatsapp

 ಮಂಡ್ಯ (ಜೂ.29): ಕೊರೋನಾದಿಂದ ಮೃತಪಟ್ಟವರ  ಪೈಕಿ ಸುಮಾರು ಅರ್ಧದಷ್ಟು  ಜನರು ವೈದ್ಯರ ನಿರ್ಲಕ್ಷ್ಯದಿಂದ  ಮೃತಪಟ್ಟಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಆರೋಪಿಸಿದರು. 

ಮಂಡ್ಯದಲ್ಲಿ ಸೋಮವಾರ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ ಸಕಾಲದಲ್ಲಿ ಸೋಂಕಿತರಿಗೆ ವೈದ್ಯರಿಂದ ಸಮರ್ಪಕ  ಚಿಕಿತ್ಸೆ ದೊರಕಿದ್ದರೆ ಸಾವಿನ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಬಹುದಿತ್ತು ಎಂದರು. 

ಕರ್ನಾಟಕದಲ್ಲಿ ಕೊರೋನಾ ರಿಲೀಫ್: 3 ಸಾವಿರಕ್ಕಿಂತ ಕಡಿಮೆ ಕೇಸ್! ...

ನನಗೆ ಗೊತ್ತಿರುವವರಿಗೆ ಒಂದು ವಾರವಾದರೂ ವೈದ್ಯರು ಸರಿಯಾದ ಚಿಕಿತ್ಸೆ ನೀಡಿರಲಿಲ್ಲ. ಆತ ಬದುಕುಳಿಯಲೇ ಇಲ್ಲ. ಕೇವಲ ಇದೊಂದೆ ಪ್ರಕರಣವಲ್ಲ. ಹಲವಾರು ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸುರೇಶ್ ಗೌಡ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios