ಹಾವೇರಿ: ಗರ್ಭಿಣಿ ಶ್ವಾನಕ್ಕೆ ರಕ್ತದಾನ ಮಾಡಿದ್ಯಾರು ಗೊತ್ತಾ?
'ರಕ್ತದಾನಿಗಳ ತವರೂರು’ ಎಂದು ಹೆಸರು ವಾಸಿಯಾಗಿರುವ ಅಕ್ಕಿಆಲೂರು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಎರಡು ತಿಂಗಳ ಗರ್ಭಿಣಿ ‘ಜಿಪ್ಸಿ’ ಹೆಸರಿನ ನಾಯಿಗೆ ‘ಜಿಮ್ಮಿ’ ಹೆಸರಿನ ಇನ್ನೊಂದು ನಾಯಿ ರಕ್ತದಾನ ಮಾಡಿ ಗಮನ ಸೆಳೆದಿದೆ.
ವರದಿ - ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ(ಮಾ.13): ಗರ್ಭಿಣಿ ಶ್ವಾನಕ್ಕೆ ರಕ್ತದಾನ ಮಾಡಿ ಇಲ್ಲೊಬ್ಬ ಮಾನವೀಯತೆ ಮೆರೆದಿದ್ದಾನೆ. ಈ ಮೂಲಕ ಗರ್ಭಿಣಿ ಶ್ವಾನದ ಜೀವ ಉಳಿಸಿದ್ದಾನೆ.
'ರಕ್ತದಾನಿಗಳ ತವರೂರು’ ಎಂದು ಹೆಸರು ವಾಸಿಯಾಗಿರುವ ಅಕ್ಕಿಆಲೂರು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಎರಡು ತಿಂಗಳ ಗರ್ಭಿಣಿ ‘ಜಿಪ್ಸಿ’ ಹೆಸರಿನ ನಾಯಿಗೆ ‘ಜಿಮ್ಮಿ’ ಹೆಸರಿನ ಇನ್ನೊಂದು ನಾಯಿ ರಕ್ತದಾನ ಮಾಡಿ ಗಮನ ಸೆಳೆದಿದೆ.
ಸಿಲಿಂಡರ್ ಇಷ್ಟೊಂದು ರೇಟ್ ಮಾಡಿರಾ? ಎಲ್ಲಿಂದ ರೊಕ್ಕ ತರೋಣಾ?: ಕಟೀಲ್ ವಿರುದ್ಧ ಕಾರ್ಯಕರ್ತೆ ಆಕ್ರೋಶ
ಇಲ್ಲಿನ ಲಿಖಿತ್ ಹದಳಗಿ ಎಂಬುವವರಿಗೆ ಸೇರಿದ ಶ್ವಾನಕ್ಕೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಪಶು ಚಿಕಿತ್ಸಾಲಯಕ್ಕೆ ಕರೆತರಲಾಗಿತ್ತು. ಆರೋಗ್ಯ ತಪಾಸಣೆ ಮಾಡಿದ ವೈದ್ಯರು ರಕ್ತದ ತುರ್ತು ಅಗತ್ಯ ಇರುವ ಬಗೆಗೆ ಗಮನಕ್ಕೆ ತಂದರು. ವಿಷಯ ತಿಳಿದು ಸ್ಥಳೀಯ ನಿವಾಸಿ ವೈಭವ ಪಾಟೀಲ ಎಂಬುವವರು ತಮಗೆ ಸೇರಿದ ನಾಯಿ ಜಿಮ್ಮಿಯನ್ನು ಕರೆತಂದರು.
ಜಿಮ್ಮಿಯ ದೇಹದಿಂದ 350 ಎಂಎಲ್ ರಕ್ತ ತೆಗೆದು ಜಿಪ್ಸಿಗೆ ಹಾಕಲಾಯಿತು. ಈ ಪ್ರಕ್ರಿಯೆಗೆ ಪಶು ವೈದ್ಯರಾದ ಡಾ.ಅಮಿತ್ ಪುಠಾಣಿಕರ ಮತ್ತು ಡಾ.ಸಂತೋಷ ನೆರವಾದರು.