ಕಾಮಗಾರಿ ವೇಳೆ ತೊಂದರೆ ಬೇಡ: ಸತೀಶ ಜಾರಕಿಹೊಳಿ ಸೂಚನೆ

ನಗರದ ನಾಕಾ ನಂ.1 ರಿಂದ ಡಿವೈಎಸ್ಪಿ ಕಚೇರಿಯವರೆಗೆ ನಿರ್ಮಿಸಿರುವ ಚರಂಡಿ ರಸ್ತೆಯಿಂದ 2ಅಡಿ ಎತ್ತರವಾಗಿ ನಿರ್ಮಿಸಿದ್ದು, ಮಳೆ ನೀರು ಹೋಗಲು ತೊಂದರೆಯಾದರೇ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Do not disturb the public during the work  saysSatish Jarakiholi at belgum rav

ಗೋಕಾಕ (ಜೂ.15) ನಗರದ ನಾಕಾ ನಂ.1 ರಿಂದ ಡಿವೈಎಸ್ಪಿ ಕಚೇರಿಯವರೆಗೆ ನಿರ್ಮಿಸಿರುವ ಚರಂಡಿ ರಸ್ತೆಯಿಂದ 2ಅಡಿ ಎತ್ತರವಾಗಿ ನಿರ್ಮಿಸಿದ್ದು, ಮಳೆ ನೀರು ಹೋಗಲು ತೊಂದರೆಯಾದರೇ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರ ಮೇಲಿದ್ದು, ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೊಂಡು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಮಹಾರಾಷ್ಟ್ರಕ್ಕೆ ಹೋಗಲು ಕೈಗಾರಿಕೆಗಳು ಡಬ್ಬಾ ಅಂಗಡಿಗಳೇ?: ಸಚಿವ ಸತೀಶ ಜಾರಕಿಹೊಳಿ

ಲೋಳಸೂರ ಸೇತುವೆ, ವಸತಿ ನಿಲಯಗಳು, ನ್ಯಾಯಾಲಯ ಕಟ್ಟಡಕ್ಕೆ ಹೆಚ್ಚಿನ ಮಹತ್ವ ನೀಡಿ ಕಾರ್ಯಮಾಡುವುದರ ಜೊತೆಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ವಗೊಳಿಸಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬೇಗ ಪೂರ್ಣಗೊಳಿಸಬೇಕು. ನಗರದ ನಾಕಾ ನಂ.1 ರ ರಸ್ತೆಯನ್ನು ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿಯವರೆಗೆ ಸಂಚಾರಕ್ಕೆ ತೊಂದರೆಯಾಗದಂತೆ ದುರುಸ್ಥಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆ ಅಧೀನದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಸಂರ್ಕೀಣಗಳನ್ನು ಜನರಿಗೆ ಉಪಯೋಗವಾಗುವಂತೆ ಕ್ರಮಕೈಗೊಳ್ಳಬೇಕು. ಇಲಾಖೆಯಿಂದ ಸಾಕಷ್ಟುಬಂಡವಾಳ ಹಾಕಿ ವಾಣಿಜ್ಯ ಸಂರ್ಕೀಣಗಳನ್ನು ಕಟ್ಟಿದ್ದು, ಜನರಿಗೆ ಅನುಕೂಲವಾಗುವಂತೆ ಬಾಡಿಗೆ ಕೊಡದೇ ಬಾಕಿ ಉಳಿದಿರುವ ಸಂರ್ಕೀಣಗಳನ್ನು ಅತೀ ಶೀಘ್ರದಲ್ಲೇ ವ್ಯಾಪಾರಿಗಳಿಗೆ ಬಾಡಿಗೆ ನೀಡಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಟಿಸುವ ಮುಖ್ಯ ರಸ್ತೆಗಳನ್ನು ನಿರ್ಮಿಸಬೇಕು. ನಗರದಲ್ಲಿ ನೀರು ಸರಬರಾಜು ಮಾಡುವಲ್ಲಿ ಸೂಕ್ತಕ್ರಮ ಕೈಗೊಂಡು, ಮೀಟರಗಳು ಗಾಳಿಯಿಂದ ತಿರುಗುತ್ತಿದ್ದು, ಜನರಿಗೆ ಹೆಚ್ಚಿನ ಶುಲ್ಕ ಬರುತ್ತಿದ್ದು, ಮೀಟರಗಳನ್ನು ಸರಿಪಡಿಸಬೇಕು. ಮುಂದೆ ಗೋಕಾಕ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಯೋಗಿಕೋಳ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಡ್ಯಾಂನ ಪಕ್ಕದಲ್ಲಿ ಪಿಲ್ಟರ್‌ಹೌಸ್‌ ನಿರ್ಮಿಸಲು ಅರಣ್ಯ ಇಲಾಖೆಯ ಜಾಗ ಗುರುತಿಸಿ ಕ್ರಮಕೈಗೊಳ್ಳಬೇಕು. ನಗರದಲ್ಲಿರುವ ಹಳ್ಳಗಳನ್ನು ಗುರುತಿಸಿ ಸ್ವಚ್ಛ ಮಾಡಬೇಕು. ಪ್ರವಾಹಕ್ಕೆ ಬಿದ್ದ ಮನೆಗಳನ್ನು ಮಾಲೀಕರು ಬೇರೆ, ಜಿಪಿಎಸ್‌ ಆಗಿದ್ದ ಬೇರೆ ಎಂದು ಕೆಲವು ದೂರುಗಳು ಬಂದಿದ್ದು, ಅವುಗಳನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದರು.

ನಗರಸಭೆ ಅಧಿಕಾರಿ ಗಣಾಚಾರಿ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡ ಸಚಿವರು ಮನೆಗಳ ಜೆಪಿಎಸ್‌ ಮಾಡವಲ್ಲಿ ಎಡವಟ್ಟು ಮಾಡಿದ್ದನ್ನು ಸರಿಪಡಿಸಿ ಸರ್ಕಾರದಿಂದ ಬೇಗನೆ ಮನೆ ಕಟ್ಟಲು ಹಣ ಬರುವಂತೆ ಸಚಿವರು ಗಣಾಚಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಸಲುವಾಗಿ ಜನದಟ್ಟನೆ ನಿಯಂತ್ರಿಸಲು ನಗರದ ಹೊರಭಾಗದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿ, ಇಗಿರುವ ಬಸ್‌ ನಿಲ್ದಾಣವನ್ನು ಸಿಟಿ ಬಸ್‌ ನಿಲ್ದಾಣ ಮಾಡಬೇಕು. ಅಲ್ಲಿಯವರೆಗೆ ತಾತ್ಕಾಲಿಕ ಜಾಗವನ್ನು ಗುರುತಿಸಿ ಎಕ್ಸ್‌ಪ್ರೆಸ್‌ ವಾಹನಗಳು ನಗರದಲ್ಲಿ ಬಾರದಂತೆ ನೋಡಿಕೊಳ್ಳಿ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ನಗರೋತ್ಥಾನ ಅಡಿಯಲ್ಲಿ ಕಾಮಗಾರಿ ಮತ್ತು ನೀರು ಸರಬರಾಜು ಮಾಡಬೇಕು. ಮಾಸ್ಟರ್‌ ಪ್ಲ್ಯಾನ್‌ ಬಣಗಾರಗಲ್ಲಿ, ಕಿಲ್ಲಾಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 15 ಹಣಕಾಸು ಯೋಜನೆಯಲ್ಲಿ ಪ್ರಸ್ತುತ 5 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಆದಷ್ಟುಬೇಗ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಗೋಕಾಕ ತಹಸೀಲ್ದಾರ್‌ ಕೆ.ಮಂಜುನಾಥ್‌, ಮೂಡಲಗಿ ತಹಸೀಲ್ದಾರ್‌ ಪ್ರಶಾಂತ್‌ ಚನ್ನಗೊಂಡ, ಗೋಕಾಕ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಮೂಡಲಗಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಫ್‌.ಜಿ.ಚಿನ್ನನವರ ಉಪಸ್ಥಿತರಿದ್ದರು.

ಸಚಿವ ಸತೀಶ ಜಾರಕಿಹೊಳಿ ಹೆಗಲಿಗೆ ಬೆಳಗಾವಿ ಉಸ್ತುವಾರಿ!

ಲೋಕೋಪಯೋಗಿ ಇಲಾಖೆಯಲ್ಲಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ಪಟ್ಟಿಮಾಡಿ ಅಂತಹವರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡದೆ ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುವಂತೆ ಕ್ರಮಕೈಗೊಳ್ಳಬೇಕು. ಒಮ್ಮೆ ರಸ್ತೆ ಮಾಡಿದರೆ ಕನಿಷ್ಠ 10 ವರ್ಷಗಳವರೆಗೆ ಬಾಳಿಕೆ ಬರುವಂತೆ ನಿರ್ಮಾಣ ಮಾಡಬೇಕು. ಆದ್ಯತೆ ಮೇರೆಗೆ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುತುವರ್ಜಿ ವಹಿಸಿ ಕಾರ್ಯಮಾಡಬೇಕು.

ಸತೀಶ ಜಾರಕಿಹೊಳಿ, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು.

Latest Videos
Follow Us:
Download App:
  • android
  • ios