ಉಡುಪಿ (ನ.30): ಕೆಪಿಪಿಸಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ಗೆ ಉಡುಪಿ ಜಿಲ್ಲಾ ಕಾಂಗ್ರೆಸ್‌ನೊಳಗಿನ ಭಿನ್ನಮತದ ದರ್ಶನವಾಗಿದೆ. 

ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತಿನಲ್ಲಿ ಇರಲಾಗದವರನ್ನು ಹೊರಗೆ ಹಾಕಬೇಕಾಗುತ್ತದೆ ಎಂದು ಪರೋಕ್ಷವಾಗಿ ಪ್ರಮೋದ್‌ ಮಧ್ವರಾಜ್‌ದೆ ಎಚ್ಚರಿಕೆ ನೀಡಿದ್ದಾರೆ. 

ಭಾನುವಾರ ಡಿಕೆಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಯಿತು. 

ವಿಡಿಯೋ ಬಾಂಬ್ ಸಿಡಿಸಿದ ಡಿಕೆಶಿ: ಒಬ್ಬರ ಜೀವನ, ಪ್ರಾಣದ ಮೇಲೆ ಚೆಲ್ಲಾಟ ಬೇಡವೆಂದ ಬಿಜೆಪಿ ...

ಈ ವೇಳೆ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಅವರು, ಪತ್ರಿಕಾ ಹೇಳಿಕೆಗಳನ್ನು ಕೊಟ್ಟು ಪಕ್ಷಕ್ಕೆ ಮುಜುಗರ ಮಾಡುವುದನ್ನು, ಬ್ಲಾಕ್‌ಮೇಲ್‌ ಮಾಡುವುದನ್ನು ಸಹಿಸುವುದಿಲ್ಲ. ಪಕ್ಷ ನಡೆಯುವುದೇ ನನ್ನಿಂದ ಎಂದು ತಿಳಿಕೊಂಡಿದ್ದರೆ, ಅದು ಭ್ರಮೆ. ಅಂತಹವರನ್ನು ಗೌರವದಿಂದಲೇ ಪಕ್ಷದಿಂದ ಕಳಿಸಲಾಗುತ್ತದೆ ಎಂದರು.