ಬೆಳಗಾವಿ, [ಜೂ.22]: ನನಗೆ ಶಕುನಿ ಎಂದ ಬಿಜೆಪಿ ಮುಖಂಡ ಶ್ರೀರಾಮುಲಿಗೆ ಮುಹೂರ್ತ ನೋಡಿಕೊಂಡು ಸೂಕ್ತ ಸಮಯದಲ್ಲಿ ಉತ್ತರ ಕೋಡುತ್ತೇನೆ ಎನ್ನುವ ಮೂಲಕ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ ಶ್ರೀರಾಮುಲುಗೆ ಟಾಂಗ್ ಕೊಟ್ಟಿದ್ದಾರೆ.

ಡಿ.ಕೆ ಶಿವಕುಮಾರ್​​ ಶಕುನಿ ಇದ್ದಂಗೆ. ಯುದ್ದ ಮುಗಿದ ಮೇಲೆ ನಿಜವಾದ ಶಕುನಿ ಯಾರೆಂದು? ಗೊತ್ತಾಗಲಿದೆ ಎಂದು ಶನಿವಾರ  ಶ್ರೀರಾಮುಲು ಕುಹಕವಾಡಿದ್ದರು. ಈ ಹೇಳಿಕೆಗೆ ಶನಿವಾರ ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಡಿ.ಕೆ.ಶಿವಕುಮಾರ ಶ್ರೀರಾಮುಲಗೆ ತಿರುಗೇಟು ನೀಡಿದರು.

ಡಿಕೆಶಿಗೆ ಡಿಚ್ಚಿ ಕೊಟ್ಟ ಶ್ರಿರಾಮುಲು..!

ಕಾಂಗ್ರೆಸ್‌ಗೆ ಶಕುನಿ ಇದ್ದ ಹಾಗೆ  ಎಂದು ಹೇಳಿಕೆ ನೀಡಿದ ಬಿಜೆಪಿ ಮುಖಂಡ ಶ್ರೀರಾಮುಲು ನನ್ನ ಅಣ್ಣ. ಅವರಿಗೆ ಮೂಹರ್ತ ನೋಡಿಕೊಂಡು ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ.  ಸದ್ಯ ಮೂಹೂರ್ತ ಸರಿಯಿಲ್ಲ. ಮೂಹರ್ತಕ್ಕಾಗಿ ಕಾಯುತ್ತೇನೆ ಎಂದು ಹೇಳುವ ಮೂಲಕ ಶ್ರೀರಾಮುಲುಗೆ ಖಾರವಾಗಿಯೇ ಪ್ರತ್ಯುತ್ತರ ಕೊಟ್ಟರು.

ಅವರು ನನ್ನ ಅಣ್ಣ. ಅವರು ನನಗೆ ಶಕುನಿ ಎಂದು ಹೇಳಿಕೆ ನೀಡಿರುವುದಕ್ಕೆ ಬಹಳ ಸಂತೋಷ, ಬಹಳ ಸಂತೋಷ ಎಂದು ವಂಗ್ಯವಾಡಿದ ಅವರು ದೇಶಕ್ಕೆ, ರಾಮ ರಾಜ್ಯ ಕೊಟ್ಟ ಶ್ರೀರಾಮುಲುಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಗಳಿಗೆಯಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳುವ ಮೂಲಕ ಶ್ರೀರಾಮುಲುಗೆ ಟಾಂಗ್ ನೀಡಿದರು.