ಚಾಮರಾಜನಗರ(ಅ.02): ದಸರಾ ಮಹೋತ್ಸವ ಸಮಿತಿ ಮತ್ತು ಜಿಲ್ಲಾಡಳಿತ ವತಿಯಿಂದ ಚಾಮರಾಜ ನಗರ ದಸರಾ ಮ್ಯಾರಥಾನ್‌ಗೆ ಭಾಗವಹಿಸಲು ಬರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಮಕ್ಕಳು ಟಿಕೆಟ್ ಕೊಟ್ಟು ಪ್ರಯಾಣಿಸಬೇಕಾಯಿತು

ಅ. 2ರಂದು ದಸರಾ ಮಹೋತ್ಸವ ಸಮಿತಿ ಮತ್ತು ಜಿಲ್ಲಾಡಳಿತ ವತಿಯಿಂದ ಚಾಮರಾಜ ನಗರ ದಸರಾ ಮ್ಯಾರಥಾನ್ ಏರ್ಪಡಿಸಲಾಗಿತ್ತು. ಮ್ಯಾರ ಥಾನ್‌ಗೆ ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿ ಗಳನ್ನು ಕರೆತರುವಂತೆ ಜಿಲ್ಲಾಡಳಿತ ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರಿಗೆ ಸೂಚಿಸಿದೆ.

ಮಕ್ಕಳನ್ನು ಕರೆ ತರಲು ಬಸ್‌ಗಳನ್ನು ಕಳುಹಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ಮ್ಯಾರಥಾನ್ ಬರುವ ಮಕ್ಕಳು ತಮ್ಮ ಹಣ ಕೊಟ್ಟು ಬಸ್ ಟಿಕೆಟ್ ತೆಗೆದುಕೊಂಡು ಬರಬೇಕಾ ದಂತಹ ಪರಿಸ್ಧಿತಿ ನಿರ್ಮಾಣವಾಗಿದೆ.

ಸರ್ಕಾರ ಚಾಮ ರಾಜನಗರ ದಸರಾ ಆಚರಣೆಗೆ ಕೋಟಿ ಕೋಟಿ ರು. ಬಿಡುಗಡೆ ಮಾಡಿದೆ. ಆದರೆ, ಮ್ಯಾರಥಾನ್‌ಗೆ ಮಕ್ಕಳನ್ನು ಕರೆತರಲು ಮಾತ್ರ ದುಡ್ಡಿನ ವ್ಯವಸ್ಧೆ ಮಾಡಿಲ್ಲ. ಇದರಿಂ ದಾಗಿ ಪ್ರಾಂಶುಪಾಲರು ಮತ್ತು ಮುಖ್ಯಶಿಕ್ಷಕರು ಮಕ್ಕ ಳನ್ನು ಕರೆತರುವುದು ಹೇಗೆ, ಯಾವ ಅನುದಾನ ಬಳಸಿ ಕೊಂಡು ಕರೆತರುವುದು ಎಂಬ ಗೊಂದಲದಲ್ಲಿದ್ದಾರೆ.