Tumakur : ನಿರುದ್ಯೋಗಿ ಯುವಕರಿಗೆ ಮೋಟಾರ್‌ ಬೈಕ್‌ ವಿತರಣೆ

ಸ್ವಯಂ ಉದ್ಯೋಗ ಕೈಗೊಳ್ಳುವ ಹಿನ್ನಲೆಯಲ್ಲಿ 14 ಲಕ್ಷ ಸಹಾಯ ಧನದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ನಿರುದ್ಯೋಗ ಯುವಕರಿಗೆ ತಲಾ 70 ಸಾವಿರ ವೆಚ್ಚದ 20 ಮೋಟಾರ್‌ ಬೈಕ್‌ ಹಾಗೂ ಕೀ ಹಸ್ತಾಂತರಿಸಲಾಗಿದೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಮಣಪ್ಪ ಹೇಳಿದರು.

Distribution of motorbikes to unemployed youth snr

  ಪಾವಗಡ :  ಸ್ವಯಂ ಉದ್ಯೋಗ ಕೈಗೊಳ್ಳುವ ಹಿನ್ನಲೆಯಲ್ಲಿ 14 ಲಕ್ಷ ಸಹಾಯ ಧನದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ನಿರುದ್ಯೋಗ ಯುವಕರಿಗೆ ತಲಾ 70 ಸಾವಿರ ವೆಚ್ಚದ 20 ಮೋಟಾರ್‌ ಬೈಕ್‌ ಹಾಗೂ ಕೀ ಹಸ್ತಾಂತರಿಸಲಾಗಿದೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಮಣಪ್ಪ ಹೇಳಿದರು.

ಶಾಸಕರ ವಸತಿ ಗೃಹದ ಬಳಿ ಸೋಮವಾರ ಜಿಲ್ಲಾ ಆದಿಜಾಂಬವ ಅಭಿವೃದ್ಧಿ ನಿಗಮ ವತಿಯಿಂದ ತಾಲೂಕಿನ ಪರಿಶಿಷ್ಟ ಜಾತಿಯ 20 ಮಂದಿ ಯುವಕರಿಗೆ ದ್ವಿಚಕ್ರದ ಮೋಟರ್‌ ಬೈಕ್‌ ಹಾಗೂ ಕೀ ವಿತರಿಸಿ ಶುಭ ಹಾರೈಸಿದ ಬಳಿಕ ಮಾತನಾಡಿದರು.

ಮುಂದಿನ ವಾರದಲ್ಲಿ ಪರಿಶಿಷ್ಟಜಾತಿ ನಿಗಮಗಳಿಂದ ಇಲ್ಲಿನ ಭೋವಿ, ಲಂಬಾಣಿ ಮತ್ತು ಛಲವಾದಿ ಸಮಾಜದ ತಲಾ 20 ಯುವಕರಿಗೆ ಸಬ್ಸಿಡಿಯ ದ್ವಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಯಂ ಉದ್ಯೋಗದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಎಸ್‌ಸಿ, ಎಸ್‌ಟಿ ಹಾಗೂ ಇತರೆ ವರ್ಗಗಳ ನಿರುದ್ಯೋಗ ವಿದ್ಯಾವಂತ ಯುವಕರಿಗೆ ಬೈಕ್‌ ಸೌಲಭ್ಯ ಸಿಗಲಿದೆ.ನಿಗಮಗಳಿಂದ ದ್ವಿಚಕ್ರ ವಾಹನ ಸೌಲಭ್ಯ ಪಡೆಯಲು ಡಿಎಲ್‌ ಹಾಗೂ ಇತರೆ ಅಗತ್ಯ ದಾಖಲೆ ಸಲ್ಲಿಸಬೇಕು. ಅನಾಹುತಗಳಿಗೆ ಅವಕಾಶ ನೀಡದೇ ಕಡ್ಡಾಯ ಸಂಚಾರ ನಿಯಮ ಪಾಲನೆ ಹಾಗೂ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿಯೇ ಬೈಕ್‌ ಒಡಿಸುವಂತೆ ಕರೆ ನೀಡಿದರು.

ಜಿಲ್ಲಾ ಆದಿಜಾಂಬವ ಅಭಿವೃದ್ಧಿ ನಿಗಮದ ಅಭಿವೃಧ್ಧಿ ಅಧಿಕಾರಿ ರಾಜಶೇಖರ್‌ ಮಾತನಾಡಿ, ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಹಿನ್ನಲೆ ಹಾಗೂ ಸ್ವಯಂ ಉದ್ಯೋಗದ ಸಲುವಾಗಿ ಜಿಲ್ಲಾ ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಅನ್‌ಲೈನ್‌ ಅರ್ಜಿ ಸಲ್ಲಿಸಿ, ಗುರಿ ಅನ್ವಯ ಆಯ್ಕೆಯಾದ ಇಲ್ಲಿನ 20 ಯುವಕರಿಗೆ ನಿಗಮದ ಸಹಾಯ ಧನದಲ್ಲಿ ದ್ವಿಚಕ್ರ ವಾಹನ ಕಲ್ಪಿಸಲಾಗಿದೆ. ಫಲಾನುಭವಿಯ ಇಚ್ಚೆಯಂತೆ ನಗರದ ಹನಿ, ಸಹನಾ ಶ್ರೀನಿವಾಸ್‌ ಜಿ.ಆರ್‌.ಮೋಟಾರ್‌ ವಿತರಣಾ ಕೇಂದ್ರಗಳಿಂದ ಖರೀದಿಸಿ ಬೈಕ್‌ ವಿತರಿಸಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಕರೆ ನೀಡಿದರು.

ಮುಖಂಡರಾದ ತಾಲೂಕು ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ವಿರಪಸಮುದ್ರ ರಾಮಾಂಜಿನಪ್ಪ, ಸಿದ್ದಾಪುರ ಗ್ರಾಪಂ ಮಾಜಿ ಅಧ್ಯಕ್ಷ ಅಂಜಯ್ಯ, ಕಡಮಲಕುಂಟೆ ತಮಟೆ ಸುಬ್ಬರಾಯಪ್ಪ, ಗಂಗಾಧರ್‌ ಹಾಗೂ ಫಲಾನುಭವಿಗಳಿಗಳಿದ್ದರು.

ರೆಡ್ಡಿಯಿಂದ ಬೈಕ್ ವಿತರಣೆ

ಕೊಪ್ಪಳ (ಫೆ.26): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಹಿನ್ನೆಲೆಯಲ್ಲಿ ಸೀರೆ ಹಂಚಿಕೆ, ಕುಕ್ಕರ್‌ ಹಂಚಿಕೆ ಮಾಡಿದ್ದಾಯ್ತು. ಈಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಮುಖ್ಯಸ್ಥ ಜನಾರ್ಧನರೆಡ್ಡಿ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ಹಾಗೂ ಬೈಕ್‌ಗಳನ್ನು ವಿತರಣೆ ಮಾಡಲು ಮುಂದಾಗಿದ್ದಾರೆ.

ದಿನದಿಂದ ದಿನಕ್ಕೆ ಬಳ್ಳಾರಿ ಯಲ್ಲಿ ಚುನಾವಣೆ ರಂಗು ಜೋರಾಗಿ ಏರುತ್ತಿದೆ. ಸಾರ್ವಜನಿಕರಿಗೆ ಸೀರೆ ಕೊಟ್ಟದ್ದಾಯ್ತು.  ಕುಕ್ಕರ್  ಕೊಟ್ಟದ್ದುಯ್ತು. ಇದೀಗ ಜನಾರ್ದನ ಪಕ್ಷದ ಕಡೆಯಿಂದ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಇದು ಸಾರ್ವಜನಿಕರಿಗೆ ನೀಡುವ ಉಡುಗೊಡೆಯಲ್ಲ ನಿಷ್ಠಾವಂತ ಕಾರ್ಯಕರ್ತರಿಗೆ ನೀಡೋ ಉಡುಗೊರೆ. ಜನಾರ್ದನ ರೆಡ್ಡಿ ಅವರ ಕೆಆರ್ ಪಿಪಿ ಪಕ್ಷದ ಸಂಘಟನೆಗಾಗಿ‌ ಕಾರ್ಯಕರ್ತ ರಿಗಾಗಿ ಭರ್ಜರಿ ಬೈಕ್ ಗಳು ಆಗಮಿಸುತ್ತಿವೆ. ಇನ್ನು ಮೊದಲ ಹಂತದಲ್ಲಿ ಮತದಾರರನ್ನು ಸೆಳೆಯಲು ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿಗಳನ್ನು ನೀಡಲಾಗಿದೆ.

Latest Videos
Follow Us:
Download App:
  • android
  • ios