ಬೆಳಗಾವಿ ಮುಗೀತು, ಮತ್ತೊಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಭಿನ್ನಮತ: ಯಾರ ನಡುವೆ ಟಾಕ್ ವಾರ್?

ಬೆಳಗಾವಿ ಬಳಿಕ ಬೀದರ್ ಕಾಂಗ್ರೆಸ್ ನಲ್ಲಿ ಭಿನ್ನಮತ! ಶಾಸಕ ಬಿ. ನಾರಾಯಣ್, ಸಚಿವ ರಾಜಶೇಖರ್ ಪಾಟೀಲ್ ವಾರ್! ಈಶ್ವರ್ ಖಂಡ್ರೆ ಸ್ವಂತ ಜಿಲ್ಲೆಯಲ್ಲಿ ಭುಗಿಲೆದ್ದ ಭಿನ್ನಮತ! ತಮ್ಮ ವಿರುದ್ದ ಹೇಳಿಕೆ ನೀಡಿದಂತೆ ರಾಜಶೇಖರ್ ಎಚ್ಚರಿಕೆ

Dissident in Bidar district Congress

ಬೀದರ್(ಸೆ.8): ಬೆಳಗಾವಿ ಆಯ್ತು ಈಗ ಬೀದರ್ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಈಶ್ವರ್ ಖಂಡ್ರೆ ಸ್ವಂತ ಜಿಲ್ಲೆ ಬೀದರ್ ನ ಕಾಂಗ್ರೆಸ್ ನಲ್ಲಿ ಎರಡು ಬಣ ಸೃಷ್ಟಿಯಾಗಿವೆ. ಇಷ್ಟು ದಿನ ಇದ್ದ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದ್ದು, ಬೀದರ್ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸತ್ಯ ಎಂಬುದು ಬಹಿರಂಗವಾಗಿದೆ. 

ಸಿದ್ದರಾಮಯ್ಯ ಟೀಮ್ ನಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಬಿ.ನಾರಾಯಣ ಅವರಿಗೆ ಸಚಿವ ರಾಜಶೇಖರ್ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದು, ತಮ್ಮ ವಿರುದ್ದ ಮಾತನಾಡಿದರೆ ಅವರ ಜಾತಕ ಬಯಲು ಮಾಡುವುದಾಗಿ ಗುಡುಗಿದ್ದಾರೆ.

"

ಬೀದರ್ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರಿಗೆ ಬೀದರ್ ಉಸ್ತುವಾರಿ ನೀಡಬೇಕೆಂದು ಸಿಎಂ ಬಳಿ ನಾನೇ ಹೇಳಿದ್ದೆ ಎಂದಿದ್ದ ಬಿ.ನಾರಾಯಣ್, ಕಾಶೆಂಪೂರ್ ಅವರೇ ಬೀದರ್ ಉಸ್ತುವಾರಿಗೆ ಸಮರ್ಥರು ಬೀದರ್ ನಲ್ಲಿ ಬೇರೆ ಯಾರೂ ಕೂಡ ಸಮರ್ಥ ವ್ಯಕ್ತಿ ಇಲ್ಲ ಎಂದು ಪರೋಕ್ಷವಾಗಿ ರಾಜಶೇಖರ್ ಪಾಟೀಲ್ ಅವರಿಗೆ ಟಾಂಗ್ ನೀಡಿದ್ದರು. 

ಈ ಹಿನ್ನೆಲೆಯಲ್ಲಿ ನಾರಾಯಣ್ ವಿರುದ್ದ ಗರಂ ಆಗಿರುವ ರಾಜಶೇಖರ್ ಪಾಟೀಲ್, ತಮ್ಮ ವಿರುದ್ದ ನಿರಂತರ ಷಡ್ಯಂತ್ರ ನಡೆಸುತ್ತಿರುವ ನಾರಾಯಣ್ ಅವರಿಗೆ ಬುದ್ದಿ ಕಲಿಸುವುದಾಗಿ ತಿಳಿಸಿದ್ದಾರೆ. ನಾನು ನಾಲ್ಕನೇ ಬಾರಿ ಗೆದ್ದ ಕಾರಣಕ್ಕೆ ನನಗೆ ಸಚಿವ ಸ್ಥಾನ ಲಭಿಸಿದ್ದು, ಇದು ನಾರಾಯಣ್ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ರಾಜಶೇಖರ್ ಆರೋಪಿಸಿದ್ದಾರೆ.

ಇನ್ನು ನಾರಾಯಣ್ ತಮ್ಮ ವಿರುದ್ದ ಹೀಗೆ ಹೇಳಿಕೆ ನೀಡುವುದನ್ನು ಮುಂದುವರೆಸಿದರೆ ಅವರ ಜಾತಕ ಬಯಸಲು ಮಾಡಬೇಕಾಗುತ್ತದೆ ಎಂದು ರಾಜಶೇಖರ್ ಎಚ್ಚರಿಸಿದ್ದಾರೆ. ಅವರು ಶಾಸಕರಾಗಿ ಹೇಗೆ ಆಯ್ಕೆಯಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂತವರ ಜಾತಕ ಬಯಲು ಮಾಡಲು ತಮಗೆ ಬಹಳ ಸಮಯ ಬೇಕಾಗಿಲ್ಲ ಎಂದು ರಾಜಶೇಖರ್ ಗುಡುಗಿದ್ದಾರೆ.

Latest Videos
Follow Us:
Download App:
  • android
  • ios