ಹೊಸಕೋಟೆ [ಸೆ.13] : ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತೊಮ್ಮೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. 

ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಾರಾಯಿ ಕುಡಿಯುವವರು, ಕೂಲಿ ಮಾಡುವವರು ತೆರಿಗೆ ಕಟ್ಟುತ್ತಾರೆ‌. ದೊಡ್ಡ ದೊಡ್ಡ ಸಂಪಾದನೆ ಮಾಡುವವರು ತೆರಿಗೆ ಕಟ್ಟಬೇಕು ಅಲ್ಲವೇ ಎಂದರು.  

ನ್ಯಾಯಕ್ಕಿಂತ ಈ ಜಗತ್ತಿನಲ್ಲ ಯಾರು ದೊಡ್ಡವರಿಲ್ಲ. ದೇಶದ 130 ಕೋಟಿ ರು. ಜನಸಂಖ್ಯೆಗೂ ಕಾನೂನು ಒಂದೇ . ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಹಣ ಕಟ್ಟಬೇಕು. ಸಾರ್ವಜನಿಕರಿಂದ ಸರ್ಕಾರ. ಸರ್ಕಾರದಿಂದ ಸಾರ್ವಜನಿಕರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತೆರಿಗೆ ಹಣದಿಂದ ಅಭಿವೃದ್ಧಿ ಮಾಡುವುದು ಪ್ರಜಾತಂತ್ರದ ವ್ಯವಸ್ಥೆ.  ಎಷ್ಟೆ ದೊಡ್ಡವರು ಆಗಿರಲಿ ತೆರಿಗೆ ವಂಚನೆ ಆಗಬಾರದು. ನನ್ನ ಮೇಲೂ ಮೂರು ಭಾರಿ ಐಟಿ ದಾಳಿ ಆಗಿದೆ. ನನ್ನ ಮನೆ ಮೇಲೆ ದಾಳಿಯಾದ 20 ದಿನಗಳ ನಂತರ ಅವರ ಮೇಲೆ ಆಗಿದ್ದು,  ಶಿವಕುಮಾರ್ ತೆರಿಗೆ ಕಟ್ಟುವುದರಲ್ಲಿ ವ್ಯತ್ಯಾಸ ಆಗಿರಬಹುದು.  ಅದಕ್ಕೆ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ ಅವರಿಗೆ ಅಲ್ಲಿ ನ್ಯಾಯ ಸಿಗಬಹುದು ಎಂದರು.

ಇನ್ನು ಡಿ.ಕೆ ಶಿವಕುಮಾರ್ ಬಂಧನ ಹಿನ್ನೆಲೆ ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ಜಾತಿ ಹೆಸರಿನಲ್ಲಿ ಪ್ರತಿಭಟನೆ ಬೇಕಾಗಿಲ್ಲ ಎಂದರು.