ಸಾಗುವಳಿ ಚೀಟಿ ವಿತರಿಸುವಲ್ಲಿ ತಾರತಮ್ಯ: ಆರೋಪ

40 ವರ್ಷದಿಂದ ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. 4 ವರ್ಷದ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಹಣ ನೀಡಿರುವ ರಾಜಕೀಯ ಪಕ್ಷದ ಬೆಂಬಲಿಗರಿಗೆ ವಿತರಣೆ ಆಗಿದೆ. ಬಗರ್‌ಹುಕುಂ ಕಮಿಟಿಯಿಂದ ಕೊರಟಗೆರೆ ಕ್ಷೇತ್ರದ ರೈತರಿಗೆ ಅನ್ಯಾಯವಾಗಿದೆ ಎಂದು ಕೊರಟಗೆರೆ ರೈತ ಸಂಘದ ಅಧ್ಯಕ್ಷ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.

Discrimination in issue of Cultivation Certificate: Allegation snr

 ಕೊರಟಗೆರೆ : 40 ವರ್ಷದಿಂದ ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. 4 ವರ್ಷದ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಹಣ ನೀಡಿರುವ ರಾಜಕೀಯ ಪಕ್ಷದ ಬೆಂಬಲಿಗರಿಗೆ ವಿತರಣೆ ಆಗಿದೆ. ಬಗರ್‌ಹುಕುಂ ಕಮಿಟಿಯಿಂದ ಕೊರಟಗೆರೆ ಕ್ಷೇತ್ರದ ರೈತರಿಗೆ ಅನ್ಯಾಯವಾಗಿದೆ ಎಂದು ಕೊರಟಗೆರೆ ರೈತ ಸಂಘದ ಅಧ್ಯಕ್ಷ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ನೂರಾರು ಜನ ರೈತರು ಕಂದಾಯ ಇಲಾಖೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದರು.

ಬಗರ್‌ಹುಕುಂ ಕಮಿಟಿಯಿಂದ 2017-18ರಲ್ಲಿ ಸಾಗುವಳಿ ಚೀಟಿ ನೀಡಿದ 250ಕ್ಕೂ ಅಧಿಕ ರೈತರಿಗೆ ಇನ್ನೂ ಜಮೀನಿನ ಖಾತೆ-ಪಹಣಿ ಆಗಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಸರಿಸುಮಾರು 1500 ರೈತರಿಗೆ ಸಾಗುವಳಿ ಚೀಟಿ ನೀಡಬೇಕಿದೆ. 2022ರ ಹೊಸ ಕಮಿಟಿಯಿಂದ ರೈತರಿಗೆ ತಾರತಮ್ಯ ಆಗಿದೆ. ಕಂದಾಯ ಇಲಾಖೆಯ ಅಧಿಕಾರಿವರ್ಗ ಶಾಮಿಲಾಗಿ ನಿಜವಾದ ರೈತರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿದರು.

ತುಮಕೂರು ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ವಿಜಿಯಮ್ಮ ಮಾತನಾಡಿ, ಸಾಗುವಳಿ ಚೀಟಿ ಮತ್ತು ಮನೆಯ ಹಕ್ಕುಪತ್ರವು ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಬೆಂಗಳೂರು ಮತ್ತು ತುಮಕೂರು ನಗರದ ಉದ್ಯಮಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ನಮ್ಮ ಕ್ಷೇತ್ರದ ರೈತರಿಗೆ ಏಕೆ ನೀಡಿಲ್ಲ. ಕೊರಟಗೆರೆ ಕ್ಷೇತ್ರದ ರೈತರಿಗೆ ಭೂಮಿ ಸಿಗುವವರೆಗೆ ನಾವು ಹೋರಾಟ ಮಾಡೇ ಮಾಡ್ತೀವಿ ಎಂದರು.

ಕಂದಾಯ ಇಲಾಖೆ ವಿರುದ್ಧ ಆರೋಪ:

ಕೊರಟಗೆರೆ ಕಂದಾಯ ಇಲಾಖೆಯ ಶಿರಸ್ತೇದಾರ್‌ ರಂಗನಾಥ ಮತ್ತು ಬಿ.ಡಿ.ಪುರ ವೃತ್ತ ಕಂದಾಯ ಅಧಿಕಾರಿ ಮುರುಳಿ ರೈತರಿಂದ ಮುಂಗಡ ಹಣ ಪಡೆದು ಸಾಗುವಳಿ ಚೀಟಿಗೆ ಸಹಿಯನ್ನು ಹಾಕದೇ ಮೋಸ ಮಾಡಿದ್ದಾರೆ. 50ರಿಂದ 60 ಸಾವಿರ ಹಣ ನೀಡಿದ ಗ್ರಾಮೀಣ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಲಾಗಿದೆ. ಈ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ತನಿಖೆಗೆ ಆದೇಶ ಮಾಡಬೇಕಿದೆ. ಇಲ್ಲವಾದರೆ ನಾವೇ ಲೋಕಾಯುಕ್ತ ಕಚೇರಿಗೆ ದೂರು ನೀಡುತ್ತೇವೆ ಎಂದು ರೈತರು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಕೊರಟಗೆರೆ ರೈತ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಮುಖಂಡರಾದ ಲೋಕೇಶ್‌, ಶಿವಾನಂದಯ್ಯ, ರವಿಕುಮಾರ್‌, ಲಕ್ಷ್ಮಣ್‌, ದಾಸಗಿರಿಯಪ್ಪ, ರಂಗನಾಥ, ಕುಮಾರ್‌, ದೇವರಾಜು, ಮಂಜುನಾಥ, ಪ್ರಸನ್ನಕುಮಾರ್‌, ವಿಜಯಲಕ್ಷ್ಮೇ, ರಘುನಂದನ್‌, ನಾಗರಾಜು ಸೇರಿದಂತೆ ನೂರಾರು ರೈತರು ಇದ್ದರು.

40 ವರ್ಷದಿಂದ ಉಳುಮೆ ಮಾಡುತ್ತಿರುವ 1500ಕ್ಕೂ ಅಧಿಕ ರೈತರಿಗೆ ಸಾಗುವಳಿ ಚೀಟಿಯನ್ನೇ ನೀಡಿಲ್ಲ. ಬೆಂಗಳೂರು ಉದ್ಯಮಿಗಳಿಗೆ 4 ವರ್ಷದಲ್ಲೇ ಸಾಗುವಳಿ ಚೀಟಿ ನೀಡಲಾಗಿದೆ. ಕೊರಟಗೆರೆ ಕ್ಷೇತ್ರದ ರೈತರಿಗೆ ಸಾಗುವಳಿ ಚೀಟಿ ನೀಡದಿದ್ದರೇ ರೈತರು ಚುನಾವಣೆ ಬಹಿಷ್ಕಾರ ಮಾಡಿ, ಮತ ಕೇಳಲು ರೈತರ ಬಳಿಗೆ ಬಂದಾಗ ಅವರಿಗೆ ತಕ್ಕಪಾಠ ಕಲಿಸುತ್ತೇವೆ. ಗುರುವಾರದೊಳಗೆ ರೈತರಿಗೆ ಸಾಗುವಳಿ ಚೀಟಿ ಮತ್ತು ಹಳೆಯ ಖಾತೆ ಪಹಣಿ ನೀಡದಿದ್ದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು.

ಸಿದ್ದರಾಜು ಅಧ್ಯಕ್ಷ, ರೈತಸಂಘ, ಕೊರಟಗೆರೆ

Latest Videos
Follow Us:
Download App:
  • android
  • ios