ಹುಕ್ಕೇರಿ(ಡಿ.14): ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಅದು ಉಳಿದೆಲ್ಲ ಚುನಾವಣೆಗಳಿಗಿಂತ ಜಿದ್ದಾಜಿದ್ದಿನ ಕಣ. ಅದರಲ್ಲೂ ಕೆಲ ಗ್ರಾಪಂಗಳಲ್ಲಿನ ರಾಜಕೀಯ ಪಟ್ಟಣ ಪಂಚಾಯಿತಿ, ಪುರಸಭೆಯನ್ನೂ ಮೀರುಸುವಂತಿದೆ. 

ಅಧಿಕಾರ ವಿಕೇಂದ್ರಿಕರಣದಿಂದಾಗಿ ಗ್ರಾಪಂಗಳಿಗೆ ಹೆಚ್ಚಿನ ಬಲ ಬಂದಿದೆ. ಹೀಗಾಗಿ ಗ್ರಾಪಂ ಸದಸ್ಯತ್ವಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ. ಆದರೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಪಂಗೆ ಕಳೆದ 20 ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ಕಳೆದ ಎರಡು ದಶಕಗಳಿಂದ ಬೆಲ್ಲದ ಬಾಗೇವಾಡಿ ಗ್ರಾಪಂನ 33 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅಷ್ಟೇ ಅಲ್ಲದೇ ಈ ಗ್ರಾಪಂನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ. ಇದರಿಂದ ಜಿಲ್ಲೆಯ ಗಮನ ಸೆಳೆದು ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ.

ಎಷ್ಟು ಹೇಳಿದ್ರೂ ಬಿಡದ ಅಕ್ರಮ ಸಂಬಂಧ: ವಿವಾಹಿತ ಪುರುಷನ ಪರಸ್ತ್ರೀ ಸಂಗ, ಕೊನೆಗೆ ಆಗಿದ್ದೇನು?

ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಸಿಗಬೇಕು. ಚುನಾವಣೆ ರಾಜಕೀಯದಿಂದ ದೂರ ಉಳಿದು ಹಳ್ಳಿಯ ಸೌಹಾರ್ದತೆ ಗಟ್ಟಿಗೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಕಿಕೊಂಡ ನಿಯಮದಿಂದ ಪ್ರತಿ ಚುನಾವಣೆಯಲ್ಲೂ ಇಲ್ಲಿ ಸದಸ್ಯರ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿದೆ. ಆಯ್ಕೆ ಪ್ರಕ್ರಿಯೆ ವೇಳೆ ಸಾಮಾಜಿಕ ನ್ಯಾಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಎಲ್ಲ ಸಮುದಾಯಕ್ಕೂ ಸದಸ್ಯತ್ವ ನೀಡುತ್ತಾರೆ.