Asianet Suvarna News Asianet Suvarna News

ತುಮಕೂರು: ಮಗು ಸಂಪಿಗೆ ಬಿದ್ದು ನೀರು ಕುಡಿದು ಸಾವು, ಡಿಎಚ್ಒ ಡಾ.ಮಂಜುನಾಥ್ ಸ್ಪಷ್ಟನೆ

ಮೇಲ್ನೋಟಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಯಾವುದೇ ಲೋಪವಾಗಿಲ್ಲ. ಮಗುವಿನ ಮರಣೋತ್ತರ ವರದಿ ಬಂದ ಬಳಿಕ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು: ಡಿಎಚ್ಒ ಡಾ.ಮಂಜುನಾಥ್ 

DHO Dr Manjunath React to Child Dies Case in Tumakuru grg
Author
First Published Dec 3, 2022, 9:42 AM IST

ತುಮಕೂರು(ಡಿ.03): ಮಗು ಸಂಪಿಗೆ ಬಿದ್ದು ನೀರು ಕುಡಿದ ಪರಿಣಾಮ ಸಾವನ್ನಪ್ಪಿದೆ. ಆಸ್ಪತ್ರೆಗೆ ಬರುವಾಗ ಮಗುವಿನ ಉಸಿರಾಟ ನಿಂತಿತ್ತು. ಮಗುವನ್ನು ಆಸ್ಪತ್ರೆಗೆ ತಂದ ತಕ್ಷಣ ಆಂಬ್ಯುಲೆನ್ಸ್ ವೈದ್ಯ ಡಾ.ಪುರುಷೋತ್ತಮ ಅವರು ತಪಾಸಣೆ ಮಾಡಿದ್ದರು. ಆಗಲೇ ಮಗುವಿನ ಉಸಿರಾಟ ನಿಂತಿರೋದನ್ನು ಅವರು ದೃಢಪಡಿಸಿದ್ದರು ಅಂತ ತುಮಕೂರು ಡಿಎಚ್ಒ ಡಾ.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. 

ಕೊಡಿಗೇನಹಳ್ಳಿಯಲ್ಲಿ ಸಂಪಿಗೆ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದರೊಂದಿಗೆ ಮಾತನಾಡಿದ ಡಿಎಚ್ಒ ಡಾ.ಮಂಜುನಾಥ್ ಅವರು, ಕೋಡಿಗೆನಹಳ್ಳಿಯ ಆಸ್ಪತ್ರೆಯ ಕರ್ತವ್ಯನಿರತ ವೈದ್ಯ ಡಾ.ರೋಹಿತ್ ಕ್ಷೇತ್ರ ಭೇಟಿಗೆ ತೆರಳಿದ್ದರು. ಪಕ್ಕದ ಮೈದನಹಳ್ಳಿಗೆ ಕ್ಷೇತ್ರ ಭೇಟಿ ಕೊಟ್ಟಿದ್ದರು. ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ವಾಪಸ್ ಬಂದಿದ್ದರು. ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಹಾಗೂ ಚಾಲಕ ಎರಡೂ ಸೌಲಭ್ಯ ಇದೆ. ಮೇಲ್ನೋಟಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಯಾವುದೇ ಲೋಪವಾಗಿಲ್ಲ. ಮಗುವಿನ ಮರಣೋತ್ತರ ವರದಿ ಬಂದ ಬಳಿಕ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದ್ದಾರೆ. 

ರೈತ ಸಮುದಾಯಕ್ಕೆ ಬಿಜೆಪಿ ಕೊಡುಗೆ ಅಪಾರ: ಮಂಜುಳಾ

ಚಿಕಿತ್ಸೆ ಸಿಗದೇ ಬಾಲಕ ಸಾವು, ಎಚ್ಡಿಕೆ ಕಣ್ಣೀರು

ಮಧುಗಿರಿ: ಆಸ್ಪತ್ರೆಯೊಂದರಲ್ಲಿ ವೈದ್ಯರಿಲ್ಲದೆ ಬಾಲಕ ಸಾವಿಗೀಡಾಗಿದ್ದು, ಶವವನ್ನು ಕುಟುಂಬಸ್ಥರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮುಂದಿಟ್ಟು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡ ಘಟನೆ ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ನಡೆದಿದೆ.

KARNATAKA POLITICS : ದಲಿತ ಸಿಎಂ ಮಾಡಲು ಪಕ್ಷ ಮುಕ್ತವಾಗಿದೆ

ಕೊಡಿಗೆನಹಳ್ಳಿ ನಿವಾಸಿ ಚೌಕತ್‌ ಎಂಬವರ ಪುತ್ರ ಸಾದೀಕ್‌ ಸಾವಿಗೀಡಾದ ಬಾಲಕ. ಬೆಳಗ್ಗೆ ಶಾಲೆಗೆ ಹೋಗಿದ್ದ ಈತ ಮನೆಗೆ ಬಂದ ಬಳಿಕ ನೀರಿನ ಸಂಪ್‌ಗೆ ಬಿದ್ದು ಅಸ್ವಸ್ಥನಾಗಿದ್ದ. ಕೂಡಲೇ ಕುಟುಂಬಸ್ಥರು ಈತನನ್ನು ಕೊಡಿಗೆನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಆ ಸಮಯದಲ್ಲಿ ಆಂಬ್ಯುಲೆನ್ಸ್‌ ಹಾಗೂ ವೈದ್ಯರಿಲ್ಲದೆ, ಚಿಕಿತ್ಸೆ ಸಿಗದಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಕಣ್ಣೆದುರೆ ಕೈಯಲ್ಲೇ ಮಗು ಸಾವನ್ನಪ್ಪಿದ ಅಘಾತ ತಾಳಲಾರದೇ ಕುಸಿದು ಬಿದ್ದ ತಂದೆ ತಾಯಿಗಳು ಜೀವ ಬಿಟ್ಟಮಗುವನ್ನು ಎತ್ತಿಕೊಂಡು ಓಡಿ ಬಂದರು.

ಈ ವೇಳೆ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದ ಎಚ್‌.ಡಿ.ಕುಮಾರಸ್ವಾಮಿ ಎದುರಾಗಿದ್ದು, ಪೋಷಕರ ಕೈಯಲ್ಲಿ ಮಗುವಿನ ಪಾರ್ಥಿವ ಶರೀರ ಕಂಡು ತಕ್ಷಣ ಮಗುವನ್ನು ಪಂಚರತ್ನ ವಾಹನದ ಮೇಲಕ್ಕೆ ಎತ್ತಿಕೊಂಡ ಕುಮಾರಸ್ವಾಮಿ ಕಣ್ಣೀರಿಟ್ಟರು. ಪೋಷಕರ ಬಳಿ ಮಾಹಿತಿ ಪಡೆದ ಮಾಜಿ ಸಿಎಂ ಕುಮಾರಸ್ವಾಮಿ ಸ್ಥಳದಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌ ಮತ್ತು ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಹಾಗೂ ತುಮಕೂರು ಡಿಎಚ್‌ಓ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕ ವೀರಭದ್ರಯ್ಯ ಮಗು ಕಳೆದುಕೊಂಡ ಕುಟುಂಬಕ್ಕೆ ತಲಾ ಒಂದೊಂದು ಲಕ್ಷ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
 

Follow Us:
Download App:
  • android
  • ios