Asianet Suvarna News

ಸಮರ್ಥ ನಾಯ​ಕ​ರಿ​ಲ್ಲದೇ ಸೊರ​ಗಿದ ಕಾಂಗ್ರೆಸ್‌..!

* ಜಿಪಂ-ತಾಪಂ, ಮಹಾ​ನ​ಗರ ಪಾಲಿಕೆ ಚುನಾ​ವ​ಣೆ ಹೇಗೆ ನಿರ್ವ​ಹಿ​ಸ​ಲಿದೆ ಕಾಂಗ್ರೆಸ್‌?
* ಕ್ಷೇತ್ರಕ್ಕೆ ತಡ​ವಾಗಿ ಆಗ​ಮಿ​ಸಿ​ರುವ ಮಾಜಿ ಸಚಿವ ಸಂತೋಷ ಲಾಡ್‌ಗೆ ಹಲವು ಸವಾಲು
* ಬಿಜೆಪಿ ಪಕ್ಷದ ವಿರುದ್ಧ ಒಗ್ಗೂಡಿ ಕೆಲಸ ಮಾಡು​ವಲ್ಲಿ ಹಿಂದೆ ಬಿದ್ದ ಕೈ ನಾಯ​ಕರು
 

Dharwad District Congress Faces Lac of Leadership grg
Author
Bengaluru, First Published Jul 21, 2021, 8:32 AM IST
  • Facebook
  • Twitter
  • Whatsapp

ಬಸವರಾಜ ಹಿರೇಮಠ

ಧಾರ​ವಾ​ಡ(ಜು.21): ಒಂದು ಕಾಲ​ದಲ್ಲಿ ಕಾಂಗ್ರೆಸ್‌ ಪಕ್ಷದ ಭದ್ರ​ಕೋಟೆಯಾಗಿದ್ದ ಧಾರ​ವಾಡ ಜಿಲ್ಲೆ​ಯ​ಲ್ಲೀಗ ಪಕ್ಷ​ವನ್ನು ಮುನ್ನ​ಡೆ​ಸುವ ಹಾಗೂ ಸಂಘ​ಟಿ​ಸುವ ಒಬ್ಬ​ರೂ ಸಮರ್ಥ ನಾಯ​ಕ​ರು ಇಲ್ಲದಂತಾಗಿರು​ವುದು ಸೋಜಿ​ಗದ ಸಂಗತಿ.
ಪ್ರಸ್ತುತ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಹು-ಧಾ ಮಹಾ​ನಗರ ಪಾಲಿಕೆಯ ಚುನಾ​ವ​ಣೆಗೆ ಸಂಬಂಧಿ​ಸಿ​ದಂತೆ ಪ್ರಕ್ರಿ​ಯೆ​ಗಳು ಶುರು​ವಾ​ಗಿ​ದ್ದರೂ ಕಾಂಗ್ರೆಸ್‌ ಮಾತ್ರ ಇನ್ನೂ ಸಿದ್ಧ​ವಾ​ಗದೇ ಇರು​ವುದು ಈ ಚುನಾ​ವಣೆಗಳ​ನ್ನು ಎದು​ರಿ​ಸು​ವುದು ಪಕ್ಷಕ್ಕೆ ಮತ್ತಷ್ಟು ಸವಾಲು ತಂದೊಡ್ಡಿದೆ.

ಅವಳಿ ನಗ​ರ​ದಲ್ಲಿ ಪ್ರಸಾದ ಅಬ್ಬಯ್ಯ, ಗ್ರಾಮೀ​ಣ​ದಲ್ಲಿ ಕುಸುಮಾ ಶಿವಳ್ಳಿ ಹೊರತು ಪಡಿ​ಸಿ​ದರೆ ಜಿಲ್ಲೆ​ಯಲ್ಲಿ ಮತ್ತೆಲ್ಲೂ ಶಾಸ​ಕ​ರಿಲ್ಲ. ಈ ಇಬ್ಬರೂ ಶಾಸ​ಕರು ತಮ್ಮ ಕ್ಷೇತ್ರ ಹೊರತುಪಡಿ​ಸಿ ಜಿಲ್ಲೆ​ಯನ್ನು ಮುನ್ನೆ​ಡೆ​ಸುವ ಸಾಮರ್ಥ್ಯ ಹೊಂದಿ​ಲ್ಲ. ಮಾಜಿ ಸಚಿವ ವಿನಯ ಕುಲ​ಕರ್ಣಿ, ಯೋಗೀ​ಶ​ಗೌಡ ಗೌಡರ ಕೊಲೆ ಪ್ರಕ​ರ​ಣ​ದಲ್ಲಿ ಜೈಲಿ​ನ​ಲ್ಲಿದ್ದು, ಎರ​ಡನೇ ಹಂತದ ಯಾವ ನಾಯ​ಕರೂ ಇಲ್ಲದ ಕಾರಣ ಬರುವ ಚುನಾ​ವಣೆಯಲ್ಲಿ ಕಾಂಗ್ರೆಸ್‌ ಯಾವ ರೀತಿ ತನ್ನ ಅಸ್ತಿತ್ವ ಉಳಿ​ಸಿಕೊ​ಳ್ಳ​ಲಿದೆ ಎಂಬುದು ಯಕ್ಷಪ್ರಶ್ನೆ​ಯಾ​ಗಿ​ದೆ.

ಲಾಡ್‌ ಎಂಟ್ರಿ:

ಮಾಜಿ ಸಚಿ​ವ​ ಸಂತೋಷ ಲಾಡ್‌ ಅವರು ತಡ​ವಾಗಿಯಾದರೂ ಮತ್ತೆ ಪಕ್ಷ ಸಂಘ​ಟ​ನೆಗೆ ಇಳಿ​ದಿ​ದ್ದಾರೆ. ಅವ​ರಿಂದ ಜಿಲ್ಲೆಯ ಪಕ್ಷದ ಸಂಘ​ಟನೆ ಸಾಧ್ಯ​ವೂ ​ಇದೆ. ಆದರೆ, ಅವರ ಕಾರ್ಯ ಬರೀ ಕಲ​ಘ​ಟ​ಗಿಗೆ ಮಾತ್ರ ಸೀಮಿ​ತ​ವಾಗಿದೆ. ಇಷ್ಟುದಿನ​ಗಳ ಕಾಲ ಕ್ಷೇತ್ರಕ್ಕೆ ಬರ​ದಿ​ರುವ ಕಾರಣ ಅವರು ಕ್ಷೇತ್ರ​ದ​ಲ್ಲಿಯೇ ಇದ್ದು ಪಕ್ಷದ ಸಂಘ​ಟ​ನೆಗೆ ಮುಂದಾ​ದರೂ ಮತ​ದಾ​ರರು ಅವ​ರನ್ನು ಕೂಡಲೇ ಒಪ್ಪಿ​ಕೊ​ಳ್ಳು​ವುದು ಕಷ್ಟ. ಅಲ್ಲದೇ, ಲಾಡ್‌ ಅವರ ಗೈರು ಹಾಜ​ರಿ​ಯಲ್ಲಿ ವಿಪ ಮಾಜಿ ಸದಸ್ಯ ನಾಗ​ರಾಜ ಛಬ್ಬಿ ತಮ್ಮ ಕಾರ್ಯ​ಗ​ಳನ್ನು ಕಲ​ಘ​ಟ​ಗಿ​ಯಲ್ಲಿ ವಿಸ್ತ​ರಿ​ಸಿ​ದ್ದರು. ಇದೀಗ ಲಾಡ್‌ ಅವರು ಮತ್ತೆ ಎಂಟ್ರಿ ಕೊಟ್ಟ ಕಾರಣ ನಾಗ​ರಾಜ ಛಬ್ಬಿ ಬಣ​ವನ್ನು ಸಂತೈ​ಸು​ವುದೇ ಅವ​ರಿಗೆ ದೊಡ್ಡ ತಲೆ​ನೋ​ವಾ​ಗಿದೆ.

'ಸ್ಪಷ್ಟ ಬರದಿದ್ದರೂ ಬರದಿದ್ರೂ 2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ'

ಇನ್ನು, ಕಾಂಗ್ರೆಸ್‌ ಮಹಾ​ನ​ಗರ ಹಾಗೂ ಗ್ರಾಮೀಣ ಜಿಲ್ಲಾ​ಧ್ಯ​ಕ್ಷ​ರಿಂದ ಪಕ್ಷದ ಸಂಘ​ಟನೆ ಹಾಗೂ ಚುನಾ​ವಣೆ ಎದು​ರಿ​ಸು​ವುದು ಕಷ್ಟ ಸಾಧ್ಯ. ಹೀಗಾಗಿ ಇಡೀ ಜಿಲ್ಲೆ​ಯನ್ನು ಮುನ್ನಡೆ​ಸುವ ಮುಖಂಡರ ಕೊರತೆ ಕಾಂಗ್ರೆಸ್‌ ಪಕ್ಷ​ದಲ್ಲಿ ಹೆಚ್ಚಾ​ಗಿಯೇ ಇದೆ. ಕಾಂಗ್ರೆಸ್‌ ಪಕ್ಷ​ದಲ್ಲಿ ನಾಯ​ಕರೇ ಇಲ್ಲ ಎನ್ನುವಂತಿಲ್ಲ. ಇರುವ ನಾಯ​ಕರು ತಮ್ಮ -ತಮ್ಮ ಕ್ಷೇತ್ರ​ಕ್ಕೇ ಸೀಮಿ​ತ​ವಾ​ಗಿ​ರು​ವುದೇ ಪಕ್ಷ ಸಂಘ​ಟ​ನೆ​ಗೊ​ಳ್ಳಲು ತುಸು ತೊಡ​ಕಾ​ಗಿದೆ. ಇದ​ರೊಂದಿಗೆ ಅಧಿ​ಕಾರ ಕಳೆ​ದು​ಕೊಂಡರೂ ಬುದ್ಧಿ ಕಲಿ​ಯದ ಕೈ ನಾಯ​ಕರು ಬಿಜೆಪಿ ಪಕ್ಷದ ವಿರುದ್ಧ ಒಗ್ಗೂಡಿ ಕೆಲಸ ಮಾಡು​ವಲ್ಲಿ ಹಿಂದೆ ಬಿದ್ದಿ​ದ್ದಾರೆ. ತಮ್ಮ -ತಮ್ಮ​ಲ್ಲಿಯೇ ಗುಂಪು​ಗಾ​ರಿ​ಕೆ​ಯಿಂದ ಪಕ್ಷ ಅಧೋ​ಗ​ತಿಗೆ ಇಳಿ​ದಿ​ದೆ.

ಕುಂದದ ಉತ್ಸಾಹ:

ಕಾಂಗ್ರೆಸ್‌ ಪಕ್ಷ​ದಲ್ಲಿ ಗುಂಪು​ಗಾ​ರಿಕೆ ಇದ್ದರೂ, ಸಮರ್ಥ ನಾಯ​ಕರು ಇಲ್ಲದೇ ಇದ್ದರೂ ಮೂಲ ಕಾರ್ಯ​ಕ​ರ್ತ​ರಲ್ಲಿ ಪಕ್ಷದ ಮೇಲಿನ ಅಭಿ​ಮಾನ ಮಾತ್ರ ಕಡಿ​ಮೆ​ಯಾ​ಗಿಲ್ಲ. ಉತ್ಸಾಹ ಕುಂದಿಲ್ಲ. ಪಕ್ಷ​ಕ್ಕಾಗಿ ನಾವಿನ್ನೂ ಶ್ರಮಿ​ಸು​ತ್ತೇವೆ ಎನ್ನು​ತ್ತಿ​ದ್ದಾರೆ. ಆದ್ದ​ರಿಂದ ಪಕ್ಷ​ದಲ್ಲಿ ಮುಖಂಡರು ಎನಿ​ಸಿ​ಕೊಂಡ​ವರು ಬಿಜೆ​ಪಿಯ ಆಡ​ಳಿತ ವಿರೋಧಿ ಅಲೆ​ಯನ್ನು ಬಳ​ಸಿ​ಕೊಂಡು ಪಕ್ಷ​ವನ್ನು ಸಂಘ​ಟಿ​ಸಿ​ಕೊಂಡು ಹೋಗಿದ್ದೇ ಆದಲ್ಲಿ ಬರುವ ದಿನ​ಗ​ಳಲ್ಲಿ ಕಾಂಗ್ರೆಸ್‌ನಲ್ಲಿ ಜಿಲ್ಲೆ​ಯಲ್ಲಿ ಉತ್ತಮ ಭವಿಷ್ಯ ಇದೆ ಎನ್ನುವ ಮಾತು​ಗಳು ಕೇಳಿಬರು​ತ್ತಿವೆ.
 

Follow Us:
Download App:
  • android
  • ios