ಕುಂದಗೋಳ ಬಿಜೆಪಿ ಮಾಜಿ ಶಾಸಕ ಪುತ್ರಿ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ, [ನ.22]: ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ದ ಸ್ವಪಕ್ಷದ ಮಾಜಿ ಶಾಸಕನ ಪುತ್ರಿ ಫೇಸ್ ಬುಕ್ ವಾರ್ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಕುಂದಗೋಳ ಮಾಜಿ ಶಾಸಕ ಎಸ್.ಐ.‌ಚಿಕ್ಕನಗೌಡ್ರ ಮಗಳ ನಂದಾ ಚಿಕ್ಕನಗೌಡ್ರ ಅವರು ಸಂಸದ ಹಠಾವೋ ಬಿಜೆಪಿ ಬಚಾವೋ ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿ ಜೋಶಿ ವಿರುದ್ದ ಸಿಡಿದೆದ್ದಿದ್ದಾರೆ.

"

ನಮ್ಮ ತಂದೆಯ ಸೋಲಿಗೆ ಕಾರಣರಾದ ಮಹೇಶ್ ಗೌಡ ಜೊತೆಗೆ ನೀವು ಹೊಂದಾಣಿಕೆ ಮಾಡಿದ್ದೀರಿ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಮಹೇಶ್ ಗೌಡ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ್ರು, ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್ ಶಿವಳ್ಳಿ ಪರ ಕೆಲಸ ಮಾಡಿದ್ದರು.ಆದ್ರೆ ಸಧ್ಯ ನೀವು ಅವರಿಗೆ ಮಣೆ ಹಾಕುತ್ತಿದ್ದೀರಿ, 

ನಮ್ಮ‌ ತಂದೆ ಸೋಲಿಗೆ ಕಾರಣದವರಿಗೆ ಬುದ್ದಿ ಕಲಿಸುತ್ತೆವೆ. ನಾವು ಫ್ರೂಫ್ ಸಮೇತ ಹೇಳಿದ್ದೇವೆ, ಆದ್ರು ನೀವು ಕ್ರಮ ತೆಗೆದುಕೊಂಡಿಲ್ಲ ಎಂದು ಫೇಸ್ ಬುಕ್ ಮೂಲಕ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನಂದಾ, ಮುಂದೆ ಲೋಕಸಭೆ ಚುನಾವಣೆ ಇದೆ. ವಿಚಾರ‌ ಮಾಡಿ ಎಂದು ಪ್ರಹ್ಲಾದ್ ಜೋಶಿಗೆ ಚುನಾವಣೆಗೂ ಮುನ್ನವೇ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನು ನಂದಾ ಪೋಸ್ಟ್ ಗೆ ಬೆಂಬಲವಾಗಿ ಚಿಕ್ಕನ ಗೌಡ್ರ ಅಭಿಮಾನಿಗಳೂ ಸಹ ಜೋಶಿ ವಿರುದ್ದ ಹರಿಹಾಯ್ದಿದ್ದಾರೆ.

ನಂದಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೊಸೆಯೂ ಹೌದು. ಇದ್ರಿಂದ ಬಿಜೆಪಿಗೆ ಇರುಸುಮುರುಸು ಉಂಟುಮಾಡಿದೆ.