ರಾಯಚೂರು: ರಾಯರ ಮೂಲಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ
ನವರತ್ನ ಕವಚವನ್ನು ರಾಯರಿಗೆ ದೇಣಿಗೆಯಾಗಿ ನೀಡಿದ ಹೈದರಾಬಾದ್ ಮೂಲದ ಎ.ವೆಂಕಟರೆಡ್ಡಿ ಮತ್ತು ಕುಟುಂಬಸ್ಥರು
ರಾಯಚೂರು(ಸೆ.30): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಭಕ್ತರೊಬ್ಬರು ಶ್ರೀಗುರುಸಾರ್ವಭೌಮರ ಮೂಲಬೃಂದಾವನಕ್ಕೆ ನವರತ್ನ ಕಚಿತ ಕವಚವನ್ನು ದೇಣಿಗೆಯಾಗಿ ನೀಡಿದ್ದಾರೆ.
ಹೈದರಾಬಾದ್ ಮೂಲದ ಎ.ವೆಂಕಟರೆಡ್ಡಿ ಮತ್ತು ಕುಟುಂಬಸ್ಥರು ಈ ನವರತ್ನ ಕವಚವನ್ನು ರಾಯರಿಗೆ ದೇಣಿಗೆಯಾಗಿ ನೀಡಿದ್ದು, ದಾನಿಗಳಿಂದ ಪಡೆದ ಆ ನವರತ್ನ ಕಚಿತ ಕವನವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀಗುರುರಾಯರ ಮೂಲಬೃಂದಾವನಕ್ಕೆ ಅಲಂಕರಿಸಿ, ಪೂಜೆಯನ್ನು ನೆರವೇರಿಸುವುದರ ಮೂಲಕ ಸಮರ್ಪಿಸಿದರು.
ಮಂತ್ರಾಲಯದಲ್ಲಿ ಕರ್ನಾಟಕ ಛತ್ರ ಲೋಕಾರ್ಪಣೆ
ಹುಂಡಿಯಲ್ಲಿ 1.64 ಕೋಟಿ ಸಂಗ್ರಹ:
ಶ್ರೀಮಠದಲ್ಲಿ ಗುರುವಾರ ಸೆಪ್ಟಂಬರ್ ಮಾಯೆಯ ಹುಂಡಿಯಲ್ಲಿ 1 ಕೋಟಿ 64 ಲಕ್ಷ 36,626 ರು. ನಗದು,ಚಿನ್ನಾಭರಣವು ಸಂಗ್ರಹವಾಗಿದೆ. ಮಠದ ಅಧಿಕಾರಿ,ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸೇರಿಕೊಂಡು ಹುಂಡಿಯಲ್ಲಿದ್ದ ನಗದು, ಚಿನ್ನಾಭರಣವನ್ನು ಲೆಕ್ಕಿಸಿದ್ದು ಈ ವೇಳೆ 1 ಕೋಟಿ 61 ಲಕ್ಷ 05,626 ಮೊತ್ತದ ನೋಟು, 3 ಲಕ್ಷ 31 ಸಾವಿರ ನಾಣ್ಯ ಮತ್ತು 62 ಗ್ರಾಂ ಚಿನ್ನ, 1448 ಗ್ರಾಮ ಬೆಳ್ಳಿಯನ್ನು ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ.