16.73 ಕೋಟಿ ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣ ಅಭಿವೃದ್ಧಿ: ವಿ.ಸೋಮಣ್ಣ

ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣಕ್ಕೆ ಚನ್ನಬಸವೇಶ್ವರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. 

Development of Gubbi Railway Station at a cost of 16 73 crores Says V Somanna gvd

ತುಮಕೂರು (ಅ.27): ಗುಬ್ಬಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ₹16.73 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಈಗಾಗಲೇ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣಕ್ಕೆ ಚನ್ನಬಸವೇಶ್ವರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಇದಕ್ಕೂ ಮುನ್ನ ಚನ್ನಸೆಟ್ಟಿಹಳ್ಳಿ ಬಳಿ ಶಿವಮೊಗ್ಗ-ತುಮಕೂರು ಹೆದ್ದಾರಿಗೆ ಗುಬ್ಬಿಯ ಬಳಿ ನಿರ್ಮಿಸವಾಗುತ್ತಿರುವ ವರ್ತುಲ ರಸ್ತೆ ಕಾಮಗಾರಿ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡದೆ ಇದ್ದ ಕಾರಣ ಅಪೂರ್ಣವಾಗಿತ್ತು. 

ಖುದ್ದು ರೈತರ ಮನೆಯ ಬಳಿಯೆ ತೆರಳಿದ ಸಚಿವ ಸೋಮಣ್ಣ ರೈತರ ಸಮಸ್ಯೆಗಳನ್ನು ಅಲಿಸಿ ರೈತರಿಗೆ ಕೊಡಬೇಕಾದ ₹2.94 ಕೋಟಿನ್ನು ಶೀಘ್ರವೇ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆಯ ಬಳಿ ಇರುವ ಉದ್ದಾನೇಶ್ವರ ದೇವಸ್ಥಾನವನ್ನು ಸ್ಥಳಾಂತರ ಮಾಡಿ ದೇವಸ್ಥಾನ ಕಟ್ಟಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ಮನವೊಲಿಸಿದರು. ನಿಟ್ಟೂರು ಹಾಗೂ ಕೆ.ಬಿ. ಕ್ರಾಸ್‌ನಲ್ಲಿ ಬೆಂಬಲಿಗರ ಜೊತೆ ಮಾತುಕತೆ ನಡೆಸಿದರು. ತಿಪಟೂರಿನ ಕೌಸ್ತುಬಾ ಹೋಟೆಲ್‌ನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ: ನಾನು ನಿಂತ ನೀರಲ್ಲ ಹರಿಯುವ ನೀರು ಕೆಲಸ ಮಾಡಕ್ಕೆ ಬಂದಿದ್ದೇನೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದುಸೋಮಣ್ಣ ತಿಳಿಸಿದರು. ನಾನು ನಿಂತ ನೀರಲ್ಲ ಹರಿಯುವ ನೀರು ಕೆಲಸ ಮಾಡಕ್ಕೆ ಬಂದಿದ್ದೇನೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು. ಗುಬ್ಬಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಕೆಲಸ ಪರಿಶೀಲಿಸಿ ಮಾತನಾಡಿದರು.ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಕೆಲಸ ಪರಿಶೀಲಿಸಿ ಮಾತನಾಡಿ, 4 ತಿಂಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯಡಿ ಕೆಲಸಗಳು ಜಿಲ್ಲೆಯಲ್ಲಿ ನಡೆಸುತ್ತೇನೆ. ಹೆದ್ದಾರಿ ಅಭಿವೃದ್ಧಿ ಬಗ್ಗೆ ಕೇಂದ್ರದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸುತ್ತೇನೆ. ಸ್ಥಳೀಯ ತೊರೇಹಳ್ಳಿ ಗ್ರಾಮದ ಅಣೆ ರಸ್ತೆಗೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರಿಂದ ಅರ್ಜಿ ಬಂದಿದೆ. ಈ ಕಾರ್ಯ ಕೂಡಾ ಶೀಘ್ರ ಮಾಡಿಸುವ ಭರವಸೆ ನೀಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ರೈಲ್ವೆ ಯೋಜನೆ: ಸಂಸದ ಡಾ.ಕೆ.ಸುಧಾಕರ್‌

ಪಟ್ಟಣದಿಂದ ಚೇಳೂರು ರಸ್ತೆ ಮಾರ್ಗ ಸೇರಲು ಅಂಡರ್ ಪಾಸ್ ರಸ್ತೆ ನಾಗರೀಕರ ಶಾಪಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರೈಲ್ವೆ ಬೋರ್ಡ್ ಅಧಿಕಾರಿಗಳು ನಿಯಮಾನುಸಾರ 5.5 ಮೀ. ರಸ್ತೆಗೆ ನಕ್ಷೆ ತಯಾರಿಸಿದ್ದಾರೆ. ಆದರೆ ಸಾರ್ವಜನಿಕರ ಹಿತಕ್ಕೆ 7.5 ಮೀ. ರಸ್ತೆ ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದು, ವರ್ಷದಲ್ಲಿ ಈ ಕೆಲಸ ಪೂರ್ಣ ಮಾಡಿಕೊಡುವ ಭರವಸೆ ನೀಡಿದರು.ಮಾಜಿ ಸಂಸದ ಜಿ.ಎಸ್.ಬಸವರಾಜು, ಮುಖಂಡರಾದ ಎಸ್. ಡಿ.ದಿಲೀಪ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ ,ಜಿ.ಆರ್.ಶಿವಕುಮಾರ್, ಹಿತೇಶ್, ಸುರೇಶ್ ಗೌಡ, ರೈಲ್ವೆ ಉನ್ನತ ಅಧಿಕಾರಿಗಳಾದ ತ್ರಿನೇತ್ರ, ರಾಜುಶರ್ಮ, ಹರೀಶ್ ಗುಪ್ತಾ, ಗುಲ್ ಅಶ್ರಫ್ ಇದ್ದರು.

Latest Videos
Follow Us:
Download App:
  • android
  • ios