ಅಭಿವೃದ್ಧಿಯನ್ನು ಶೂನ್ಯದಲ್ಲಿಟ್ಟಸುರೇಶ್‌ಗೌಡ : ಚಲುವರಾಯಸ್ವಾಮಿ

:  ಐದು ವರ್ಷಗಳಿಂದ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಯನ್ನು ಶೂನ್ಯದಲ್ಲಿಟ್ಟವರು ಸುರೇಶ್‌ಗೌಡ. ಕ್ಷೇತ್ರಕ್ಕೆ ನನ್ನ ಕಾಲದ ಕೊಡುಗೆಗಳನ್ನು ಹೊರತುಪಡಿಸಿದರೆ ಇನ್ನಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

Development at Zero Tattasuresh Gowda : Chaluvarayaswamy snr

 ನಾಗಮಂಗಲ :  ಐದು ವರ್ಷಗಳಿಂದ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಯನ್ನು ಶೂನ್ಯದಲ್ಲಿಟ್ಟವರು ಸುರೇಶ್‌ಗೌಡ. ಕ್ಷೇತ್ರಕ್ಕೆ ನನ್ನ ಕಾಲದ ಕೊಡುಗೆಗಳನ್ನು ಹೊರತುಪಡಿಸಿದರೆ ಇನ್ನಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ನಾಗಮಂಗಲ ಕ್ಷೇತ್ರಕ್ಕೆ ಆಸ್ಪತ್ರೆ, ಬಸ್‌ ನಿಲ್ದಾಣ, ಅಗ್ನಿಶಾಮಕದಳ, ವಿದ್ಯುತ್‌ ಕಚೇರಿ, ಆರ್‌ಟಿಓ, ಪಾಲಿಟೆಕ್ನಿಕ್‌ ಕಾಳೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯಭವನಗಳು, ಅಂಬೇಡ್ಕರ್‌ ಭವನ, ಅಂಗನವಾಡಿಗಳು ಇವೆಲ್ಲವೂ ನನ್ನ ಕಾಲದಲ್ಲಿ ನಿರ್ಮಾಣವಾದಂತಹವು. ಅವರು ಒಂದೇ ಒಂದು ಅಂಗನವಾಡಿ ಕಟ್ಟಿಸಿದ್ದಾರಾ. ಐದು ವರ್ಷಗಳಿಗೆ ಕ್ಷೇತ್ರದ ಜನರಿಗೆ ಕೊಟ್ಟಿದ್ದೇನು. ಇದಕ್ಕೆ ಉತ್ತರಿಸುವ ಕಾಲ ಬಂದಿದೆ ಎಂದು ತಿಳಿಸಿದರು.

ಮಾರ್ಕೋನಹಳ್ಳಿ ಅಣೆಕಟ್ಟೆಯಿಂದ ಆದಿ ಚುಂಚನಗಿರಿ ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿದೆ. ಅದರಿಂದ ಇಲ್ಲಿಯವರೆ ನೀರು ಕೊಡಲಾಗಲಿಲ್ಲ. ಹೇಮಾವತಿ ನದಿ ನೀರಿನಿಂದ ಕೆರೆಗಳನ್ನು ತುಂಬಿಸುವ ಕೆಲಸವಾಗಿಲ್ಲ. ರಸ್ತೆಗಳ ಅಭಿವೃದ್ಧಿ ಕೆಲಸಗಳೆಲ್ಲವೂ ಕುಂಠಿತಗೊಂಡಿವೆ ಎಂದು ಶಾಸಕ ಸುರೇಶ್‌ಗೌಡರ ಕಾರ್ಯವೈಖರಿಯನ್ನು ಟೀಕಿಸಿದರು.

ಜಿಲ್ಲೆಯ ಜನರು ಏಳಕ್ಕೆ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್‌ ಗೆಲ್ಲಿಸಿದರು. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇಬೇಕೆಂಬ ಕಾರಣಕ್ಕೆ ಕ್ಷೇತ್ರಾದ್ಯಂತ ಸುತ್ತಾಡಿದರು. ಮುಖ್ಯಮಂತ್ರಿಯಾದ ಮೇಲೆ ಕುಮಾರಸ್ವಾಮಿ ಮತ್ತೆ ಇತ್ತ ಕಡೆ ಬಂದರಾ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸಿದರಾ ಎಂದು ಪ್ರಶ್ನಿಸಿದರಲ್ಲದೆ, ಅವರ 15 ತಿಂಗಳ ಅವಧಿಯಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಆಗಲಿಲ್ಲ, ವಿಧವಾ ವೇತನ ಹೆಚ್ಚಿಸಲಿಲ್ಲ. ಮಹಿಳೆಯರು, ರೈತರು, ಕಾರ್ಮಿಕರು, ಯುವಕರಿಗೆ ಒಂದೇ ಒಂದು ಕಾರ್ಯಕ್ರಮವನ್ನು ನೀಡಲಿಲ್ಲ. ಹೇಮಾವತಿಯನ್ನು ಬಯಲುಸೀಮೆಗೆ ಹರಿಸಲಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ನುಡಿದಂತೆ ನಡೆಯುವ ಯಾವುದಾದರೊಂದು ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಮಾತ್ರ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೂರಕ್ಕೆ ನೂರರಷ್ಟುಭರವಸೆಗಳನ್ನು ಈಡೇರಿಸಿದರು. ಎಲ್ಲಾ ವರ್ಗದ ಜನರಿಗೆ ಅನುಕೂಲ ಕಲ್ಪಿಸಿ ಸಾಮಾಜಿಕ ಸಮಾನತೆಯನ್ನು ತಂದುಕೊಟ್ಟರು. ದೇವಲಾಪುರ ಹ್ಯಾಂಡ್‌ಪೋಸ್ಟ್‌ ಬಳಿ 220 ಕೆವಿ ವಿದ್ಯುತ್‌ ಕೇಂದ್ರ ಸ್ಥಾಪನೆ ಡಿ.ಕೆ.ಶಿವಕುಮಾರ್‌ ಕೊಡುಗೆ ಎಂದ ಚಲುವರಾಯಸ್ವಾಮಿ ನಾವು ಜನರ ವೋಟು ಕೇಳುತ್ತಿರುವುದು ಅಧಿಕಾರದ ಆಸೆಯಿಂದ ಅಭಿವೃದ್ಧಿಗಾಗಿ. ರೈತರು, ಯುವಕರು, ಮಹಿಳೆಯರ ಬದುಕನ್ನು ರಕ್ಷಣೆ ಮಾಡುವುದಕ್ಕಾಗಿ ಕಾಂಗ್ರೆಸ್‌ ಗೆಲ್ಲಿಸುವಂತೆ ಮನವಿ ಮಾಡಿದರು.

ನನಗೆ ಅಧಿಕಾರ ಕೊಡಿ ಎನ್ನುತ್ತಿರುವುದು ಶಾಸಕನಾಗಿ ಮೆರೆಯುವುದಕ್ಕಲ್ಲ. ನಾನಿನ್ನೂ ಜನರ ಋುಣ ತೀರಿಸುವುದು ಬಾಕಿ ಇದೆ. ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾನು ಶಾಸಕನಾಗಿ ಆಯ್ಕೆಯಾದರೆ ಮಂದಗೆರೆ, ಕೆಆರ್‌ಎಸ್‌, ಮಾರ್ಕೋನಹಳ್ಳಿಯಿಂದ ಪ್ರತಿ ಹಳ್ಳಿಗೆ ಕುಡಿಯುವ ನೀರು ಒದಗಿಸುತ್ತೇನೆ. ನಾಗಮಂಗಲ ತಾಲೂಕಿನಲ್ಲಿ ಗಾರ್ಮೆಂಟ್ಸ್‌ ತೆರೆದು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸುವುದು, ಯುವಕರ ಉದ್ಯೋಗಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ತರುವ ಉದ್ದೇಶವನ್ನು ಹೊಂದಿದ್ದು ನನಗೆ ಶಕ್ತಿ ಕೊಡುವಂತೆ ಮನವಿ ಮಾಡಿದರು.

.ಡಿಕೆಶಿಗೆ ಮಂತ್ರಿ ಸ್ಥಾನ ತಪ್ಪಿಸಿದ್ದು ದೇವೇಗೌಡರು

ಧರ್ಮಸಿಂಗ್‌ ಮುಖ್ಯಮಂತ್ರಿಯಾದ ಸಮಯದಲ್ಲಿ ಡಿ.ಕೆ.ಶಿವಕುಮಾರ್‌ಗೆ ಮಂತ್ರಿ ಸ್ಥಾನ ತಪ್ಪಿಸಿದ್ದು ದೇವೇಗೌಡರು. ಆದರೆ, 2018ರಲ್ಲಿ ಅವರ ಮಗ (ಕುಮಾರಸ್ವಾಮಿ)ನನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಅವರ ಮನೆ ಬಾಗಿಲಿಗೆ ಹೋದವರು ಡಿ.ಕೆ.ಶಿವಕುಮಾರ್‌ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು. 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರಸರ್ಕಾರ ರಚನೆಯಾದಾಗ ಡಿ.ಕೆ.ಶಿವಕುಮಾರ್‌ಗೆ ಮಂತ್ರಿಸ್ಥಾನ ಕೊಡಬಾರದು ಎಂದು ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಆದರೂ, ಡಿ.ಕೆ.ಶಿವಕುಮಾರ್‌ 2018ರ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದಾಗ ಕುಮಾರಸ್ವಾಮಿ ಮನೆಗೆ ಹೋಗಿ ಮುಖ್ಯಮಂತ್ರಿ ಅಧಿಕಾರ ಕೊಟ್ಟರು. ಅಧಿಕಾರದುದ್ದಕ್ಕೂ ಅವರಿಗೆ ಬೆಂಬಲವಾಗಿ ನಿಂತರು. ಕುಮಾರಸ್ವಾಮಿ ಪುತ್ರನ ಚುನಾವಣೆಯಲ್ಲೂ ಅವರ ಪರವಾಗಿ ದುಡಿದರು. ಸರ್ಕಾರ ಬೀಳುವ ಹಂತದಲ್ಲಿದ್ದಾಗ ಮುಂಬೈ ಹೋಟೆಲ್‌ ಎದುರು ಧರಣಿ ಕುಳಿತು ರಕ್ಷಣೆಗೆ ಹೋರಾಡಿದರು. ಅದನ್ನೆಲ್ಲಾ ನೆನೆಯುವ ಕೃತಜ್ಞತೆ ಜೆಡಿಎಸ್‌ನವರಿಗಿಲ್ಲ ಎಂದು ದಳಪತಿಗಳನ್ನು ದೂರಿದರು.

Latest Videos
Follow Us:
Download App:
  • android
  • ios