ದೇವದುರ್ಗ: ಪುತ್ರನ ವಿರುದ್ಧ ಎಫ್‌ಐಆರ್ ಖಂಡಿಸಿ ಠಾಣೆ ಮುಂದೆ ಶಾಸಕಿ ಕರೆಮ್ಮ ಧರಣಿ
ಕೆಲ ಪೋಲಿಸರು ವಸೂಲಿಗೆ ಇಳಿದಿದ್ದಾರೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮರಳು ದಂಧೆ ವಿಚಾರವಾಗಿ ಪೇದೆಯೊಬ್ಬರನ್ನು ಠಾಣೆಗೆ ಕರೆಸಿಕೊಂಡು ಶಾಸಕಿ ಪುತ್ರ ಹಲ್ಲೆನಡೆಸಿದ್ದಾರೆಂದು ಪ್ರಕರಣ ದಾಖಲಾಗಿತ್ತು.
ದೇವದುರ್ಗ(ರಾಯಚೂರು)(ಫೆ.13): ಅಕ್ರಮ ಮರಳುಗಣಿಗಾರಿಕೆ ವಿಚಾರವಾಗಿ ಪೇದೆ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ ತಮ್ಮ ಪುತ್ರನ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಆರೋಪಿಸಿ ಶಾಸಕಿ ಕರೆಮ್ಮ ಜಿ.ನಾಯಕ ಭಾನುವಾರ ರಾತ್ರಿ ಪಟ್ಟಣದ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ ಪ್ರಸಂಗ ನಡೆಯಿತು.
ತಾಲೂಕಿನಲ್ಲಿ ಅಕ್ರಮ ಮರಳು ದಂಧೆ, ಇಸ್ಪೀಟ್ ಹಾಗೂ ಮಟ್ಕಾ ಹಾವಳಿ ತಡೆಯುವಂತೆ ಹೋರಾಟ ಮಾಡಿರುವ ಫಲವೇ ಈ ಸುಳ್ಳು ಪ್ರಕರಣ. ಉದ್ದೇಶಪೂರ್ವಕವಾಗಿ ನನ್ನ ಹಾಗೂ ನನ್ನ ಪಕ್ಷದ ಮುಖಂಡರ ತೇಜೋವಧೆ ಮಾಡಲಾಗುತ್ತದೆ. ಪೊಲೀಸರು ಘಟನೆಯ ವಿಡಿಯೋ ತುಣುಕು ಸರಿಯಾಗಿ ಪರಿಶೀಲಿಸಲಿ. ಪುತ್ರ ಸಂತೋಷ್ ಮೇಲೆ ಸುಳ್ಳು ಆಪಾದನೆ ಮಾಡಲಾಗಿದೆ ಎಂದು ಕಿಡಿಕಾರಿದರು. ನನ್ನ ಅಮಾಯಕ ಆಪ್ತ ಸಹಾಯಕನನ್ನು ಠಾಣೆಯಲ್ಲಿ ಕೂರಿಸಲಾಗಿದೆ. ಅಧಿವೇಶನಕ್ಕೆ ತಯಾರಿ ಮಾಡಿಕೊಳ್ಳಲು ಪಿಎ ಬೇಕು. ಉದ್ದೇಶಪೂರ್ವಕವಾಗಿ ಇಂಥ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದರು.
ಮೊದಲಿನಿಂದಲೂ ಬಿಜೆಪಿ, ಜೆಡಿಎಸ್ ಎರಡೂ ಒಂದೇ: ಸಚಿವ ರಹೀಮ್ ಖಾನ್
ಕೆಲ ಪೋಲಿಸರು ವಸೂಲಿಗೆ ಇಳಿದಿದ್ದಾರೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮರಳು ದಂಧೆ ವಿಚಾರವಾಗಿ ಪೇದೆಯೊಬ್ಬರನ್ನು ಠಾಣೆಗೆ ಕರೆಸಿಕೊಂಡು ಶಾಸಕಿ ಪುತ್ರ ಹಲ್ಲೆನಡೆಸಿದ್ದಾರೆಂದು ಪ್ರಕರಣ ದಾಖಲಾಗಿತ್ತು.
ನನ್ನ ಅಮಾಯಕ ಆಪ್ತ ಸಹಾಯಕನನ್ನು ಠಾಣೆಯಲ್ಲಿ ಕೂರಿಸಲಾಗಿದೆ. ಅಧಿವೇಶನಕ್ಕೆ ತಯಾರಿ ಮಾಡಿಕೊಳ್ಳಲು ಪಿಎ ಬೇಕು. ಉದ್ದೇಶಪೂರ್ವಕವಾಗಿ ಇಂಥ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಕೆಲ ಪೋಲಿಸರು ವಸೂಲಿಗೆ ಇಳಿದಿದ್ದಾರೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮರಳು ದಂಧೆ ವಿಚಾರವಾಗಿ ಪೇದೆಯೊಬ್ಬರನ್ನು ಠಾಣೆಗೆ ಕರೆಸಿಕೊಂಡು ಶಾಸಕಿ ಪುತ್ರ ಹಲ್ಲೆನಡೆಸಿದ್ದಾರೆಂದು ಪ್ರಕರಣ ದಾಖಲಾಗಿತ್ತು.