Asianet Suvarna News Asianet Suvarna News

ಗದಗ: ಡೆಂಘೀ ಹಾವಳಿಗೆ ತತ್ತರಿಸಿದ ಡಂಬಳ ಹೋಬಳಿ ಜನತೆ

ನಿರಂತರ ಮಳೆಯಿಂದಾಗಿ ಜ್ವರ, ಕೆಮ್ಮು, ನೆಗಡಿ ಪೀಡಿತರ ಸಂಖ್ಯೆ ಹೆಚ್ಚಳ

Dengue Fever Cases Increasing at Dambal in Gadag grg
Author
Bengaluru, First Published Aug 7, 2022, 10:38 PM IST | Last Updated Aug 7, 2022, 10:38 PM IST

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ(ಆ.07):  ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಗ್ರಾಮಗಳಲ್ಲಿ ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶ ಸೇರಿದಂತೆ ತಿಪ್ಪೆಗುಂಡಿಗಳಲ್ಲಿ ನೀರು ನಿಂತಿದೆ. ಜತೆಗೆ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಸೊಳ್ಳೆಗಳು ಹೆಚ್ಚಾಗಿ ಡೆಂಘೀ ಜ್ವರ ಬಾಧೆ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂಡರಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 124 ಮಂದಿ ತಪಾಸಣೆ ವೇಳೆ 12 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಡಂಬಳ, ಕದಾಂಪುರ, ಜಂತ್ಲಿಶಿರೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿತ್ಯದ ಜ್ವರ ಪೀಡಿತರು ಆಗಮಿಸುತ್ತಿದ್ದು, ಬಾಧೆ ಹೆಚ್ಚಾಗಿದೆ.

ಮಳೆ ಪ್ರಾರಂಭವಾದರೆ ಸಾಕು ಹಳ್ಳಿಗಳಲ್ಲಿ ಶೀತ ನೆಗಡಿ ಜ್ವರದ ಬಾಧೆ, ತಲೆನೋವು ಬಹುತೇಕರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ ಮಕ್ಕಳಿಗೆ ವಿಪರೀತವಾಗಿ ಜ್ವರದ ಬಾಧೆ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಕೊರೋನಾ ಹೊಡೆತಕ್ಕೆ ಜನರು ತತ್ತರಿಸಿ ಸುಧಾರಿಸಿಕೊಳ್ಳುವಷ್ಟರಲ್ಲಿ ಮಂಕಿಪಾಕ್ಸ್‌ ಆತಂಕ ಉಂಟಾಗಿದೆ. ಅದರಲ್ಲಿಯೂ ಡೆಂಘಿಘೀ ಅಬ್ಬರ ಗ್ರಾಮೀಣ ಭಾಗದಲ್ಲಿ ಜೋರಾಗಿದ್ದು, ಇತ್ತೀಚೆಗೆ ಜನರು ಖಾಸಗಿ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿ ಬರುತ್ತಿರುವ ಕಾರಣ ಆರೋಗ್ಯ ಇಲಾಖೆ ಸೇರಿದಂತೆ ಹೊರಗಡೆ ಡೆಂಘೀ ಜ್ವರದ ಅಂಕಿ ಅಂಶಗಳೇ ಗೊತ್ತಾಗುತ್ತಿಲ್ಲ.

ಡೆಂಗ್ಯೂಗೆ ಸಂಬಂಧಿಸಿದ ಈ ಸುಳ್ಳುಗಳನ್ನೆಲ್ಲಾ ನಂಬಬೇಡಿ… Fake News ಹಬ್ಬಿಸ್ತಾರೆ ಎಚ್ಚರ

ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು

ಡೆಂಘಿ ಜ್ವರವು ಅಸ್ವಚ್ಛತೆಯಿಂದ ಉಂಟಾಗುವ ಜಾಗೆಯಿಂದ ಹುಟ್ಟಿಕೊಳ್ಳುವ ಸೊಳ್ಳೆಯಿಂದ ಹರಡುವ ಅಪಾಯಕಾರಿ ಕಾಯಿಲೆಯಾಗಿದೆ. ದಿನಕಳೆದಂತೆ ಡೆಂಘಿಘೀ ಜ್ವರ ತೀವ್ರವಾಗಿ ಡೆಂಘಿಘೀ ಹೆಮರಾಜಿಕ್‌ ಜ್ವರವಾಗಿ ಪರಿವರ್ತನೆಯಾದ ನಂತರ ಗಂಭೀರ ರಕ್ತಸ್ರಾವ, ರಕ್ತದೊತ್ತಡ ಉಂಟಾಗುವುದರ ಮೂಲಕ ಸಾವಿಗೆ ಕಾರಣವಾಗಬಹುದು. ಹೀಗಾಗಿ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಸ್ವಚ್ಛತಾ ಕ್ರಮಕ್ಕೆ ಮುಂದಾಗಬೇಕು ಮತ್ತು ಗ್ರಾಮಸ್ಥರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಡೆಂಘೀ ಜ್ವರದ ಲಕ್ಷಣಗಳು

ಹೆಚ್ಚಿನ ಜ್ವರ ಉಂಟಾಗುವುದು, ಕಣ್ಣುಗಳಲ್ಲಿ ನೋವು, ಜೊತೆಗೆ ವಿಪರೀತವಾದ ತಲೆನೋವು, ಕೀಲುನೋವು, ಊದಿಕೊಳ್ಳುವ ಗ್ರಂಥಿಗಳು, ಸ್ನಾಯುಗಳ ಸೆಳೆತ, ವಾಂತಿ ಕಾಣಿಸಿಕೊಳ್ಳುತ್ತದೆ.

ಮುಂಡರಗಿ ತಾಲೂಕಿನಾದ್ಯಂತ ಅತಿಯಾದ ಮಳೆಯಿಂದಾಗಿ 124 ಜನರಲ್ಲಿ ತೀವ್ರ ಜ್ವರ ಉಂಟಾದಾಗ ಡೆಂಘಿಘೀಯ ತಪಾಸಣೆ ನಡೆಸಿದ್ದು, ಅವರಲ್ಲಿ 12 ಜನರಲ್ಲಿ ಡೆಂಘಿಘೀ ದೃಢಪಟ್ಟಿದ್ದು ಚಿಕಿತ್ಸೆ ನೀಡಲಾಗಿದೆ. ಪ್ರತಿ ಗ್ರಾಮಗಳಲ್ಲಿ ವಾರಕ್ಕೊಮ್ಮೆ ಲಾರ್ವಾ ಸಮೀಕ್ಷೆ ಮಾಡಿಸಲಾಗುತ್ತಿದೆ. ಗ್ರಾಮಗಳಲ್ಲಿ ಡೆಂಘಿಘೀ ನಿಯಂತ್ರಣಕ್ಕಾಗಿ ಜಾಗೃತಿಯನ್ನು ಮೂಡಿಸುವುದು, ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಲಾಗುತ್ತಿದೆ ಅಂತ ಮುಂಡರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ ಟಿ.ಎಸ್‌. ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios