ಕೊರೋನಾ ನಡುವೆಯೇ ಹೆಚ್ಚುತ್ತಿದೆ ಡೆಂಘೀ, ಮಲೇರಿಯಾ ಭೀತಿ

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಕೊರೋನಾ ಸೋಂಕು ಜತೆ ಡೆಂಘಿ, ಮಲೇರಿಯಾ ಪ್ರಕರಣ ಸೇರಿ ಚಿಕಿತ್ಸಾ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ.

 

Dengue cases increase in dakshina kannada in midst of corona fear

ಮಂಗಳೂರು(ಮೇ.07): ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಕೊರೋನಾ ಸೋಂಕು ಜತೆ ಡೆಂಘಿ, ಮಲೇರಿಯಾ ಪ್ರಕರಣ ಸೇರಿ ಚಿಕಿತ್ಸಾ ವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 24 ಗಂಟೆಯೊಳಗೆ ಕೊರೋನಾ ಸೋಂಕು ಪ್ರಕರಣಗಳ ಪಾಸಿಟಿವ್‌-ನೆಗೆಟಿವ್‌ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್‌ ಹೇಳಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯ ಸಮನ್ವಯ ಸಮಿತಿ ಆಶ್ರಯದಲ್ಲಿ ಮಂಗಳವಾರ ಪುತ್ತೂರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಮತ್ತು ಖಾಸಗಿ ವೈದ್ಯರಿಗೆ ಡೆಂಘಿ, ಮಲೇರಿಯಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರು ನಗರ ಸುತ್ತಿದ್ದ ಕಾಡುಕೋಣ ಕುಸಿದು ಬಿದ್ದು ಸಾವು, ಇಲ್ಲಿವೆ ಫೋಟೋಸ್

ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಈಗಾಗಲೇ ಒಂದು ಡೆಂಘಿ ಪ್ರಕರಣ ದಾಖಲಾಗಿದೆ. 20 ಮಂದಿ ಡೆಂಘಿ ಶಂಕಿತ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಲ್ನಾಡು ಗ್ರಾಮದ 15 ಶಂಕಿತ ಡೆಂಘಿ ಪ್ರಕರಣಗಳು ದಾಖಲಾಗಿದೆ.

ಸೀಮಂತದಿಂದ ಬಾದಾಮಿಯಲ್ಲಿ 12 ಮಂದಿಗೆ ಸೋಂಕು!

ಪಾಣಾಜೆ, ತಿಂಗಳಾಡಿ, ಕಡಬ, ಉಪ್ಪಿನಂಗಡಿ ಭಾಗದಲ್ಲಿಯೂ ಡೆಂಘಿ ಶಂಕಿತ ಪ್ರಕರಣಗಳು ಕಂಡುಬಂದಿವೆ. ಕೊರೋನಾ, ಡೆಂಘಿ ಹಾಗೂ ಮಲೇರಿಯಾ ಒಟ್ಟಾಗಿ ಬಂದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನತೆ ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ ಎಂದು ಹೇಳಿದರು. ಶಾಸಕ ಸಂಜೀವ ಮಠಂದೂರು, ಉಪವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ್‌, ತಹಸೀಲ್ದಾರ್‌ ರಮೇಶ್‌ ಬಾಬು ಮತ್ತಿತರರಿದ್ದರು.

Latest Videos
Follow Us:
Download App:
  • android
  • ios